ಭದ್ರಾವತಿಯಲ್ಲಿ ವಿಶ್ವನ ಮೇಲೆ ದಾಳಿ ಪ್ರಕರಣ: ಐವರು ನ್ಯಾಯಾಲಯಕ್ಕೆ ಶರಣು, ಒಟ್ಟು 7 ಮಂದಿ ಪೊಲೀಸರ ವಶಕ್ಕೆ-Bhadravati attack case: Five surrender before court, total 7 in police custody

SUDDILIVE || BHADRAVATHI

ಭದ್ರಾವತಿಯಲ್ಲಿ ವಿಶ್ವನ ಮೇಲೆ ದಾಳಿ ಪ್ರಕರಣ: ಐವರು ನ್ಯಾಯಾಲಯಕ್ಕೆ ಶರಣು, ಒಟ್ಟು 7 ಮಂದಿ ಪೊಲೀಸರ ವಶಕ್ಕೆ-Bhadravati attack case: Five surrender before court, total 7 in police custody    
Bhadravathi, case

ಭದ್ರಾವತಿ: ವಿಶ್ವ ಯಾನೆ ಮುದ್ದೆ ಮೇಲೆ ನಡೆದ ಮಾರಕ ದಾಳಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಪೊಲೀಸರ ವಶಕ್ಕೊಳಗಾಗಿದ್ದಾರೆ. ಇವರಲ್ಲಿ ಐವರು ಇಂದು ಭದ್ರಾವತಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಸೋಮವಾರ ಅನ್ವರ್ ಕಾಲೋನಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ ವಿಶ್ವ ಯಾನೆ ಮುದ್ದೆ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಪ್ರಕಾಶ್ ಯಾನೆ ಕರಾಟೆ ಪ್ರಕಾಶ್, ಪ್ರಮೋದ್ ಯಾನೆ ಗಾಂಧಿ, ಜಗದೀಶ್, ಅಲ್ವಿನ್, ಭರತ್ ಯಾನೆ ಕೊಳಕ ಭರತ್, ರಾಕೇಶ್ ಯಾನೆ ತುಂಬೆ, ಪ್ರಜ್ವಲ್ ಹಾಗೂ ಡಾಲ್ವಿನ್ ಭಾಗಿಯಾಗಿರುವ ಆರೋಪ ಕೇಳಿಬಂದಿದೆ.

ದಾಳಿ ನಡೆದ ಸಂದರ್ಭದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ಮುಂದುವರಿದಂತೆ ಆರೋಪಿಗಳ ಸಂಖ್ಯೆ ಹೆಚ್ಚಾಗಿದ್ದು, ಮೊದಲಿಗೆ ಪ್ರಮೋದ್ ಯಾನೆ ಗಾಂಧಿ ಹಾಗೂ ಜಗದೀಶ್ ಪೊಲೀಸರ ವಶಕ್ಕೆ ಸಿಕ್ಕಿದ್ದರು.

ಇದಾದ ಬಳಿಕ ಇಂದು ಕರಾಟೆ ಪ್ರಕಾಶ್, ಭರತ್, ರಾಕೇಶ್, ಪ್ರಜ್ವಲ್ ಹಾಗೂ ಡಾಲ್ವಿನ್ ಅವರು ಭದ್ರಾವತಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಚೇತನ್ ಅವರ ಎದುರು ಶರಣಾಗಿದ್ದಾರೆ.

ಇನ್ನೊಂದೆಡೆ, ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವ ಯಾನೆ ಮುದ್ದೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅವರು ಚೇತರಿಸಿಕೊಳ್ಳುತ್ತಿದ್ದು, ಇಂದು ಐಸಿಯುವಿನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Bhadravati attack case: Five surrender before court, total 7 in police custody

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close