ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನೇಮಕಾತಿ: ಆಗಸ್ಟ್ 13 ಮತ್ತು 14ರಂದು ನೇರ ಸಂದರ್ಶನ- Recruitment of Direct Representatives in the Postal Department: Direct Interview on August 13th and 14th

 SUDDILIVE || SHIVAMOGGA

ಅಂಚೆ ಇಲಾಖೆಯಲ್ಲಿ ನೇರ ಪ್ರತಿನಿಧಿಗಳ ನೇಮಕಾತಿ: ಆಗಸ್ಟ್ 13 ಮತ್ತು 14ರಂದು ನೇರ ಸಂದರ್ಶನ- Recruitment of Direct Representatives in the Postal Department: Direct Interview on August 13th and 14th  

Post, office

ಶಿವಮೊಗ್ಗ, ಜು.30: ಶಿವಮೊಗ್ಗ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ (RPLI) ಉತ್ಪನ್ನಗಳ ಮಾರಾಟಕ್ಕಾಗಿ ನೇರ ಪ್ರತಿನಿಧಿಗಳ (Direct Agents) ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೇಮಕಾತಿಗೆ ಸಂಬಂಧಿಸಿದ ನೇರ ಸಂದರ್ಶನವು ಆಗಸ್ಟ್ 13 ಮತ್ತು 14ರಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ ವಿಭಾಗ-2ರಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ, ಸ್ವವಿವರ (ಬಯೋಡೇಟಾ) ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳ ನಕಲುಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು ಹಾಗೂ 18 ವರ್ಷ ಪೂರ್ಣಗೊಂಡಿರಬೇಕು. ಈ ನೇಮಕಾತಿಗೆ ಗರಿಷ್ಠ ವಯೋಮಿತಿ ಇರುವುದಿಲ್ಲ, ಹೀಗಾಗಿ ವಿವಿಧ ವಯೋಮಾನದ ಅರ್ಹ ಅಭ್ಯರ್ಥಿಗಳು ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಈ ನೇಮಕಾತಿಯಲ್ಲಿ ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗದಲ್ಲಿ ತೊಡಗಿರುವ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಮತ್ತು ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಉತ್ತಮ ಸಂವಹನ ಕೌಶಲ್ಯ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿರುವ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು ₹5,000 ಮೌಲ್ಯದ ರಾಷ್ಟ್ರೀಯ ಉಳಿತಾಯ ಪತ್ರ (NSC) ಅಥವಾ ಕಿಸಾನ್ ವಿಕಾಸ ಪತ್ರ (KVP) ರೂಪದಲ್ಲಿ ಭದ್ರತಾ ಠೇವಣಿ ಸಲ್ಲಿಸಬೇಕಾಗುತ್ತದೆ. ನೇರ ಪ್ರತಿನಿಧಿಗಳಿಗೆ ಅವರು ಗಳಿಸುವ ವ್ಯವಹಾರದ ಆಧಾರದ ಮೇಲೆ ಇಲಾಖೆಯ ನಿಯಮಾನುಸಾರ ಪ್ರೋತ್ಸಾಹಧನ (ಕಮಿಷನ್) ನೀಡಲಾಗುತ್ತದೆ.

ಆದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಅಥವಾ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿಎ/ಡಿಎ ಸೇರಿದಂತೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಅವರನ್ನು 9036842084 ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಶಿವಮೊಗ್ಗ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recruitment of Direct Representatives in the Postal Department: Direct Interview on August 13th and 14th  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
close