ಈಗ ಸಧ್ಯಕ್ಕೆ ಕೆ.ಜೆ ಜಾರ್ಜ್ ಉಸ್ತುವಾರಿ ಸಚಿವರು, ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ-ಮಧು ಬಂಗಾರಪ್ಪ- K.J. George is the caretaker minister for now, cabinet expansion to take place soon - Madhu Bangarappa

 SUDDILIVE || SHIVAMOGGA

ಈಗ ಸಧ್ಯಕ್ಕೆ ಕೆ.ಜೆ ಜಾರ್ಜ್ ಉಸ್ತುವಾರಿ ಸಚಿವರು, ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ-ಮಧು ಬಂಗಾರಪ್ಪ- K.J. George is the caretaker minister for now, cabinet expansion to take place soon - Madhu Bangarappa   

Mahu, bangarappa

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಕೆ.ಜೆ. ಜಾರ್ಜ್ ಅವರು ಜಿಲ್ಲೆಯ ಮಳೆ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಲು ನಾಳೆ ಜಿಲ್ಲೆಗೆ ಭೇಟಿ ನೀಡುತ್ತಿರುವುದನ್ನು ಮಾಜಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ 

ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಜಾರ್ಜ್ ಅವರು ಜಿಲ್ಲೆಯ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ರಾಮಮಂದಿರ ದೇಣಿಗೆ ದುರ್ಬಳಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಧು ಬಂಗಾರಪ್ಪ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತ ಪಡೆದು ಬಳಿಕ ಕಳ್ಳರು ಯಾರು ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ದೇವರ ಹುಂಡಿಗೆ ದೊಡ್ಡ ಸಾಚಾ ಎಂದು ಹೇಳಿಕೊಳ್ಳುವವರೇ ಕೈ ಹಾಕುತ್ತಿರುವುದು ದೇಶದ ದುರಂತ ಎಂದು ಟೀಕಿಸಿದ ಅವರು, ರಾಮನ ಹೆಸರಿನಲ್ಲಿ ಬಿಜೆಪಿ ಕೊಳ್ಳೆ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ ಅವರು, ಕಾಂಗ್ರೆಸ್ ರಾಮನಿಗೆ ವಿರೋಧಿಯಲ್ಲ, ಆದರೆ ರಾಮನ ಹೆಸರಿನಲ್ಲಿ ನಡೆಯುವ ದುರ್ಬಳಕೆಗೆ ವಿರೋಧಿಯಾಗಿದೆ ಎಂದು ಸ್ಪಷ್ಟಪಡಿಸಿದರು.

SIR ಕುರಿತು ಕಾಂಗ್ರೆಸ್ ನಿಲುವು

ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ (SIR) ಕುರಿತು ಮಾತನಾಡಿದ ಅವರು, ಕಾಂಗ್ರೆಸ್ SIR ಅನ್ನು ಸ್ವಾಗತಿಸುತ್ತದೆ ಆದರೆ ಪಶ್ಚಿಮ ಬಂಗಾಳ ಮತ್ತು ಬಿಹಾರದ ಉದಾಹರಣೆಗಳನ್ನು ಉಲ್ಲೇಖಿಸಿ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹಾಳು ಮಾಡುವ ರಾಜಕೀಯ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಪ್ರಜಾಪ್ರಭುತ್ವದಲ್ಲಿ ಪರ-ವಿರೋಧ ಇರಬೇಕು, ಆದರೆ ಅದು ಪ್ರಾಮಾಣಿಕವಾಗಿರಬೇಕು, ಕೆಟ್ಟ ಉದ್ದೇಶದಿಂದ ಕೂಡಿರಬಾರದು ಎಂದು ಹೇಳಿದರು.

10-15 ದಿನಗಳಲ್ಲಿ ಸಂಪುಟ ವಿಸ್ತರಣೆ ಸಾಧ್ಯತೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ವಿದೇಶದಿಂದ ಮರಳಿದ ಬಳಿಕ 10 ರಿಂದ 15 ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು. ಸಚಿವ ಸ್ಥಾನದಲ್ಲಿ ನೀವು ಮುಂದುವರೆಯುವಿರಾ ಎಂದು  ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ತಾವು ಬದ್ಧರಾಗಿದ್ದು, ಪಕ್ಷವೇ ಮುಖ್ಯ, ವೈಯಕ್ತಿಕ ಅಧಿಕಾರ ಮುಖ್ಯವಲ್ಲ ಎಂದು ಹೇಳಿದರು.

NEP ವಿರುದ್ಧ ಟೀಕೆ

ರಾಷ್ಟ್ರೀಯ ಶಿಕ್ಷಣ ನೀತಿ (NEP) ಕುರಿತು ಮಾತನಾಡಿದ ಮಧು ಬಂಗಾರಪ್ಪ, ಅದರ ಬಲವಂತದ ಅನುಷ್ಠಾನವನ್ನು ತೀವ್ರವಾಗಿ ವಿರೋಧಿಸಿದರು. ಇದು ಗ್ರಾಮೀಣ ಭಾಗದ ಅಭಿವೃದ್ಧಿಗೆ ಅಡ್ಡಿಯಾಗುವುದರ ಜೊತೆಗೆ ರಾಜ್ಯಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹಾಕುತ್ತದೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ವಿಭಿನ್ನ ಸರ್ಕಾರಗಳಿದ್ದರೆ, ಕೇಂದ್ರವು ರಾಜ್ಯಗಳಿಗೆ ಅನುದಾನ ನೀಡದೆ ರಾಜ್ಯದ ಆರ್ಥಿಕತೆಗೆ ಹೊರೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.

NEET-TET ಅಕ್ರಮ: 'ಡಬಲ್ ಇಂಜಿನ್ ಸರ್ಕಾರ ಡಬಲ್ ಕೊಳ್ಳೆ'

ಮಹಾರಾಷ್ಟ್ರದಲ್ಲಿ ನಡೆದಿರುವ NEET ಹಾಗೂ TET ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, "ಡಬಲ್ ಇಂಜಿನ್ ಸರ್ಕಾರ ಡಬಲ್ ಕೊಳ್ಳೆ ಹೊಡೆಯುತ್ತಿದೆ" ಎಂದು ಆರೋಪಿಸಿದರು. ಬಿಜೆಪಿ ಮುಖಂಡರೇ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಇಂತಹ ಘಟನೆಗಳು ಮಕ್ಕಳ ಭವಿಷ್ಯ ಹಾಳು ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣದ ಮೇಲೆ ರಾಜ್ಯಗಳಿಗೆ ಸಂಪೂರ್ಣ ಹಕ್ಕು ಇರಬೇಕು ಹಾಗೂ NEET ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

RSS ಟ್ವೀಟ್ ಪ್ರಕರಣಕ್ಕೆ ಕಾನೂನುಬದ್ಧ ಉತ್ತರ

ಪ್ರಿಯಾಂಕಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ RSS ಟ್ವೀಟ್ ಸಂಬಂಧ ಹೈಕೋರ್ಟ್ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾನೂನುಬದ್ಧವಾಗಿ ಉತ್ತರ ನೀಡಲಾಗುವುದು ಎಂದು ತಿಳಿಸಿದರು.

ಕಿತ್ತೂರು ಶಾಲೆಗಳ ಅಭಿವೃದ್ಧಿ ಮುಂದುವರಿಕೆ

ಕಿತ್ತೂರು ಶಾಲೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ತಾವು ಸಚಿವರಾಗಿರದಿದ್ದರೂ ಕನಸಿನ ಯೋಜನೆಯಾಗಿ ಕೆಲಸ ಮಾಡಿದ್ದೇನೆ ಎಂದರು. ಈಗಾಗಲೇ ವಿವಿಧ ಯೋಜನೆಗಳಿಗೆ ಡಿಪಿಆರ್‌ಗಳು ಸಿದ್ಧವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯಲಿವೆ ಎಂದು ಹೇಳಿದರು.

K.J. George is the caretaker minister for now, cabinet expansion to take place soon - Madhu Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close