ಆಗುಂಬೆ ಘಾಟ್ ಅಭಿವೃದ್ಧಿಗೆ ಟನಲ್ ಸೇರಿ ಎರಡೂ ಆಯ್ಕೆಗಳ ಪರಿಶೀಲನೆ: ಸಚಿವ ಸತೀಶ್ ಜಾರಕಿಹೊಳಿ- Both options including tunnel being examined for Agumbe Ghat development: Minister Satish Jarkiholi

 SUDDILIVE || SHI

ಆಗುಂಬೆ ಘಾಟ್ ಅಭಿವೃದ್ಧಿಗೆ ಟನಲ್ ಸೇರಿ ಎರಡೂ ಆಯ್ಕೆಗಳ ಪರಿಶೀಲನೆ: ಸಚಿವ ಸತೀಶ್ ಜಾರಕಿಹೊಳಿ- Both options including tunnel being examined for Agumbe Ghat development: Minister Satish Jarkiholi   

Tunnel, agumbe

ತೀರ್ಥಹಳ್ಳಿ, ಜು.15: ಆಗುಂಬೆ ಘಾಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಟನಲ್ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ (ವೈಡ್ನಿಂಗ್) ಸೇರಿದಂತೆ ಎರಡೂ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಯಲಿದ್ದು, ತಾಂತ್ರಿಕ ತಜ್ಞರ ವರದಿಯ ಆಧಾರದ ಮೇಲೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ತೀರ್ಥಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗುಂಬೆ ಘಾಟ್‌ನಲ್ಲಿ ಟನಲ್ ನಿರ್ಮಾಣದ ಪ್ರಸ್ತಾವನೆಯೂ ಇದೆ, ರಸ್ತೆ ಅಗಲೀಕರಣದ ಆಯ್ಕೆಯೂ ಇದೆ. ಯಾವುದು ಉತ್ತಮ ಎಂಬುದನ್ನು ತಾಂತ್ರಿಕ ತಂಡದ ಅಭಿಪ್ರಾಯದ ಮೇರೆಗೆ ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದಿಂದ ಅಗತ್ಯವಿರುವ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಯಾವುದೇ ತೊಂದರೆ ಇಲ್ಲ. ಈಗಾಗಲೇ ಸರ್ಕಾರ ಸಕಾರಾತ್ಮಕ ನಿಲುವು ಹೊಂದಿದ್ದು, ತಾಂತ್ರಿಕ ಅನುಮೋದನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಆಗುಂಬೆ ಘಾಟ್‌ನಲ್ಲಿ ಭವಿಷ್ಯದಲ್ಲಿ ವಾಹನ ಸಂಚಾರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಶಾಶ್ವತ ಪರಿಹಾರದ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕುರಿತು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸಚಿವರು ಹೇಳಿದರು.

ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಎಲ್ಲರ ಅಭಿಪ್ರಾಯವನ್ನು ಪಡೆದು, ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Both options including tunnel being examined for Agumbe Ghat development: Minister Satish Jarkiholi   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close