ರಿಜ್ವಾನ್ ಆರ್ಷದ್‌ಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿ ಬಳಗದಿಂದ ದರಘಾದಲ್ಲಿ ವಿಷೇಶ ಪೂಜೆ- Special Prayers Offered at Dargah

 SUDDILIVE || SHIVAMOGGA

ರಿಜ್ವಾನ್ ಆರ್ಷದ್‌ಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿ ಬಳಗದಿಂದ ದರಘಾದಲ್ಲಿ ವಿಷೇಶ ಪೂಜೆ-Special Prayers Offered at Dargah by Fans Demanding Ministerial Berth for Rizwan Arshad

Rizwan, arshad

Rizwan, arshad

ಶಿವಮೊಗ್ಗ: ಯುವ ನಾಯಕ ಹಾಗೂ ಶಾಸಕ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿ ಸಚಿವರನ್ನಾಗಿ ನೇಮಿಸಬೇಕು ಎಂದು ರಿಜ್ವಾನ್ ಆರ್ಷದ್ ಅಭಿಮಾನಿ ಬಳಗ ಒತ್ತಾಯಿಸಿದೆ.

ಬಳಗದ ಅಧ್ಯಕ್ಷ ಆರೀಫ್ ನೇತೃತ್ವದಲ್ಲಿ ಇಂದು ನಗರದ ಮಹಾವೀರ ವೃತ್ತದಲ್ಲಿರುವ ದರ್ಗಾದಲ್ಲಿ ಚಾದರ ಹಾಸಿ, ಹೂವಿನ ಹಾರ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರೀಫ್, ರಿಜ್ವಾನ್ ಆರ್ಷದ್ ಅವರು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಪಕ್ಷದ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಬಳ್ಳಾರಿ ಲೋಕಸಭಾ ಚುನಾವಣೆ, ಹಾನಗಲ್–ಸವಣೂರು ಹಾಗೂ ದಾವಣಗೆರೆ ವಿಧಾನಸಭಾ ಉಪಚುನಾವಣೆಗಳಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ರಾಜ್ಯದಾದ್ಯಂತ ಅನೇಕ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿರುವ ಅವರು ಅಲ್ಪಸಂಖ್ಯಾತ ಸಮುದಾಯದ ಯಶಸ್ವಿ ಯುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನಾಯಕ ಅವರು ಯುವ ನಾಯಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿಯೂ ಯುವಕರನ್ನು ಪಕ್ಷದತ್ತ ಸೆಳೆಯುವ ಸಾಮರ್ಥ್ಯ ಹೊಂದಿರುವ ರಿಜ್ವಾನ್ ಆರ್ಷದ್ ಅವರಿಗೆ ಸಚಿವ ಸ್ಥಾನ ನೀಡಿ, ಮಹತ್ವದ ಖಾತೆಯ ಜವಾಬ್ದಾರಿ ನೀಡಬೇಕು. ಇದರಿಂದ ರಾಜ್ಯದ ಯುವಶಕ್ತಿಗೆ ಪ್ರೇರಣೆ ದೊರೆಯಲಿದೆ ಎಂದು ಅಭಿಮಾನಿ ಬಳಗ ಮನವಿ ಮಾಡಿದೆ.

ಈ ವೇಳೆ ಆರೀಫ್, ಮುಜೀಬ್ ಉಲ್ಲಾ, ಅನ್ನು, ಮುನ್ನಾ, ಇತರರು ಉಪಸ್ಥಿತರಿದ್ದರು. 

Special Prayers Offered at Dargah

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close