ರಾಮನ ಹೆಸರಿನಲದಲಿ ಲೂಟಿ ಮಾಡಿದವರು ಎಸ್ಐಆರ್ ವಿಷಯದಲ್ಲಿ ವೋಟ್ ಚೋರಿ ಮಾಡಲ್ವಾ?ಕಿಮ್ಮನೆ ಕೆಂಡ-Those who looted in the name of Ram, did they steal votes in the SIR issue? Kimmane Kenda

SUDDILIVE|| SHIVAMOGGA

 ರಾಮನ ಹೆಸರಿನಲದಲಿ ಲೂಟಿ ಮಾಡಿದವರು ಎಸ್ಐಆರ್ ವಿಷಯದಲ್ಲಿ ವೋಟ್ ಚೋರಿ ಮಾಡಲ್ವಾ?ಕಿಮ್ಮನೆ ಕೆಂಡ-Those who looted in the name of Ram, did they steal votes in the SIR issue? Kimmane Kenda  

   

ಶಿವಮೊಗ್ಗ, ಜೂನ್ 29: ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಸೋಮವಾರ ಶಿವಪ್ಪ ನಾಯಕ ವೃತ್ತದಲ್ಲಿ ಜನಜಾಗೃತಿ ಅಭಿಯಾನ ನಡೆಯಿತು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಎಂ. ರತ್ನಾಕರ್, ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿವೆ ಎಂದು ಆರೋಪಿಸಿದ ಅವರು, ಪಶ್ಚಿಮ ಬಂಗಾಳದಲ್ಲಿ ಸುಮಾರು 91 ಲಕ್ಷ ಜನರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಉಲ್ಲೇಖಿಸಿದರು.

"ನುಸುಳುಕೋರರನ್ನು ಪತ್ತೆಹಚ್ಚುವ ಹೆಸರಿನಲ್ಲಿ ಸಾಮಾನ್ಯ ಜನರನ್ನೇ ಗುರಿಯಾಗಿಸಲಾಗುತ್ತಿದೆ. ನಿಜವಾದ ನುಸುಳುಕೋರರು ಬಿಜೆಪಿಯವರೇ" ಈಗ ರಾಮನಿಗೆ ಟೊಪ್ಪಿ ಹಾಕಿರೋ ಈ ದೇಶದ ಜನರಿಗೆ ಟೊಪ್ಪಿ ಹಾಕೋದು ಮುಖ್ಯನಾ? ಶ್ರೀರಾಮನಿಗೆ ಟೊಪ್ಪಿ ಹಾಕಿ ಮನೆಗೆ ಕಳಿಸಿದ್ದಾರೆ. ನೀವು ಯಾವ ಲೆಕ್ಕಎಂದು ಅವರು ವಾಗ್ದಾಳಿ ನಡೆಸಿದರು.

1992ರ ರಥಯಾತ್ರೆಯಿಂದ ಆರಂಭಿಸಿ ವಿವಿಧ ಹಂತಗಳಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜನಪ್ರತಿನಿಧಿಗಳು ರಾಷ್ಟ್ರಭಕ್ತರೆಂದು ಹೇಳಿಕೊಳ್ಳುವುದಾದರೆ, ಭ್ರಷ್ಟಾಚಾರದಿಂದ ಗಳಿಸಿದ ಆಸ್ತಿಯನ್ನು ಮೊದಲು ದೇಶಕ್ಕೆ ಒಪ್ಪಿಸಲಿ ಎಂದು ಸವಾಲು ಹಾಕಿದರು.

ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ಬೇಕು. ಆದರೆ ಕೇವಲ 30 ದಿನಗಳೊಳಗೆ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿರುವುದು ಸಾಮಾನ್ಯ ಜನರಿಗೆ ಸಾಧ್ಯವಾಗದ ಕೆಲಸವಾಗಿದೆ ಎಂದು ಅವರು ಟೀಕಿಸಿದರು.

ಒಂದೇ ವ್ಯಕ್ತಿಯ ಹೆಸರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ದಾಖಲಾಗಿರುವ ಕಾರಣ ಸಣ್ಣ ಅಕ್ಷರ ವ್ಯತ್ಯಾಸವೂ ಅರ್ಜಿ ತಿರಸ್ಕಾರಕ್ಕೆ ಕಾರಣವಾಗಬಹುದು ಎಂದು ಹೇಳಿದರು. ತಮ್ಮ ಹೆಸರೇ ವಿವಿಧ ದಾಖಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ದಾಖಲಾಗಿರುವ ಉದಾಹರಣೆಯನ್ನು ನೀಡಿ, ಇದನ್ನು ಸರಿಪಡಿಸಲು ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಇದೆ ಎಂದರು.

ಪಾಸ್‌ಪೋರ್ಟ್ ಹೊಂದಿರುವ ರಾಜ್ಯಗಳಾದ ಕೇರಳ ಹಾಗೂ ಪಂಜಾಬ್‌ನಲ್ಲಿ ಸಮಸ್ಯೆ ಕಡಿಮೆ ಇದೆ. ಆದರೆ ಪಾಸ್‌ಪೋರ್ಟ್ ಇಲ್ಲದವರು ಪ್ರತಿಯೊಂದು ದಾಖಲೆ ವ್ಯತ್ಯಾಸಕ್ಕೂ ಪ್ರತ್ಯೇಕ ವಿವರಣೆ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಮದುವೆಯಾದ ಮಹಿಳೆಯರು ತಂದೆಯ ಹೆಸರು ಹಾಗೂ ಗಂಡನ ಹೆಸರಿನ ಬದಲಾವಣೆ, ವಿವಿಧ ಜಿಲ್ಲೆಗಳಿಂದ ದುಡಿಮೆಗಾಗಿ ವಲಸೆ ಬಂದ ಕಾರ್ಮಿಕರು, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು, ಅನಾಥ ಮಕ್ಕಳು ಸೇರಿದಂತೆ ಹಲವು ವರ್ಗದ ಜನರಿಗೆ 30 ದಿನಗಳಲ್ಲಿ ದಾಖಲೆಗಳನ್ನು ಒದಗಿಸುವುದು ಅಸಾಧ್ಯ ಎಂದು ಹೇಳಿದರು.

ಆರ್‌ಟಿಸಿ ಬದಲಾವಣೆಗೂ ಮೂರು ತಿಂಗಳು ತೆಗೆದುಕೊಳ್ಳುವ ಸರ್ಕಾರದ ವ್ಯವಸ್ಥೆಯಲ್ಲಿ, ಮತದಾರರ ದಾಖಲೆಗಳನ್ನು ಕೇವಲ 30 ದಿನಗಳಲ್ಲಿ ಪೂರ್ಣಗೊಳಿಸುವಂತೆ ಹೇಳುವುದು ವಾಸ್ತವಿಕವಲ್ಲ ಎಂದು ಸರ್ಕಾರವನ್ನು ಟೀಕಿಸಿದರು.

ದೇಶದಲ್ಲಿ ಇನ್ನೂ ಸುಮಾರು 20 ಶೇಕಡಾ ಜನರಿಗೆ ಸಮರ್ಪಕ ಸಾಕ್ಷರತೆ ಇಲ್ಲ. ದಿನಗೂಲಿ ಕಾರ್ಮಿಕರು, ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ದಿನದ ಕೂಲಿಯನ್ನೇ ಅವಲಂಬಿಸಿರುವ ಕಾರಣ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮಟ್ಟದಿಂದ ಗ್ರಾಮ ಪಂಚಾಯಿತಿ ಮಟ್ಟದವರೆಗೆ ಸಭೆಗಳನ್ನು ನಡೆಸಿ ಜನರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಮತದಾರರ ಪಟ್ಟಿಯನ್ನು ಪಡೆದು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು. ಬೂತ್ ಮಟ್ಟದ ಏಜೆಂಟ್‌ಗಳಿಗೆ (BLA) ಸೂಕ್ತ ತರಬೇತಿ ನೀಡಿ ಅರ್ಜಿಗಳನ್ನು ಸರಿಯಾಗಿ ಭರ್ತಿ ಮಾಡುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಅಕ್ಷರಜ್ಞಾನ ಕೊರತೆಯಿಂದ ಸಾವಿರಾರು ಜನ ಮತದಾನದ ಹಕ್ಕು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದರು.

ಮೊದಲು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಟೌನ್ ಪಂಚಾಯಿತಿ ಚುನಾವಣೆಗಳ ಮೇಲೆಯೇ ಇದರ ಪರಿಣಾಮ ಬೀಳಲಿದೆ. ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕ ಸಭೆಗಳಿಗಿಂತ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.

ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರು ಅಪೀಲು ಸಲ್ಲಿಸದ ಕಾರಣ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಹೇಳಿದ ಅವರು, ಇದೇ ಪರಿಸ್ಥಿತಿ ದೇಶದ ಇತರ ಭಾಗಗಳಲ್ಲೂ ಮರುಕಳಿಸುವ ಅಪಾಯವಿದೆ. ಆದ್ದರಿಂದ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಜನರಿಗೆ ಮಾಹಿತಿ ನೀಡಿ, ಅವರ ಮತದಾನದ ಹಕ್ಕು ಉಳಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close