SUDDILIVE || SHIVAMOGGA
ಮೊಹರಂ ಹಿನ್ನಲೆ: ಶಿವಮೊಗ್ಗ ನಗರದಲ್ಲಿ ಪೊಲೀಸ್ ರೂಟ್ ಮಾರ್ಚ್-Muharram Background: Police Route March in Shivamogga City
ಶಿವಮೊಗ್ಗ, ಜೂನ್ 24: ಮೊಹರಂ ಹಬ್ಬದ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ನಗರದಲ್ಲಿ ಬುಧವಾರ ಪೊಲೀಸರು ರೂಟ್ ಮಾರ್ಚ್ ಹಾಗೂ ಏರಿಯಾ ಡಾಮಿನೇಷನ್ ಪೆಟ್ರೋಲಿಂಗ್ ನಡೆಸಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ ನಡೆದ ರೂಟ್ ಮಾರ್ಚ್‌ನಲ್ಲಿ ನಗರ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಎಸ್‌ಎಎಫ್ (SAF) ಪಡೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಎಎ ಸರ್ಕಲ್‌ನಿಂದ ಆರಂಭವಾದ ರೂಟ್ ಮಾರ್ಚ್ ಕೆ.ಆರ್. ಪುರಂ ರಸ್ತೆ, ಕ್ಲಾರ್ಕ್‌ಪೇಟೆ, ರವಿವರ್ಮ ಬೀದಿ, ಸಿಗೇಹಟ್ಟಿ ವೃತ್ತ, ಮುರಾದ್ ನಗರ, ಕೆಜಿಎನ್ ಸರ್ಕಲ್, ನಲಬಂದವಾಡಿ, ಬಿಬಿ ಸ್ಟ್ರೀಟ್, ರಾಮಣ್ಣ ಶೆಟ್ಟಿ ಪಾರ್ಕ್, ಗಾಂಧಿಬಜಾರ್, ಸಿದ್ದಯ್ಯ ಸರ್ಕಲ್ ಹಾಗೂ ಎಂ.ಕೆ.ಕೆ. ರಸ್ತೆಯ ಮೂಲಕ ಸಂಚರಿಸಿ ಮತ್ತೆ ಎಎ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು.
ಈ ಕುರಿತು ಮಾಹಿತಿ ನೀಡಿದ ಎಸ್‌ಪಿ ನಿಖಿಲ್ ಬಿ., ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರೂಟ್ ಮಾರ್ಚ್ ನಡೆಸಲಾಗಿದೆ ಎಂದು ತಿಳಿಸಿದರು.
ನಿನ್ನೆ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿಯ ರೂಟ್ ಮಾರ್ಚ್ ನಡೆಸಲಾಗಿದ್ದು, ಇಂದು ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಮೊಹರಂ ಹಬ್ಬ ಮುಗಿಯುವವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ರೂಟ್ ಮಾರ್ಚ್ ಮತ್ತು ಪಾದಚಾರಿ ಗಸ್ತು ಮುಂದುವರಿಯಲಿದೆ ಎಂದು ಅವರು ಹೇಳಿದರು.
