ಆಗುಂಬೆಯಲ್ಲಿ ಇನೋವಾ ಕಾರಿನಲ್ಲಿ ಗೋ ಕಳ್ಳತನ - ಬೆನ್ನಟ್ಟಿದ ಸ್ಥಳೀಯ ಯುವಕರು – ದನಗಳೊಂದಿಗೆ ಪರಾರಿಯಾದ ಕಳ್ಳರು! Cow theft in Innova car in Agumbe - Local youths chased - Thieves fled with cattle!

SUDDILIVE || THIRTHAHALLI

ಆಗುಂಬೆಯಲ್ಲಿ ಇನೋವಾ ಕಾರಿನಲ್ಲಿ ಗೋ ಕಳ್ಳತನ - ಬೆನ್ನಟ್ಟಿದ ಸ್ಥಳೀಯ ಯುವಕರು – ದನಗಳೊಂದಿಗೆ ಪರಾರಿಯಾದ ಕಳ್ಳರು! Cow theft in Innova car in Agumbe - Local youths chased - Thieves fled with cattle!    

Cow, theft

ತೀರ್ಥಹಳ್ಳಿ: ಆಗುಂಬೆ ಹೋಬಳಿಯ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಕೋಡು ಭಾಗದಲ್ಲಿ ಬೆಳಗಿನ  ಜಾವ ಸುಮಾರು 3 ಗಂಟೆ ವೇಳೆಗೆ ಗೋ ಕಳ್ಳತನದ ಘಟನೆ ನಡೆದಿದೆ.

ಇನೋವಾ ಕಾರಿನಲ್ಲಿ ಬಂದಿದ್ದ ಕಳ್ಳರು ಸ್ಥಳೀಯರ ಜಾನುವಾರುಗಳನ್ನು ಕಳವು ಮಾಡಿ ವಾಹನದಲ್ಲಿ ಮೂರರಿಂದ ನಾಲ್ಕು ದನಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನವನ್ನು ಗಮನಿಸಿದ ಸ್ಥಳೀಯ ಯುವಕರು ಕೂಡಲೇ ಬೆನ್ನಟ್ಟಿದ್ದಾರೆ. ಆದರೆ ವೇಗವಾಗಿ ಚಲಿಸಿದ ಇನೋವಾ ಕಾರು ಯುವಕರ ಕಣ್ಣುತಪ್ಪಿಸಿ ದನಗಳೊಂದಿಗೆ ಪರಾರಿಯಾಗಿದೆ.

ಕಾರಿನ ನಂಬರ್ ವಿಡಿಯೋ ದಲ್ಲಿ ಸೆರೆಯಾಗಿದ್ದು ಕೂಡಲೇ  ಆರೋಪಿಗಳನ್ನು ಬಂಧಿಸಿ ಕಳುವಾದ ಜಾನುವಾರುಗಳನ್ನು ಪತ್ತೆಹಚ್ಚುವಂತೆ ಸ್ಥಳೀಯರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

Cow theft in Innova car in Agumbe - Local youths chased - Thieves fled with cattle!

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close