ಬುರ್ಖಾ ಧರಿಸಿ ಬಂದು ಮಹಿಳೆಯ ಹತ್ಯೆಗೆ ಯತ್ನ ಪ್ರಕರಣ, ದೂರು ಪ್ರತಿದೂರು ದಾಖಲು- Attempt to Murder a Woman by Assailants Wearing Burqas; Case and Counter-Case Registered

 SUDDILIVE || SHIVAMOGGA

ಬುರ್ಖಾ ಧರಿಸಿ ಬಂದು ಮಹಿಳೆಯ ಹತ್ಯೆಗೆ ಯತ್ನ ಪ್ರಕರಣ, ದೂರು ಪ್ರತಿದೂರು -   Attempt to Murder a Woman by Assailants Wearing Burqas; Case and Counter-Case Registered.

Attempt, murder


ಶಿವಮೊಗ್ಗ: ನಗರದ ಕೆ.ಆರ್.ಪುರಂ ರಸ್ತೆಯ ಮಸೀದಿ ಸಮೀಪ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಮಕ್ಕಳ ಕಳ್ಳರೆಂದು ಭಾವಿಸಿದ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ಪ್ರತಿ ದೂರಿನಲ್ಲಿ‌ಗಾಯಾಳು‌ಅಸ್ಲಾಂ ನೀಡಿದ ದೂರಿನ ಅನ್ವಯ,  ಪ್ರಕರಣದಲ್ಲಿ ಮೊಹಮ್ಮದ್ ಅಸ್ಲಾಂ (25), ಮಹೇಶ್ (20) ಹಾಗೂ ದರ್ಶನ್ (18) ಗಾಯಗೊಂಡಿದ್ದು,  ಇವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ದೂರುದಾರ ಮೊಹಮ್ಮದ್ ಅಸ್ಲಾಂ ನೀಡಿದ ದೂರಿನ ಮೇರೆಗೆ ಮುನಾಫ್ ಯಾನೆ ಮುನ್ನಾ ಎಂಬುವನು ಅಸ್ಲಾಂಗೆ ಪರಿಚಯನಾಗಿದ್ದು ಈತ ಮೊಹಮದ್ ಸಾದಿಕ್ ಯಾನೆ ಸಾತು ನಮಗೆ ಡೀಲ್ ಕೊಟ್ಟಿದ್ದಾನೆ. ಆತನ ಹೆಂಡತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಡೀಲ್ ಕೊಟ್ಟಿದ್ದು, ಆಕೆಯನ್ನ‌ಮುಗಿಸಿ ಸಾತು ಹೆಸರಿನಲ್ಲಿ ಮೆರೆಯಬಹುದು ಎಂದು ಹೇಳಿದ್ದನು. 

ಇದಕ್ಕೆ ಮೂವರು ಒಪ್ಪಿಕೊಂಡು,  ಜೂ.10 ರಂದು ಕೆಆರ್ ಪುರಂನಲ್ಲಿರುವ‌ ಸಾತು ಹೆಂಡತಿ ಮನೆಗೆ ನುಗ್ಗಿದ್ದಾರೆ. ಯಾವಾಗ ಸಾತು ಪತ್ನಿ ಕೂಗಿಕೊಂಡಿದ್ದಾರೆ. ಇವರು ಓಡಿಹೋಗಿದ್ದಾರೆ. ಮಾರಕಾಸ್ತ್ರಗಳನ್ನ ಹಿಡಿದು ಬಂದಿದ್ದ ಮೂವರು ಸಾತು ಪತ್ನಿ ಜೋರಾಗಿ ಕೂಗಿಕೊಳ್ಳಿತ್ತಿದ್ದಂತೆ ಅಲ್ಲಿಂದ ಕಾಲುಕಿತ್ತು ಸಾತು ಪತ್ನಿಯ ಮನೆಯ ಹಿಂಭಾಗದಿಂದ ಓಡಿ ಹೋಗಿದ್ದಾರೆ. 

ಇವರು ಓಡಿಹೋಗುವುದನ್ನ‌ ನೋಡಿ ಸ್ಥಳೀಯರು ಮಕ್ಕಳು ಕಳ್ಳರು ಎಂದು ಹಿಡಿದುಕೊಂಡು ಚೆನ್ನಾಗಿ ಹೊಡೆದಿದ್ದಾರೆ.‌ 15 ರಿಂದ 20 ಮಂದಿ ಅಪರಿಚಿತರ ವಿರುದ್ಧ ಕೊಲೆ ಯತ್ನ ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆಯಲ್ಲಿ ಮೂವರಿಗೂ ಗಾಯಗಳಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ದೊಡ್ಡಪೇಟೆ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109(1), 115(2) ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದಕ್ಕೂ ಮೊದಲು ಸಾತು ಪತ್ನಿ ತಬುಸ್ಸಂ‌ಭಾನು ಪತಿ ಮೊಹಮ್ಮದ್ ಸಾದಿಕ್ ವಿರುದ್ಧ ಕೆಲವು ನ್ಯಾಯಾಲಯದ ಪ್ರಕರಣಗಳು ನಡೆಯುತ್ತಿದ್ದು, ಆ ಪ್ರಕರಣಗಳಿಗೆ ಸಂಬಂಧಿಸಿದ ಹಣದ ವಿಚಾರವಾಗಿ ಆರೋಪಿಗಳು ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಜೂನ್ 10ರಂದು ಮಧ್ಯಾಹ್ನ ಸುಮಾರು 4.15 ಗಂಟೆಗೆ ಸಾತು ಪತ್ನಿ ತಬಸ್ಸುಂ ಬಾನು ಅವರ ಮನೆಯಲ್ಲಿ ಇದ್ದ ವೇಳೆ ಮೂವರು ಯುವಕರು ಬುರ್ಖಾ ಧರಿಸಿಕೊಂಡು ಮನೆಗೆ ನುಗ್ಗಿದ್ದಾರೆ. ಹತ್ಯೆ ಮಾಡುವ ಉದ್ದೇಶದಿಂದ ಚಾಕುಗಳನ್ನು ಹಿಡಿದು ಬಂದಿದ್ದ ಅವರು ದಾಳಿ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ತಬಸ್ಸುಂ ಬಾನು ಹಾಗೂ ಅವರ ತಾಯಿ ಕೂಗಿಕೊಂಡ ಪರಿಣಾಮ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಆರೋಪಿಗಳು ಓಡಿ ಹೋಗುತ್ತಿದ್ದಾಗ ಸ್ಥಳೀಯರು ಅವರನ್ನು ಮಕ್ಕಳ ಕಳ್ಳರು ಎಂದು ಶಂಕಿಸಿ ಹಿಡಿದು ಥಳಿಸಿದ್ದಾರೆ. ಬಳಿಕ ವಿಚಾರಣೆ ವೇಳೆ ಅವರು ಮಕ್ಕಳ ಕಳ್ಳರಲ್ಲ, ತಬಸ್ಸುಂ ಬಾನು ಅವರನ್ನು ಹತ್ಯೆ ಮಾಡಲು ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ದರ್ಶನ್, ಮಹೇಶ್, ಅಸ್ಲಂ, ಮುನ್ನಾ ಹಾಗೂ ಮೊಹಮ್ಮದ್ ಸಾದಿಕ್ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Attempt to Murder a Woman by Assailants Wearing Burqas; Case and Counter-Case Registered

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close