ಒಂದು ಬೂತ್ ನಲ್ಲಿ ಯಡವಟ್ಟು-ಉಳಿದಂತೆ ಜಿಲ್ಲೆಯಾದ್ಯಂತ ಪೊಲಿಯೋ ಲಸಿಕಾ ಅಭಿಯಾನ ಯಶಸ್ವಿ-Polio vaccination campaign across the district a success despite a problem in one booth

 SUDDILIVE || SHIVAMOGGA

ಒಂದು ಬೂತ್ ನಲ್ಲಿ ಯಡವಟ್ಟು-ಉಳಿದಂತೆ ಜಿಲ್ಲೆಯಾದ್ಯಂತ ಪೊಲಿಯೋ ಲಸಿಕಾ ಅಭಿಯಾನ ಯಶಸ್ವಿ-Polio vaccination campaign across the district a success despite a problem in one booth   

Polio, vaccination

ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಬೂತ್ ಹೊರತು ಪಡಿಸಿ  ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಪಡೆಯಲು ಅರ್ಹರಿರುವ ಒಟ್ಟು ಮಕ್ಕಳ ಸಂಖ್ಯೆ 1,23,388 ಎಂದು ಗುರುತಿಸಲಾಗಿದ್ದು ಸುಮಾರು 1,18,259 ಮಕ್ಕಳಿಗೆ ಲಸಿಕೆ ಹಾಕಿ 95.84% ಯಶಸ್ವಿಗೊಳಿಸಲಾಗಿದೆ. 

ತಾಲೂಕುವಾರು-

ಭದ್ರಾವತಿಯಲ್ಲಿ ಶೇಕಡ 97.36, ಹೊಸನಗರದ ನಗರ‌ಪ್ರದೇಶದಲ್ಲಿ ಶೇಕಡ 95.06 ರಷ್ಟು, ಗ್ರಾಮಾಂತರ ಭಾಗದಲ್ಲಿ ಶೇ. 96.51ರಷ್ಟು, ರೂ.95.64, ಶಿಕಾರಿಪುರದಲ್ಲಿ 97.15, ಸೊರಬದಲ್ಲಿ 92.11, ತೀರ್ಥಳ್ಳಿಯಲ್ಲಿ ರೂ.95.03 ಶಿವಮೊಗ್ಗದಲ್ಲಿ 96.25 ರಷ್ಟು ಲಸಿಕೆಯ ಗುರಿ ಸಾಧಿಸಲಾಗಿದೆ. 

ಒಟ್ಟು ಬೂತ್‌ಗಳ ಸಂಖ್ಯೆ: ಜಿಲ್ಲೆಯಾದ್ಯಂತ ಒಟ್ಟು 1,069 ಬೂತ್‌ಗಳನ್ನು ಸ್ಥಾಪಿಸಲಾಗಿತ್ತು. ಸ್ಥಿರ ಬೂತ್‌ಗಳು: ಇದರಲ್ಲಿ 1,116 ಕಡೆಗಳಲ್ಲಿ ಸ್ಥಿರ ಪೋಲಿಯೋ ಕೇಂದ್ರಗಳಿವೆ. ಮೊಬೈಲ್ ಬೂತ್‌ಗಳು: ಸಂಚಾರಿ ವಾಹನಗಳ ಮೂಲಕ ಲಸಿಕೆ ನೀಡಲು 17 ಮೊಬೈಲ್ ಬೂತ್‌ಗಳ ವ್ಯವಸ್ಥೆ ಮಾಡಲಾಗಿತ್ತು. 

ಟ್ರಾನ್ಸಿಟ್ ಟೀಮ್ಸ್: ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಸ್ಥಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಹಾಕಲು 36 ಟ್ರಾನ್ಸಿಟ್ ತಂಡಗಳನ್ನುರಚಿಸಲಾಗಿದೆ.

ಒಟ್ಟು ಲಸಿಕೆದಾರರು (ವ್ಯಾಕ್ಸಿನೇಟರ್ಸ್)

ಲಸಿಕೆ ಹಾಕುವ ಕಾರ್ಯದಲ್ಲಿ ಒಟ್ಟು 3,889 ಸಿಬ್ಬಂದಿ ತೊಡಗಿಸಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ: ಇದರಲ್ಲಿ ಆರೋಗ್ಯ ಇಲಾಖೆಯ ಸ್ವಂತ ಸಿಬ್ಬಂದಿ 2,761 ಜರನ್ನ ನಿಯೋಜಿಸಲಾಗಿತ್ತು. 

ಸ್ವಯಂಸೇವಕರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,128 ಸ್ವಯಂಸೇವಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ರೋಟರಿ ಸಂಸ್ಥೆಯ ಸಹಕಾರ: ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯ ಸದಸ್ಯರು ಸಹ ಲಸಿಕಾ ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಿ ನೆರವು ನೀಡುತ್ತಿದ್ದಾರೆ.

ಲಸಿಕಾ ಪ್ರಗತಿ: ಲಸಿಕಾ ಅಭಿಯಾನದ ಮೊದಲ ದಿನವೇ ಜಿಲ್ಲೆಯಲ್ಲಿ ಸುಮಾರು ಶೇಕಡಾ 95% ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ.

ಮನೆ-ಮನೆ ಭೇಟಿ ಅಭಿಯಾನ: ಮೊದಲ ದಿನ ಬೂತ್‌ಗಳಿಗೆ ಬಂದು ಲಸಿಕೆ ಪಡೆಯಲು ಬಾಕಿ ಉಳಿದಿರುವ (ಮಿಸ್ ಆಗಿರುವ) ಮಕ್ಕಳನ್ನು ಪತ್ತೆಹಚ್ಚಲು, ಮುಂದಿನ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ.

ಘಟನೆ:


ಲಸಿಕಾ ಅಭಿಯಾನದ ವೇಳೆ ಶಿವಮೊಗ್ಗ ನಗರದ ನವುಲೆಯ ಖಾಸಗಿ  ಶಾಲೆಯೊಂದರಲ್ಲಿದ್ದ ಪೊಲೀಯೋ ಬೂತ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಡ್ರಾಪರ್ ಸಡಿಲವಾಗಿದ್ದರಿಂದ 9 ತಿಂಗಳ ಮಗುವಿಗೆ ಇಡೀ ಪೊಲಿಯೋ ವಯಲ್ ಲಸಿಕೆಯನ್ನು ಹಾಕಿದ ಘಟನೆ ವರದಿಯಾಗಿತ್ತು. 

ಲಸಿಕೆ ಹಾಕಿ ನಂತರ ಅಂಗನವಾಡಿ ಕಾರ್ಯಕರ್ತೆ ಪೋಷಕರೊಂದಿಗೆ ನಡೆದುಕೊಂಡ ರೀತಿಯಿಂದಾಗಿ ಸ್ವಲ್ಪ ಗೊಂದಲವೂ ಉಂಟಾಗಿತ್ತು. ಇದರಿಂದ ಪೋಷಕರು ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತಕ್ಷಣವೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ.ಮಲ್ಲಪ್ಪ ಹಾಗೂ ಇತರರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.  ಮಗುವನ್ನು ಮಕ್ಕಳ ತಜ್ಞರಿಗೆ (ಪೀಡಿಯಾಟ್ರಿಷಿಯನ್) ತೋರಿಸಿ ತಪಾಸಣೆ ನಡೆಸಿದ್ದಾರೆ, ಮಗು ಸದ್ಯ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

Polio vaccination campaign across the district a success despite a problem in one booth   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close