SUDDILIVE || SHIVAMOGGA
ನರಸಿಂಹ ಯಾನೆ ದಾಸನ ಹತ್ಯೆಗೆ ಅಂಬು ಅಂಡ್ ಗ್ಯಾಂಗ್ ನಿಂದ ದಾಳಿ-ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ-Ambu and gang attack Narasimha alias Das's murder - special team formed to find the culprit
ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾದ ಫಿಶ್ ಮಾರುಕಟ್ಟೆಯ ಬಳಿಯ ಮನೆಯೊಂದರಲ್ಲಿದ್ದ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಹತ್ಯೆಗೀಡಾದ ವ್ಯಕ್ತಿಯನ್ನು ಗೋವಿಂದಪುರ ಗ್ರಾಮದ ನಿವಾಸಿ ನರಸಿಂಹ ಅಲಿಯಾಸ್ ದಾಸ (42)ನಾಗಿದ್ದಾನೆ. ಗುರುವಾರ ಸಂಜೆ 4.30ರಿಂದ 4.45ರ ಅವಧಿಯಲ್ಲಿ ಲಷ್ಕರ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಅನಿಲ್ ಅಲಿಯಾಸ್ ಅಂಬು ಸೇರಿದಂತೆ ಇತರರು ಮಾರಕಾಸ್ತ್ರಗಳೊಂದಿಗೆ ಬಂದು ನರಸಿಂಹನ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವಿಶೇಷ ತಂಡ
ಈ ಸಂಬಂಧ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.125/2026 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಶೀಘ್ರ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ನೇಮಿಸಲಾಗಿದೆ. ಆರೋಪಿಗಳ ಪತ್ತೆ ಹಾಗೂ ಬಂಧನಕ್ಕೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಕ್ಲೋಸ್ ಆಗಿದ್ದ ಅಡ್ಡ ಮತ್ತೆ ಓಪನ್ ಆಗಿತ್ತಾ?
ದಾಸನ ಹತ್ಯೆ ನಡೆಸಿದ ಆರೋಪಿಗಳ ಪತ್ತೆಗೆ ತಂಡ ರಚನೆ ಮತ್ತೊಂದು ಮಗದೊಂದು ನಡೆಯೋದು ಸಹಜ! ಆದರೆ ಇಲ್ಲಿ ಇಸ್ಪೀಟ್ ಆಟ ನಡೆಯುವಾಗಲೇ ಅಂಬು ಮತ್ತು ಇತರರು ಅಟ್ಯಾಕ್ ಮಾಡಿರೋದು ಚರ್ಚೆಗೆ ಬಂದಿದೆ. ಕಳೆದ ಒಂದಿಷ್ಟು ದಿನ ಎಸ್ಪಿ ಸಾಹೇಬರ ಆದೇಶದ ಅಡಿ ಬಂದ್ ಆಗಿತ್ತು ಎನ್ನಲಾದ ಈ ಇಸ್ಪೀಟ್ ಅಡ್ಡ ಮತ್ತೆ ಶುರುವಾಗಿದ್ದಾರೂ ಹೇಗೆ? ಶುರುವಾಗುತ್ತಲೆ ದಾಸನ ನೆತ್ತರು ಹರಿದಿದೆ.
ದಾಸ ಪಾತಾಳಿ ಜೊತೆ ಆಡುತ್ತಿರುವಾಗಲೇ ಹಿಂಬದಿಯಿಂದ ಅಟ್ಟಿಸಿಕೊಂಡು ಬಂದ ಅಂಬು ಗ್ಯಾಂಗ್ ಆಟವಾಡುತ್ತಿದ್ದವರನ್ನ ಓಡಿಸಿ ದಾಸನನ್ನ ಒಂಟಿ ಮಾಡಿ ರಕ್ತದ ಮಡುವಿನಲ್ಲಿ ಮಲಗುವಂತೆ ಮಾಡಿದೆ.
Ambu and gang attack Narasimha alias Das's murder - special team formed to find the culprit

