SUDDILIVE || SHIVAMOGGA
ಕೆ.ಆರ್.ಪುರಂ ರಸ್ತೆಯಲ್ಲಿ ಅನುಮಾನಾಸ್ಪದ ಓಡಾಟ; ಸಾರ್ವಜನಿಕರಿಂದ ಧರ್ಮದೇಟು-Suspicious movement on K.R. Puram Road; Public offers donations
ಶಿವಮೊಗ್ಗ: ನಗರದ ಕೆ.ಆರ್.ಪುರಂ ರಸ್ತೆಯಲ್ಲಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಮೂವರು ಯುವಕರನ್ನು ಸಾರ್ವಜನಿಕರು ಮಕ್ಕಳ ಕಳ್ಳರೆಂದು ಶಂಕಿಸಿ ಹಿಡಿದು ಧರ್ಮದೇಟು ಹಾಕಿದ ಘಟನೆ ಬುಧವಾರ ಸಂಜೆ ನಡೆದಿದೆ. ಬಳಿಕ ಸ್ಥಳಕ್ಕಾಗಮಿಸಿದ ದೊಡ್ಡಪೇಟೆ ಪೊಲೀಸರು ಮೂವರನ್ನೂ ರಕ್ಷಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬುರ್ಖಾ ಕಳಚುತ್ತಿದ್ದಂತೆ ಹೆಚ್ಚಿದ ಅನುಮಾನ
ಮೂವರು ಯುವಕರು ಬುರ್ಖಾ ಧರಿಸಿಕೊಂಡು ಕೆ.ಆರ್.ಪುರಂ ರಸ್ತೆ ಸುತ್ತಮುತ್ತ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅವರ ಚಲನವಲನದ ಮೇಲೆ ಅನುಮಾನ ವ್ಯಕ್ತಪಡಿಸಿದರು. ಮಕ್ಕಳ ಕಳ್ಳರಿರಬಹುದೆಂಬ ಶಂಕೆಯಿಂದ ಅವರನ್ನು ಹಿಡಿದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ವೇಳೆ ಬುರ್ಖಾ ಕಳಚಿ ಮುಖ ನೋಡಿದ ಸಾರ್ವಜನಿಕರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸರ ತ್ವರಿತ ಕಾರ್ಯಾಚರಣೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಕೈಯಿಂದ ಯುವಕರನ್ನು ಬಿಡಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ. ಪ್ರಸ್ತುತ ಮೂವರ ಹಿನ್ನೆಲೆ ಹಾಗೂ ಶಿವಮೊಗ್ಗಕ್ಕೆ ಬಂದ ಉದ್ದೇಶದ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ. ಮೂವರಲ್ಲಿ ಅಸ್ಲಾಂ, ಮಹೇಶ ಎಂದು ಇಬ್ಬರ ಪತ್ತೆಯಾಗಿದೆ. ಮತ್ತೊಬ್ಬನ ಪತ್ತೆ ತಿಳಿದು ಬರಬೇಕಿದೆ. ಈ ಮೂವರು ಬೊಮ್ಮನ್ ಕಟ್ಟೆ ನಿವಾಸಿಗಳಾಗಿದ್ದಾರೆ ಎನ್ನಲಾಗಿದೆ.
ಹತ್ಯೆಯ ಸಂಚು ಆರೋಪದ ಸುತ್ತ ಊಹಾಪೋಹ
ಇದೇ ವೇಳೆ, ಈ ಮೂವರು ಮಕ್ಕಳ ಕಳ್ಳರಲ್ಲ. ಜೈಲಿನಲ್ಲಿರುವ ಕುಖ್ಯಾತ ರೌಡಿಯೊಬ್ಬನ ಸೂಚನೆಯ ಮೇರೆಗೆ ಶಿವಮೊಗ್ಗದಲ್ಲಿರುವ ಆತನ ಪತ್ನಿಯನ್ನು ಹತ್ಯೆ ಮಾಡಲು ಬಂದವರು ಎಂಬ ಗಂಭೀರ ಆರೋಪ ಹಾಗೂ ಚರ್ಚೆಗಳು ನಗರದಲ್ಲಿ ಹರಿದಾಡುತ್ತಿವೆ. ಯಾಸಿನ್ ಕುರೇಷಿ ಮರ್ಡರ್ ಪ್ರಕರಣದ ಆರೋಪಿ ತನ್ನ ಪತ್ನಿಯನ್ನ ಹೆದರಿಸಲು ಈ ಮೂವರನ್ನ ಕಳಯಹಿಸದ್ನಾ ಎಂಬ ಅನುಮಾನವೂ ಸಹ ಕಂಡು ಬಂದಿದೆ. ಅಸ್ಲಾಂ ಎಂಬ ಆರೋಪಿಯ ಬಳಿ ಮಾರಕಾಸ್ತ್ರಗಳು ಪತ್ತೆಯಾಗಿರುವುದರಿಂದ ಕೊಲೆಯ ಸಂಚು ಪತ್ತೆಯಾಗಿದೆ.
ತನಿಖೆಯಿಂದಲೇ ಸತ್ಯ ಬಹಿರಂಗ
ಮೂವರು ಯುವಕರು ನಿಜವಾಗಿಯೂ ಹತ್ಯೆಗಾಗಿ ಬಂದಿದ್ದು ನಿಜವಾದರೂ, ದೊಡ್ಡಪೇಟೆ ಪೊಲೀಸರ ತನಿಖೆಯ ನಂತರವೇ ವಾಸ್ತವಾಂಶ ಬಹಿರಂಗವಾಗಲಿದೆ. ಸದ್ಯ ಘಟನೆ ನಗರದಲ್ಲಿ ಸಾಕಷ್ಟು ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ.


