SUDDILIVE || SHIVAMOGGA
ಹೊನ್ನಾವಳ್ಳಿ–ಅರಸೀಕೆರೆ ಕಾಮಗಾರಿ ಹಿನ್ನೆಲೆ ರೈಲು ಸಂಚಾರದಲ್ಲಿ ಭಾರೀ ಬದಲಾವಣೆ- Major change in train traffic due to Honnavalli-Arasikere work
ಹೊನ್ನಾವಳ್ಳಿ ರಸ್ತೆ–ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (VJNL) ವತಿಯಿಂದ ಕಾಲುವೆ ದಾಟುವ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆಯು ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಘೋಷಿಸಿದೆ. ಇದರ ಭಾಗವಾಗಿ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದ್ದು, ಹಲವಾರು ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ, ಭಾಗಶಃ ರದ್ದು ಹಾಗೂ ಮರುನಿಗದಿ ಮಾಡಲಾಗಿದೆ.
ರೈಲ್ವೆ ಇಲಾಖೆ ಪ್ರಕಟಿಸಿರುವ ಮಾಹಿತಿಯಂತೆ, ತುಮಕೂರು–ಶಿವಮೊಗ್ಗ ಟೌನ್ ಪ್ಯಾಸೆಂಜರ್, ಶಿವಮೊಗ್ಗ ಟೌನ್–ತುಮಕೂರು ಪ್ಯಾಸೆಂಜರ್, ತುಮಕೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್, ಶಿವಮೊಗ್ಗ ಟೌನ್–ತುಮಕೂರು ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು–ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ ಒಟ್ಟು 10 ರೈಲುಗಳನ್ನು ವಿವಿಧ ದಿನಗಳಲ್ಲಿ ರದ್ದುಪಡಿಸಲಾಗಿದೆ.
- ರೈಲು ಸಂಖ್ಯೆ 66577 ತುಮಕೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 02.06.2026 ಹಾಗೂ 16.06.2026 ರಂದು ರದ್ದು.
- ರೈಲು ಸಂಖ್ಯೆ 66578 ಶಿವಮೊಗ್ಗ ಟೌನ್ – ತುಮಕೂರು ಪ್ಯಾಸೆಂಜರ್ 02.06.2026 ಹಾಗೂ 16.06.2026 ರಂದು ರದ್ದು.
- ರೈಲು ಸಂಖ್ಯೆ 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 06.06.2026 ಹಾಗೂ 13.06.2026 ರಂದು ರದ್ದು.
- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 07.06.2026 ಹಾಗೂ 14.06.2026 ರಂದು ರದ್ದು.
- ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ 06.06.2026 ಹಾಗೂ 13.06.2026 ರಂದು ರದ್ದು.
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 07.06.2026 ಹಾಗೂ 14.06.2026 ರಂದು ರದ್ದುಗೊಳಿಸಲಾಗಿದೆ.
ಕೆಲ ಊರುಗಳಿಗೆ ನಿಲುಗಡೆ ರದ್ದು
ಇದೇ ವೇಳೆ ತಿರುನೆಲ್ವೇಲಿ–ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್, ಕೆಎಸ್‌ಆರ್ ಬೆಂಗಳೂರು–ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳನ್ನು ಚಿಕ್ಕಬಾಣವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಅವಧಿಯಲ್ಲಿ ತುಮಕೂರು, ತಿಪಟೂರು ಸೇರಿದಂತೆ ಕೆಲ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲು ನಿಯಂತ್ರಣ
ಕೆಲವು ರೈಲುಗಳ ಸಂಚಾರವನ್ನು ಮಾರ್ಗಮಧ್ಯೆ 15 ನಿಮಿಷಗಳಿಂದ 75 ನಿಮಿಷಗಳವರೆಗೆ ನಿಯಂತ್ರಿಸಲಾಗಿದ್ದು, ಪ್ರಯಾಣಿಕರು ವಿಳಂಬವನ್ನು ಎದುರಿಸಬೇಕಾಗಬಹುದು. ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್, ಶಿವಮೊಗ್ಗ ಟೌನ್–ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್, ಧಾರವಾಡ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಹಾಗೂ ಬೆಳಗಾವಿ–ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಈ ಪಟ್ಟಿಯಲ್ಲಿ ಸೇರಿವೆ.
- ರೈಲು ಸಂಖ್ಯೆ 20689 ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 02 ಮತ್ತು 16 ಜೂನ್ 2026 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಿದೆ.
- ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 07 ಮತ್ತು 14 ಜೂನ್ 2026 ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಿದೆ.
ಭಾಗಶಃ ರದ್ದು
ಇನ್ನೂ ತಾಳಗುಪ್ಪ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸೀಕೆರೆಯವರೆಗೆ ಮಾತ್ರ ಸಂಚರಿಸಲಿದ್ದು, ಅರಸೀಕೆರೆ–ಬೆಂಗಳೂರು ನಡುವಿನ ಸೇವೆ ಭಾಗಶಃ ರದ್ದಾಗಲಿದೆ. ಹಾಗೆಯೇ ಕೆಎಸ್‌ಆರ್ ಬೆಂಗಳೂರು–ಧಾರವಾಡ ಎಕ್ಸ್‌ಪ್ರೆಸ್ ರೈಲು ಬೆಂಗಳೂರು–ಅರಸೀಕೆರೆ ನಡುವೆ ಭಾಗಶಃ ರದ್ದಾಗಿದ್ದು, ಅರಸೀಕೆರೆಯಿಂದ ತನ್ನ ಪ್ರಯಾಣ ಆರಂಭಿಸಲಿದೆ.
ತಡವಾಗಿ ಸಂಚರಿಸಲಿರುವ ರೈಲು
ಅದೇ ರೀತಿ ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜೂನ್ 7 ಹಾಗೂ 14ರಂದು ಚಿಕ್ಕಮಗಳೂರಿನಿಂದ 120 ನಿಮಿಷ ತಡವಾಗಿ ಹೊರಡಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

