SUDDILIVE || SHIVAMOGGA
ಜಮೀನಿಗೆ ಅತಿಕ್ರಮಣ ಪ್ರವೇಶ ಬಿತ್ತು ಜಾತಿನಿಂದನೆ ಪ್ರಕರಣ-Encroachment on land, caste abuse case
ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ಮಹಿಳೆಯರ ವಿರುದ್ಧ ಜಾತಿ ನಿಂದನೆ ಆರೋಪದ ಅಡಿ ಅಯೂಬ್ ಖಾನ್, ಪುತ್ರ ಮಾಜ್ ಖಾನ್ ಜೆಸಿಬಿ ಚಾಲಕ ಗೋವಿಂದ ಹಾಗೂ ಇತರೆ 8-10 ಜನರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ತಿಳಿಸಿರುವಂತೆ, ದೂರುದಾರರಾದ ನಿರ್ಮಲ ಎಂಬ ಮಹಿಳೆಯ ಅಜ್ಜರಿಗೆ ಇದ್ದ ಶಿವಮೊಗ್ಗ ತಾಲೂಕಿನ ಅನುಪಿನ ಕಟ್ಟೆಯ ಸರ್ವೆ ನಂಬರ್ 125 ರಲ್ಲಿಮೂರು ಎಕರೆ ಜಮೀನಿತ್ತು. ಮೂರು ಎಕರೆ ಜಮೀನು ಅಜ್ಜನ ಕಾಲದ ನಂತರ ಅಜ್ಜಿಗೆ ಬಂದಿತ್ತು. ನಂತರ ಅಜ್ಜನ ಪತ್ನಿ ರಾಜಮ್ಮನವರಿಗೆ ಪೌತಿ ಖಾತೆಯಾಗಿ ವರ್ಗವಾಗಿತ್ತು. ನಿರ್ಮಲ, ಮಂಜುಳ ಹಾಗೂ ಸಹೋದರರಿಗೆ ಪೌತಿ ಖಾತೆಯಾಗಿದೆ. ಈ ಜಮೀನಿನಲ್ಲಿ ಜೋಳ ಬಿತ್ತು ಬಂದಿದ್ದರು.
ನಿನ್ನೆ ಬೆಳಿಗ್ಗೆ ಬಿತ್ತು ಹೋಗಿದ್ದ ಮಹಿಳೆಯರ ಜಮೀನಿನಲ್ಲಿ ಪಕ್ಕದ ಜಮೀನಿನ ಮಾಲೀಕರಾದ ಮೊಹಮದ್ ಅಯೂಬ್ ಖಾನ್, ಪುತ್ರ ಮಾಜ್ ಖಾನ್ ಮತ್ತಿತರು ಸಂಜೆ ಬಂದು ಜೆಸಿಬಿ ಕೆಎ 17 ಎಂಎ 6294 ಕ್ರಮ ಸಂಕ್ಯೆಯಲ್ಲಿ ಜಮೀನಿನ ಬೇಲಿ, ಮನೆ, ಸಿಸಿ ಟಿವಿ ಕ್ಯಾಮೆರಾಗಳನ್ನ ಹಾಳು ಮಾಡಿದ್ದಾರೆ. ಬೆಳೆಯನ್ನ ನಾಶ ಮಾಡಿದ್ದಾರೆ.
ಇದನ್ನ ಕೇಳಲು ಹೋದ ನಿರ್ಮಲರವರ ಮೇಲೆ ಹಲ್ಲೆ ನಡೆಸಿ ಜಾತಿ ಹೆಸರಿನಲ್ಲಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ಮಹಿಳೆಯ ಚಿಕ್ಕಪ್ಪ ಆರ್ಮುಗಂ, ಚಿಕ್ಕಮ್ಮ ರತ್ನಮ್ಮ, ಅತ್ತೆ ಸರೋಜಮ್ಮರವರ ಮೇಲೆ ಅಯೂಬ್ ಖಾನ್, ಅವರ ಪುತ್ರ ಮಾಜ್ ಖಾನ್ ಹಾಗೂ ಇತರರು ದೌರ್ಜನ್ಯ ಮೆರೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ
ಜಾತಿ ನಿಂದನೆಯ ಜೊತೆಗೆ ಸಂತ್ರಸ್ತ ಮಹಿಳೆಯರಿಗೆ ಜೀವ ಬೆದರಿಕೆ ಹಾಕಲಾಗಿದೆ. ಊ ಜಮೀನಿನ ವಿಷಯಕ್ಕೆ ಬಂದರೆ ನಿಮ್ಮನ್ನ ಕೊಂದು ಜಮೀನಿನಲ್ಲಿ ಹೂತು ಹಾಕುವುದಾಗಿ ಬೆದರಿಕೆಹಾಕಿದ್ದಾರೆ.
ಸಮಗ್ರ ತನಿಖೆಗೆ ಆಗ್ರಹ
ಈ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಮಗ್ರ ತನಿಖೆ ನಡೆಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಜಮೀನು ಖರೀದಿ ವ್ಯವಹಾರಗಳಲ್ಲಿ ಸಾರ್ವಜನಿಕರು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನು ಸಲಹೆ ಪಡೆದು ವ್ಯವಹಾರ ನಡೆಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
