ಯಡೆಹಳ್ಳಿ-ಶಿವಮೊಗ್ಗ ಹೆದ್ದಾರಿಯಲ್ಲಿ ಭಾರಿ ಮಳೆಗೆ ಮರ ಉರುಳಿ ರಸ್ತೆ ಸಂಚಾರ ಸ್ಥಗಿತ-ಪರ್ಯಾಯ ಮಾರ್ಗ ಸೂಚನೆ-Suggest to use alternet road in Yedehalli-shivamogga highway road

 SUDDILIVE || SHIVAMOGGA

ಯಡೆಹಳ್ಳಿ-ಶಿವಮೊಗ್ಗ ಹೆದ್ದಾರಿಯಲ್ಲಿ ಭಾರಿ ಮಳೆಗೆ ಮರ ಉರುಳಿ ರಸ್ತೆ ಸಂಚಾರ ಸ್ಥಗಿತ-ಪರ್ಯಾಯ ಮಾರ್ಗ ಸೂಚನೆ-Suggest to use alternet road in Yedehalli-shivamogga highway road 

Alternet, road

ಶಿವಮೊಗ್ಗ, ಜೂನ್ 1: ಭಾರಿ ಮಳೆಯ ಪರಿಣಾಮ ಯಡೆಹಳ್ಳಿ–ಶಿವಮೊಗ್ಗ ಹೆದ್ದಾರಿಯ ಭಾರಿ ಮರೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಶಿವಮೊಗ್ಗ-ಮಾಗಡಿ ನಡುವಿನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ರಾಷ್ಟ್ರೀಯ ಹೆದ್ದಾರಿ NH-69 ರ ಯಡೆಹಳ್ಳಿ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ (Traffic Diversion) ಜಾರಿಗೊಳಿಸಿದ್ದಾರೆ.

ಶಿವಮೊಗ್ಗದಿಂದ ಹೊರಡುವ ವಾಹನಗಳು:
ಪ್ರಯಾಣಿಕರು ರಿಪ್ಪನ್‌ಪೇಟೆ – ಆಯನೂರು ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ಸಾಗರದಿಂದ ಬರುವ ವಾಹನಗಳು:
ಪ್ರಯಾಣಿಕರು ಆಯನೂರು – ರಿಪ್ಪನ್‌ಪೇಟೆ – ಆನಂದಪುರ ಮಾರ್ಗವಾಗಿ ಶಿವಮೊಗ್ಗದತ್ತ ತೆರಳುವಂತೆ ಮನವಿ ಮಾಡಲಾಗಿದೆ.

ಪೊಲೀಸರು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸಹಕರಿಸುವಂತೆ ಹಾಗೂ ಮಳೆಯ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

Suggest to use alternet road in Yedehalli-shivamogga highway road 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close