ಸಡಗರ ಸಂಭ್ರಮದೊಂದಿಗೆ ನಡೆಯುತ್ತಿರುವ ಈಶ್ವರಪ್ಪನವರ ಹುಟ್ಟುಹಬ್ಬ-Eshwarappa's birthday is being celebrated with great enthusiasm

SUDDILIVE || SHIVAMOGGA

ಸಡಗರ ಸಂಭ್ರಮದೊಂದಿಗೆ ನಡೆಯುತ್ತಿರುವ ಈಶ್ವರಪ್ಪನವರ ಹುಟ್ಟುಹಬ್ಬ-Eshwarappa's birthday is being celebrated with great enthusiasm    

Eshwarappa, birthday





ಶಿವಮೊಗ್ಗ, ಜೂನ್ 10: ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಸ್ಥಾಪಕರಾದ ಕೆ.ಎಸ್.ಈಶ್ವರಪ್ಪನವರ 78ನೇ ವರ್ಷದ ಜನ್ಮದಿನವನ್ನು ಶಿವಮೊಗ್ಗದಲ್ಲಿನ ಸ್ವಗೃಹದಲ್ಲಿ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ಜನ್ಮದಿನದ ಅಂಗವಾಗಿ ಬೆಳಿಗ್ಗೆ 108 ಮಂದಿ ವೈದಿಕರಿಂದ ರುದ್ರಪಠಣ ಕಾರ್ಯಕ್ರಮ ನಡೆಯಿತು. ಇದೇ ವೇಳೆ 504 ಜೋಡಿಗಳಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪಾರಾಯಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮನೆಯಲ್ಲಿ ವಿಪ್ರರಿಂದ ವಿಶೇಷ ಪೂಜೆ ನೆರವೇರಿದರೆ, ಮನೆಯ ಪಕ್ಕದ ಖಾಲಿ ಜಾಗದಲ್ಲಿ ಜರ್ಮನ್ ಟೆಂಟ್ ನಿರ್ಮಿಸಿ ಭಕ್ತರ ಭಾಗವಹಿಸುವಿಕೆಯಲ್ಲಿ ಸತ್ಯನಾರಾಯಣ ಪೂಜೆ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಈಶ್ವರಪ್ಪ ಅವರು, ಅವರ ಪತ್ನಿ ಜಯಂತಿ, ಪುತ್ರ ಕಾಂತೇಶ್ ಹಾಗೂ ಕುಟುಂಬ ಸದಸ್ಯರು ಸಂಪ್ರದಾಯಬದ್ಧವಾಗಿ ಪಾಲ್ಗೊಂಡು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದರು. ಕುಟುಂಬದ ಸದಸ್ಯರಿಗೆ ಹಿರಿಯರು ಹಾಗೂ ವಿವಿಧ ಮಠಾಧೀಶರು ಆಶೀರ್ವಾದ ನೀಡಿದರು.

ಸ್ವಾಮೀಜಿಗಳ ಸಾನ್ನಿಧ್ಯ

ಕಾರ್ಯಕ್ರಮಕ್ಕೆ ಹಲವು ಮಠಗಳ ಸ್ವಾಮೀಜಿಗಳು ಆಗಮಿಸಿ ಆಶೀರ್ವಚನ ನೀಡಿದರು. ಪೇಜಾವರ ಮಠದ Prasanna Teertha Swamiji ಸೇರಿದಂತೆ ಮಾದರ ಚೆನ್ನಯ್ಯ ಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ರಾಜೇಂದ್ರ ಮಹಾಸ್ವಾಮಿಗಳು, ಬಿಳಕಿ ಮಠದ ಶ್ರೀಗಳು, ಆದಿಚುಂಚನಗಿರಿ ಮಠದ ನಾದಮಯಾನಂದ ಶ್ರೀಗಳು ಭಾಗಿಯಾಗಿದ್ದಾರೆ. ಬಿಳಕಿ ಸ್ವಾಮೀಜಿಯವರ ಆಗಮನವನ್ನ ನಿರೀಕ್ಷಿಸಲಾಗುತ್ತಿದೆ. 

ಆರ್ ಎಸ್ ಎಸ್ ನ ಪಟ್ಟಾಭಿರಾಮ್, ಎಂಎಲ್ ಸಿ ಡಿ.ಎಸ್ ಅರುಣ್ ಮೊದಲಾದವರು ಭಾಗಿಯಾಗಿದ್ದರು. 

ವಿವಿಧ ಸಂಘಟನೆಗಳ ಸಹಯೋಗ

ಮಾರಿಕಾಂಬ ಟ್ರಸ್ಟ್, ಅಭಿಮಾನಿ ಬಳಗ, ಸವಿತಾ ಸಮಾಜ, ಶ್ರೀಗಂಧ ಸಂಘಟನೆ ಹಾಗೂ ರಾಷ್ಟ್ರಭಕ್ತರ ಬಳಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಜನ್ಮದಿನ ಆಚರಣೆಯಲ್ಲಿ ನೂರಾರು ಭಕ್ತರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ಈಶ್ವರಪ್ಪ ಅವರಿಗೆ ಶುಭಾಶಯ ಕೋರಿದರು. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಶೀರ್ವಾದ ಸಮಾರಂಭಗಳ ಮೂಲಕ ದಿನವಿಡೀ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close