ಬೀದಿ ನಾಯಿ ಸೆರೆಹಿಡಿದ ಗ್ರಾಪಂ‌ ಕಾರ್ಯಕ್ಕೆ ಆಕ್ಷೇಪ-ಪ್ರಕರಣ ದಾಖಲು- Objection to Gram Panchayat action in capturing stray dog ​​- case registered

 SUDDILIVE || THIRTHAHALLI

ಬೀದಿ ನಾಯಿ ಸೆರೆಹಿಡಿದ ಗ್ರಾಪಂ‌ ಕಾರ್ಯಕ್ಕೆ ಆಕ್ಷೇಪ-ಪ್ರಕರಣ ದಾಖಲು- Objection to Gram Panchayat action in capturing stray dog ​​- case registered   

Grama, panchayath





ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ವತಿಯಿಂದ ಕಳೆದ ಕೆಲವು ದಿನಗಳಿಂದ ಬೀದಿ ನಾಯಿಗಳನ್ನು ಸೆರೆ ಹಿಡಿಯುತ್ತಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸೆರೆ ಹಿಡಿದ ನಾಯಿಗಳಿಗೆ ಸಂತಾನಹರಣ (ಎಬಿಸಿ) ಶಸ್ತ್ರಚಿಕಿತ್ಸೆ ನಡೆಸಲು ಆಡಳಿತ ಮುಂದಾಗಿದ್ದು, ಸುಮಾರು 48 ನಾಯಿಗಳನ್ನು ಹಿಡಿದಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಚಿಕಿತ್ಸೆ ಪಡೆದ ಕೆಲವು ನಾಯಿಗಳನ್ನು ಪುನಃ ಬಿಡಲಾಗಿದ್ದು, ಉಳಿದ ನಾಯಿಗಳನ್ನು ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕದ ಬೋನಿನಲ್ಲಿ ಇರಿಸಲಾಗಿದೆ.

ಈ ಬಗ್ಗೆ ಬೆಂಗಳೂರಿನ ಪೀಪಲ್ ಫಾರ್ ಅನಿಮಲ್ಸ್ ಸಂಸ್ಥೆಯ ಹರೀಶ್ ಕೆ.ಬಿ. ಸ್ಥಳಕ್ಕೆ ಭೇಟಿ ನೀಡಿ, ನಾಯಿಗಳಿಗೆ ಸಮರ್ಪಕ ಆಹಾರ ನೀಡುತ್ತಿಲ್ಲ ಹಾಗೂ ಅವುಗಳನ್ನು ಹಿಡಿಯುವ ವೇಳೆ ಕಾನೂನು ಪಾಲನೆಯಾಗಿಲ್ಲ ಎಂದು ಆರೋಪಿಸಿದ್ದಾರೆ. ತಂತಿ ಮತ್ತು ಕಬ್ಬಿಣದ ಉಪಕರಣಗಳನ್ನು ಬಳಸಿ ನಾಯಿಗಳ ಕುತ್ತಿಗೆಗೆ ಬಿಗಿದು ರಸ್ತೆಯಲ್ಲಿ ಎಳೆದಾಡಲಾಗಿದೆ ಎಂದು ದೂರಿದ್ದು, ಕೆಲವು ನಾಯಿಗಳನ್ನು ಕೊಂದಿರುವ ಅನುಮಾನವೂ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾಯಿಗಳನ್ನು ಇರಿಸಿರುವ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ನಾಯಿಗಳನ್ನು ಹಿಡಿಯುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಸರ್ಕಾರದ ನಿಯಮಾನುಸಾರ ನೆಟ್ ಬಳಸಿ, ಪ್ರಾಣಿಗಳಿಗೆ ಹಾನಿಯಾಗದ ರೀತಿಯಲ್ಲಿ ಹಿಡಿಯಬೇಕು. ಎಬಿಸಿ ಕಾನೂನು ಉಲ್ಲಂಘನೆ ಹಾಗೂ ಪ್ರಾಣಿ ಹಿಂಸೆ ನಡೆದಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹರೀಶ್ ತಿಳಿಸಿದ್ದಾರೆ.

ಆರೋಪ ತಳ್ಳಿಹಾಕಿದ ಅಧ್ಯಕ್ಷರು

ಪ್ರಾಣಿ ಹಿಂಸೆ ಆರೋಪಗಳನ್ನು ತಳ್ಳಿಹಾಕಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್. ಶೆಟ್ಟಿ, ಕಳೆದ ಅವಧಿಯಲ್ಲಿ ಸುಮಾರು 80 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ನಾಯಿ ಹಿಡಿಯುವ ಕಾರ್ಯ ನಡೆಯುತ್ತಿದ್ದು, ಯಾವುದೇ ನಾಯಿಗೂ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿವಾಸಿಗಳ ಮನವಿಯ ಮೇರೆಗೆ ಸುಮಾರು 50ಕ್ಕೂ ಹೆಚ್ಚು ನಾಯಿಗಳನ್ನು ಹಿಡಿದಿದ್ದು, ಅವುಗಳಲ್ಲಿ ಸುಮಾರು 30 ನಾಯಿಗಳನ್ನು ಸ್ಥಳೀಯರ ಸುಪರ್ದಿಗೆ ನೀಡಲಾಗಿದೆ. ಶಾಲಾ-ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೌನ್ಸಿಲ್ ನಿರ್ಣಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ನಾಯಿಗಳಿಗೆ ಆಹಾರದ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದ್ದು, ಅವುಗಳ ಆರೈಕೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾನುವಾರ ಶಿವಮೊಗ್ಗದಿಂದ ಪಶುವೈದ್ಯರ ತಂಡ ಆಗಮಿಸಿ ಎಲ್ಲಾ ನಾಯಿಗಳಿಗೆ ಏಕಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಭದ್ರಾವತಿ ತಾಲೂಕಿನ ಗ್ರಾಮಪಂಚಾಯಿತಿಯಲ್ಲಿ ಜೀವಂತ ನಾಯಿಯನ್ನೇ ಹೂತುಹಾಕಲಾಗಿತ್ತು. 

Objection to Gram Panchayat action in capturing stray dog ​​- case registered 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close