SUDDILIVE || SHIVAMOGGA
ಪ್ರೇಮದ ಹೆಸರಲ್ಲಿ ಕಿರುಕುಳ, ಜೀವ ಬೆದರಿಕೆ: ಆಟೋ ಚಾಲಕನ ವಿರುದ್ಧ ದೂರು- Harassment, life threats in the name of love: Complaint against auto driver
ಪ್ರೇಮದ ಹೆಸರಲ್ಲಿ ಮಹಿಳೆಗೆ ಕಿರುಕುಳ ನೀಡಿ, ಮದುವೆಯಾಗುವಂತೆ ಒತ್ತಾಯಿಸಿ, ಹಣ ಪಡೆದು ವಾಪಸ್ ನೀಡದೇ ಜೀವ ಬೆದರಿಕೆ ಹಾಕಿದ ಆರೋಪದಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ 39 ವರ್ಷದ ಆರ್ ಎಂ ಎಲ್ ನಗರದ ನಿವಾಸಿಯಾದ ಮಹಿಳೆ ನೀಡಿದ ದೂರಿನ ಪ್ರಕಾರ, ಸುಮಾರು 18 ವರ್ಷಗಳ ಹಿಂದೆ ಅವರ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಮಸೀದಿಯಲ್ಲಿ ಮೊದಲನೇ ಗಂಡನಿಂದ ಖುಲಾ (ವಿಚ್ಛೇದನ) ಪಡೆದಿದ್ದರು. ಒಂದು ಬ್ಯೂಟಿ ಪಾರ್ಲರ್ ನ್ನೂ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಈ ವೇಳೆ ಹಳೆ ಮಂಡ್ಲಿಯ ನಿವಾಸಿ ಇರ್ಫಾನ್ ಎಂಬಾತನ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇರ್ಫಾನ್ ವಿವಿಧ ಕಾರಣಗಳನ್ನು ಹೇಳಿ ಹಂತ ಹಂತವಾಗಿ ಸುಮಾರು ₹40 ಸಾವಿರ ಹಣ ಪಡೆದುಕೊಂಡಿದ್ದನು ಎನ್ನಲಾಗಿದೆ. ಬಳಿಕ ಇರ್ಫಾನ್ ಗೆ ಮಹಿಳೆ ಮದುವೆಗೆ ಒತ್ತಾಯಿಸಿದಾಗ ಮಕ್ಕಳನ್ನ ಬಿಟ್ಟು ಬಾ ಮದುವೆಯಾಗುವಂತೆ ತಗಾದೆ ತೆಗೆದಿದ್ದಾನೆ, ಮಹಿಳೆ ನಿರಾಕರಿಸಿದಾಗ ಗಲಾಟೆ ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮೇ 23ರಂದು ಬೆಳಿಗ್ಗೆ ಆರ್‌ಎಂಎಲ್ ನಗರದಲ್ಲಿರುವ ಮಹಿಳೆಯ ಮನೆಗೆ ಬಂದ ಆರೋಪಿಯು, ತನ್ನೊಂದಿಗೆ ಬಾರದಿದ್ದರೆ ಮಹಿಳೆ ಹಾಗೂ ಮಕ್ಕಳನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಅಲ್ಲದೆ ಮಹಿಳೆಯ ಕೈ ಹಿಡಿದು ಎಳೆದಾಡಿ, ತಲೆಗೆ ಹೊಡೆದಿರುವುದಾಗಿಯೂ ಆರೋಪಿಸಲಾಗಿದೆ. ಸ್ಥಳೀಯರು ಮಧ್ಯಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ ಎನ್ನಲಾಗಿದೆ.
ಘಟನೆಯ ನಂತರವೂ ಆರೋಪಿ ಮಹಿಳೆಯನ್ನು ಹಿಂಬಾಲಿಸುವುದು, ಮನೆ ಬಳಿ ಬರುವುದು ಹಾಗೂ ಮಕ್ಕಳನ್ನ ಬಿಟ್ಟು ಬರುವಂತೆ. ಒತ್ತಾಯಿಸುತ್ತಾ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ವೇಳೆ ಮಹಿಳೆಯ ಮೊದಲ ಪತಿ 20 ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು.
Harassment, life threats in the name of love: Complaint against auto driver

