ಕುತೂಹಲ ಮೂಡಿಸಿದ ಕೆಜೆ ಜಾರ್ಜ್ ಹೇಳಿಕೆ, ನಮ್ಮವರು ಯಾರು ಜಿಲ್ಲ ಉಸ್ತುವಾರಿಗಳಾಗಿ ಬರ್ತಾರೆ-KJ George's interesting statement: Who among us will become district in-charge?

 SUDDILIVE || SHIVAMOGGA

ಕುತೂಹಲ ಮೂಡಿಸಿದ ಕೆಜೆ ಜಾರ್ಜ್ ಹೇಳಿಕೆ, ನಮ್ಮವರು ಯಾರು ಜಿಲ್ಲ ಉಸ್ತುವಾರಿಗಳಾಗಿ ಬರ್ತಾರೆ-KJ George's interesting statement: Who among us will become district in-charge?

George, statement

ಉಸ್ತುವಾರಿ ಸಚಿವರಾಗಿ ನಿಮ್ಮವರೆ ಬರ್ತಾರೆ ಎಂದು ಸಚಿವ ಕೆಜೆ ಜಾರ್ಚ್ ಹೇಳಿಕೆ ಕುತೂಹಲ ಮೂಡಿಸಿದೆ.

ಪ್ರಕೃತಿ ವಿಕೋಪ ಕುರಿತು ಶಿವಮೊಗ್ಗದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ  ಮಾತನಾಡಿ, ಸಭೆ ಆರಂಭಕ್ಕೂ ಮುನ್ನ ನಾನು ತಾತ್ಕಾಲಿಕವಾಗಿ ಇಲ್ಲಿಗೆ ಬಂದಿದ್ದೇನೆ. ಉಸ್ತುವಾರಿ ಸಚಿವರು ನಿಮ್ಮವರೆ ಬರುತ್ತಾರೆ. ಎಂದಿರುವು ಕುತೂಹಕ ಮೂಡಿಸಿದೆ. ಯಾರು ನಮ್ಮವರು ಬರುತ್ತಾರೆ, ಮಧು ಬಂಗಾರಪ್ಪನವರ, ಶಾಸಕ ಬೇಳೂರು ಗೋಪಾಲ್ ಕೃಷ್ಣ ಅವರು ಬರ್ತಾರಾ ಅಥವಾ ಸಂಗಮೇಶ್ವರ್ ಬರ್ತಾರಾ ಅಥವಾ ಎಂಎಲ್ ಸಿ ಬಲ್ಕಿಸ್ ಬಾನು ಉಸ್ತುವಾರಿ ಸಚಿವರಾಗುತ್ತಾರೋ ಎಂಬ ಗೊಂದಲದ ಬಗ್ಗೆ ಮಾಹಿತಿ ನೀಡಲಿಲ್ಲ.

ಮುಂದು ವರೆದು ಜಿಲ್ಲೆಯಲ್ಲಿನ ಮುಂಗಾರು ಪರಿಸ್ಥಿತಿ, ಬೆಳೆ ಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ಮಳೆಯ ವಸ್ತುಸ್ಥಿತಿಯನ್ನು ವಿವರಿಸಿ, ಇದುವರೆಗೆ ಜಿಲ್ಲೆಯಲ್ಲಿ ಶೇ.48ರಷ್ಟು ಮಳೆ ಕೊರತೆ (ಡೆಫಿಸಿಟ್) ದಾಖಲಾಗಿರುವುದಾಗಿ ತಿಳಿಸಿದರು. ಆದರೆ ನಿನ್ನೆಯಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಇದೇ ರೀತಿಯ ವಾತಾವರಣ ಮುಂದುವರಿದರೆ ಮಳೆ ಕೊರತೆಯನ್ನು ಸರಿದೂಗಿಸಿಕೊಳ್ಳುವ ಅವಕಾಶವಿದೆ ಎಂದು ಹೇಳಿದರು.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಬಲವಾದ ಗಾಳಿ ಹಾಗೂ ಮಳೆಯಿಂದ 514 ಹೆಕ್ಟೇರ್ ಮತ್ತು 460 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮುಖ್ಯವಾಗಿ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ಭಾಗಗಳಲ್ಲಿ ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳು ನಷ್ಟಕ್ಕೊಳಗಾಗಿವೆ. ಎಲ್ಲಾ ಮಾಹಿತಿಯನ್ನು ಪರಿಹಾರ ಪೋರ್ಟಲ್‌ಗೆ ಅಪ್ಲೋಡ್ ಮಾಡಲಾಗಿದ್ದು, ಎಸ್‌ಡಿಆರ್‌ಎಫ್ (SDRF) ನಿಯಮಾನುಸಾರ ಪ್ರತಿ ಹೆಕ್ಟೇರ್‌ಗೆ ₹22,500 ಪರಿಹಾರ ನೀಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದರು.

ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಮನವಿಯಂತೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ರೈತರಿಗೆ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದರು.

ಬಲವಾದ ಗಾಳಿ ಮತ್ತು ಮಳೆಯಿಂದ 456 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಮನೆಗಳಿಗೆ ನೀರು ನುಗ್ಗಿದ ಪ್ರಕರಣಗಳಲ್ಲಿ ತಕ್ಷಣದ ಪರಿಹಾರವಾಗಿ ₹6,000 ಹಾಗೂ ₹8,500 ನೀಡಲಾಗಿದೆ. ಮನೆ ಹಾನಿ ಕುರಿತ ಮಾಹಿತಿಯನ್ನೂ ಪರಿಹಾರ ಪೋರ್ಟಲ್‌ಗೆ ಅಪ್ಲೋಡ್ ಮಾಡಲಾಗಿದ್ದು, ಅನುದಾನ ಬಿಡುಗಡೆಯಾದ ನಂತರ ಸಂಪೂರ್ಣ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.

ಇಲ್ಲಿಯವರೆಗೆ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಮಾನವ ಹಾನಿ ಅಥವಾ ಜಾನುವಾರು ಹಾನಿ ಸಂಭವಿಸಿಲ್ಲ ಎಂಬುದನ್ನೂ ಅಧಿಕಾರಿಗಳು ಸಭೆಗೆ ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಜಿ. ಜಾರ್ಜ್, ಸದ್ಯದ ಪರಿಸ್ಥಿತಿಯಲ್ಲಿ ಮೊದಲ ಆದ್ಯತೆ ತುರ್ತು ಪರಿಹಾರ ಕಾರ್ಯಗಳಿಗೆ ನೀಡಬೇಕು ಎಂದು ಸೂಚಿಸಿದರು. ಹೊಸದಾಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿರುವ ಸಚಿವರು ಜಿಲ್ಲೆಗೆ ಭೇಟಿ ನೀಡಿ ತುರ್ತು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ, ಸಿಇಒ ಹಾಗೂ ಇತರ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದರು.

ಜಲಾಶಯಗಳ ನೀರಿನ ಮಟ್ಟದ ಕುರಿತು ಮಾತನಾಡಿದ ಅವರು, ಸದ್ಯ ಮಳೆ ಕಡಿಮೆ ಇದ್ದರೂ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯ ನಿರೀಕ್ಷೆಯಿದ್ದು, ಬಳಿಕ ಜಲಾಶಯಗಳ ನೀರಿನ ಮಟ್ಟ ಮತ್ತು ಮುಂದಿನ ಕ್ರಮಗಳ ಕುರಿತು ಮತ್ತೊಮ್ಮೆ ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಜನಪ್ರತಿನಿಧಿಗಳಿಗೆ ಸಾರ್ವಜನಿಕರಿಂದ ಮೊದಲಿಗೆ ಮಾಹಿತಿ ತಲುಪುವುದರಿಂದ, ಅವರಿಂದ ಬರುವ ದೂರುಗಳಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

KJ George's interesting statement: Who among us will become district in-charge?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close