SUDDILIVE ||SHIVAMOGGA
ಬಾಳೆಬರೇ ಘಾಟಿಯಲ್ಲಿ ಶ್ರೀ ದುರ್ಗಾಂಬ ಬಸ್‌ಗೆ ಬೆಂಕಿ ಅವಘಡ-Fire Accident Involving Sri Durgamba Bus at Balebare Fire Accident Involving Sri Durgamba Bus at Balebare Ghat
ಹೊಸನಗರ: ಶಿವಮೊಗ್ಗ–ಉಡುಪಿ ಗಡಿ ಭಾಗದ ಬಾಳೆಬರೇ ಘಾಟಿಯಲ್ಲಿ ಶನಿವಾರ ಶ್ರೀ ದುರ್ಗಾಂಬ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬಸ್ ಬಹುತೇಕ ಸುಟ್ಟು ಕರಕಲಾದ ಘಟನೆ ನಡೆದಿದೆ. ಸಮಯಪ್ರಜ್ಞೆಯಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕುಂದಾಪುರದ ಕಡೆಗೆ ತೆರಳುತ್ತಿದ್ದ ಶ್ರೀ ದುರ್ಗಾಂಬ ಬಸ್ ಚಂಡಿಕಾಂಬ ದೇವಸ್ಥಾನದ ಸಮೀಪ ನಿಗದಿತ ಸ್ಥಳದಲ್ಲಿ ನಿಂತಿತ್ತು. ಈ ವೇಳೆ ಸುಮಾರು 17 ಮಂದಿ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿಂದ ಕುಂದಾಪುರದತ್ತ ಹೊರಟ ಕೆಲವೇ ಕ್ಷಣಗಳಲ್ಲಿ ಬಸ್‌ನ ಸೆನ್ಸಾರ್ ಬಾಕ್ಸ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸೈರನ್ ಹೊಡೆದುಕೊಂಡಿದೆ. ಅಲರ್ಟ್ ಆದ ಚಾಲಕ ಹಾಗೂ ಸಿಬ್ಬಂದಿ ಪ್ರಯಾಣಿಕರನ್ನು ಬಸ್‌ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಬಳಿಕ ಬೆಂಕಿ ವೇಗವಾಗಿ ವ್ಯಾಪಿಸಿ ಸಂಪೂರ್ಣ ಬಸ್ ಅನ್ನು ಆವರಿಸಿದ್ದು, ಬಸ್ ಬಹುತೇಕ ಸುಟ್ಟು ಕರಕಲಾಗಿದೆ.
ಸಮಯೋಚಿತ ಕ್ರಮದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದ್ದು, ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.


