ಶಿವಮೊಗ್ಗ: ಪ್ರಧಾನಿ ಮೋದಿ ಸುದೀರ್ಘ ಆಡಳಿತಕ್ಕೆ ವಿಶೇಷ ಪೂಜೆ; ವಿವಿಧ ರಾಜಕೀಯ ವಿದ್ಯಮಾನಗಳ ಕುರಿತು ಸಂಸದರ ಪ್ರತಿಕ್ರಿಯೆSpecial puja for PM Modi's long rule; MPs' reactions on various political developments

 SUDDILIVE || SHIVAMOGGA

ಶಿವಮೊಗ್ಗ: ಶಿವಮೊಗ್ಗ: ಪ್ರಧಾನಿ ಮೋದಿ ಸುದೀರ್ಘ ಆಡಳಿತಕ್ಕೆ ವಿಶೇಷ ಪೂಜೆ; ವಿವಿಧ ರಾಜಕೀಯ ವಿದ್ಯಮಾನಗಳ ಕುರಿತು ಸಂಸದರ ಪ್ರತಿಕ್ರಿಯೆ-Special puja for PM Modi's long rule; MPs' reactions on various political developments    

Secial, puja

ಕೇಂದ್ರದಲ್ಲಿ ಪ್ರಧಾನಿ ಮೋದಿ ದೇಶದ ಚುಕ್ಕಾಣಿ ಹಿಡಿದು ಮೊನ್ನೆ 12 ವರ್ಷ ಕಳೆದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸುದೀರ್ಘ ಅವಧಿಗೆ ದೇಶದ ಪ್ರಧಾನಿಯಾಗಿ ಯಶಸ್ವಿಯಾಗಿ ಹೆಜ್ಜೆ ಇಡುತ್ತಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದರು ಒಟ್ಟಾಗಿ ಕಲ್ಲಹಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪಟಾಕಿ ಸಿಡಿಸಿ ನಂತರ ಸಿಹಿ ಹಂಚಲಾಯಿತು. ಸಸಿಯನ್ನ ಸಹ ದೇವಸ್ಥಾನದ ಆವರಣದಲ್ಲಿ ನೆಡೆಲಾಯಿತು. 

ಈ ವೇಳೆ ಮಾತನಾಡಿದ ಸಂಸದ ರಾಘವೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಗೌರವ ಗಳಿಸುತ್ತಿದ್ದು, ಇನ್ಫ್ರಾಸ್ಟ್ರಕ್ಚರ್ ಹಾಗೂ ರಾಷ್ಟ್ರೀಯತೆ ವಿಚಾರದಲ್ಲಿ ದೇಶವು ಮುನ್ನಡೆಯುತ್ತಿದೆ. 2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದ ಸಂಕಲ್ಪಕ್ಕೆ ವಿಘ್ನೇಶ್ವರನು ಶಕ್ತಿ ತುಂಬಲಿ ಹಾಗೂ ಪ್ರಧಾನಿಯವರಿಗೆ ಮತ್ತಷ್ಟು ಉತ್ತಮ ಆರೋಗ್ಯ, ಸದೃಢತೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು ಎಂದರು. 


ವಿಧಾನ ಪರಿಷತ್ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಗೆಲುವಿನ ವಿಶ್ವಾಸ

ವಿಧಾನ ಪರಿಷತ್ ಚುನಾವಣೆಯ ಕಣ ರಂಗೇರುತ್ತಿರುವ ಬೆನ್ನಲ್ಲೇ, ಮೈತ್ರಿಕೂಟದ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿದ್ದರೂ, ಶಾಸಕರಲ್ಲಿ ಪ್ರಧಾನಿ ಮೋದಿಯವರ ಮೇಲಿರುವ ವಿಶ್ವಾಸದಿಂದಾಗಿ ಬಿಜೆಪಿಯ ಇಬ್ಬರು ಅಧಿಕೃತ ಅಭ್ಯರ್ಥಿಗಳು ಮಾತ್ರವಲ್ಲದೆ, ಜೆಡಿಎಸ್ ಹಾಗೂ ಮೈತ್ರಿ ಹೊಂದಾಣಿಕೆಯ ಮೂರನೇ ಅಭ್ಯರ್ಥಿಯೂ ಕೂಡ ನೂರಕ್ಕೆ ನೂರು ಗೆಲುವು ಸಾಧಿಸಲಿದ್ದಾರೆ ಎಂದು  ತಿಳಿಸಿದರು.

ದೇವೇಗೌಡರಿಗೆ ಅವಮಾನ ಆರೋಪ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಎಚ್.ಡಿ. ದೇವೇಗೌಡ ಅವರಿಗೆ ಬಿಜೆಪಿ ಮೈತ್ರಿಕೂಟದಿಂದ ಅನ್ಯಾಯ ಹಾಗೂ ಅವಮಾನವಾಗಿದೆ ಎಂಬ ಕಾಂಗ್ರೆಸ್ ಆರೋಪವನ್ನು ಮೈತ್ರಿ ನಾಯಕರು ಹಾಗೂ ಸಂಸದರು ತಳ್ಳಿಹಾಕಿದ್ದಾರೆ. ದೇವೇಗೌಡರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಂಡ ಏಕೈಕ ನಾಯಕರೆಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್‌ನ ಈ ರಾಜಕೀಯ ಆರೋಪಗಳಿಗೆ ಸ್ವತಃ ದೇವೇಗೌಡರೇ ಪತ್ರಿಕಾಗೋಷ್ಠಿ ನಡೆಸಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.


ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಗ್ಗೆ ಪದೇ ಪದೇ ಆರೋಪ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮೈತ್ರಿ ನಾಯಕರು ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್ ವಿಚಾರವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಮತ್ತು ಅದರ ಪ್ರತಿಫಲವಾಗಿಯೇ ಇಂದು ದೇಶ ಮುನ್ನಡೆಯುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ಹಾಗೂ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

ಶಿವಮೊಗ್ಗ ವಿಮಾನ ನಿಲ್ದಾಣದ ಸಮಸ್ಯೆ: ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ವಿಳಂಬವಾಗುತ್ತಿರುವುದಕ್ಕೆ ರಾಜ್ಯ ಸರ್ಕಾರದ ಧೋರಣೆಯೇ ಕಾರಣ ಎಂದು ಆರೋಪಿಸಲಾಗಿದೆ. ಕೇವಲ 26 ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಸರ್ಕಾರ ಇಷ್ಟೊತ್ತಿಗಾಗಲೇ ಮುಗಿಸಬಹುದಿತ್ತು. ಮಳೆಗಾಲದಲ್ಲಿ ವಿಸಿಬಿಲಿಟಿ ಸಮಸ್ಯೆಯಿಂದಾಗಿ ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ನೀಡುತ್ತಿದ್ದ ವಯಬಿಲಿಟಿ ಫಂಡಿಂಗ್ ಅನ್ನು ಈ ಸರ್ಕಾರ ನೀಡುತ್ತಿಲ್ಲ. ಇನ್ಮುಂದೆ ಶಿವಮೊಗ್ಗ-ಬೆಂಗಳೂರು ವಿಮಾನಯಾನವನ್ನು ಕೇಂದ್ರ ಸರ್ಕಾರದ 'ಉಡಾನ್-4' ಯೋಜನೆಯಡಿ ಸೇರಿಸಿ, ವಿಮಾನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಸೊರಬ ರಾಜಕೀಯ: ಭಿನ್ನಾಭಿಪ್ರಾಯಗಳ ಶೀಘ್ರ ಶಮನ

ಸೊರಬ ಕ್ಷೇತ್ರದಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ನಡುವೆ ಹೊಂದಾಣಿಕೆಯ ಕೊರತೆ ಎದ್ದುಕಾಣುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಾಯಕರು, "ಒಂದು ಕುಟುಂಬ ಎಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಸೊರಬದ ಸ್ಥಳೀಯ ರಾಜಕೀಯ ವಿಚಾರಗಳನ್ನು ಪಕ್ಷದ ಹಿರಿಯ ನಾಯಕರು ಶೀಘ್ರದಲ್ಲೇ ಮಾತುಕತೆಯ ಮೂಲಕ ಬಗೆಹರಿಸಲಿದ್ದಾರೆ," ಎಂದು ತಿಳಿಸಿದರು.

Special puja for PM Modi's long rule; MPs' reactions on various political developments 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close