ಬೈಕ್ ಕಳ್ಳತನ ಮತ್ತು ದೇವಸ್ಥಾನ ಹುಂಡಿ ಕಳ್ಳತನ ಪ್ರಕರಣದಲ್ಲಿ ಮೂರ್ತಿ ಯಾನೆ ಕತ್ತೆ ಮೂರ್ತಿ ಅರೆಸ್ಟ್-Murthy alias Katte Murthy arrested in bike theft and temple money theft case

 SUDDILIVE || HOSANAGARA

ಬೈಕ್ ಕಳ್ಳತನ ಮತ್ತು ದೇವಸ್ಥಾನ ಹುಂಡಿ ಕಳ್ಳತನ ಪ್ರಕರಣದಲ್ಲಿ ಮೂರ್ತಿ ಯಾನೆ ಕತ್ತೆ ಮೂರ್ತಿ ಅರೆಸ್ಟ್-Murthy alias Katte Murthy arrested in bike theft and temple money theft case     

Katte, Murthy

ಹೊಸನಗರ, ಜೂ.10: ಹೊಸನಗರ ಪಟ್ಟಣದ ನಗರ ರಸ್ತೆಯ ಗುರುಶಕ್ತಿ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣ ಕಳವು ಪ್ರಕರಣಗಳನ್ನು ಹೊಸನಗರ ಪೊಲೀಸರು ಭೇದಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ದ್ಯಾವರ್ಸ ನಿವಾಸಿ ಪ್ರಕಾಶ್ ಬಿನ್ ಬಸವಪೂಜಾರಿ ಅವರ ಬೈಕ್ ಕಳ್ಳತನವಾಗಿದ್ದ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 26/2026, ಕಲಂ 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ, ಹೊಸನಗರ ಪಟ್ಟಣದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಬಾಗಿಲಿನ ಬೀಗ ಒಡೆದು ಹುಂಡಿಯಲ್ಲಿದ್ದ ಹಣ ಕಳ್ಳತನ ಮಾಡಿರುವ ಬಗ್ಗೆ ಮಹೇಶ್ ಬಿನ್ ಗಡ್ಲಪ್ಪ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 44/2026, ಕಲಂ 331(4), 305 ಬಿಎನ್‌ಎಸ್ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಪ್ರಕರಣಗಳ ತನಿಖೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ಹೊಸನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿತ್ತು.

ಹೊಸನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಂಕರಗೌಡ ಪಾಟೀಲ್ ನೇತೃತ್ವದ ತಂಡವು ತನಿಖೆ ನಡೆಸಿ, ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಮೂರ್ತಿ.ವಿ @ ಕತ್ತೆಮೂರ್ತಿ (28), ಬೋವಿ ಕಾಲೋನಿ, ಭದ್ರಾವತಿ ಎಂಬ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.

ಆರೋಪಿಯಿಂದ ಕಳುವಾಗಿದ್ದ ₹60 ಸಾವಿರ ಮೌಲ್ಯದ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ ₹1,100 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ಸತೀಶ್ ರಾಜ್, ಸಿಪಿಸಿ ಮಾಯಪ್ಪ ಗೋಕಾವಿ ಹಾಗೂ ಸಿಪಿಸಿ ಸುನಿಲ್ ಅವರು ಭಾಗವಹಿಸಿದ್ದರು.

Murthy alias Katte Murthy arrested in bike theft and temple money theft case

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close