ಸರ್ಕಾರದ ಬಳಿ ಹಣ ಇಲ್ವಾ? ಗ್ರಾಮದ ಯುವಕರಿಂದ ರಸ್ತೆ ಗುಂಡಿಗಳ ದುರಸ್ಥಿ- Doesn't the government have money? Village youths repair potholes

SUDDILIVE || HOLEHONNURU

ಸರ್ಕಾರದ ಬಳಿ ಹಣ ಇಲ್ವಾ? ಗ್ರಾಮದ ಯುವಕರಿಂದ ರಸ್ತೆ ಗುಂಡಿಗಳ ದುರಸ್ಥಿ- Doesn't the government have money? Village youths repair potholes  

Repai, pathholes

ಸಮೀಪದ ಇಟ್ಟಿಗೆಹಳ್ಳಿ ಗ್ರಾಮದ ಕೆಲ ಯುವಕರು ಮಂಗಳವಾರ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳಿಗೆ ಮಣ್ಣು ಸುರಿದುಕೊಂಡು ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಪಡಿಸಿಕೊಂಡರು.

ಭದ್ರಾವತಿ ತಾಲೂಕಿನ ಆನವೇರಿಯಿಂದ ಇಟ್ಟಿಗೆಹಳ್ಳಿಗೆ ಸಂಪರ್ಕ ಕಲ್ಪಿಸುವ 2.5 ಕಿಮಿ ಉದ್ದದ ರಸ್ತೆ ಬುಹುತೇಕ ಕಡೆಗಳಲ್ಲಿ ಗುಂಡಿ ಬಿದ್ದು ಓಡಾಡಕ್ಕೆ ಬಾರದಾಗಿತ್ತು. ಗ್ರಾಮಸ್ಥರು ಸಂಬAದಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗ್ರಾಮದ ರಸ್ತೆ ದುರಸ್ತಿ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗುತ್ತಿದೆ. 

ದ್ವಿಚಕ್ರ ವಾಹನಗಳ ಸಂಚಾರಕ್ಕೂ ರಸ್ತೆ ಗುಂಡಿಗಳು ಅಡೆಚಣೆ ಮಾಡುವುದರಿಂದ ಕೆಲ ವಾಹನ ಸವಾರರು ಆಯಾ ತಪ್ಪಿಬಿದ್ದು ಪೆಟ್ಟು ಮಾಡಿಕೊಂಡಿದ್ದರು. ರಸ್ತೆ ಸಂಚಾರಕ್ಕೆ ಗ್ರಾಮಸ್ಥರು ನಿತ್ಯ ಹರ ಸಾಹಸ ಪಡಬೇಕಾದ ಸಂಕಷ್ಠ ಎದುರಾಗಿತ್ತು. ಕೆಲ ಶಾಲಾ ವಾಹನಗಳ ಚಾಲಕರು ರಸ್ತೆ ಗುಂಡಿಗಳ ಸಮಸ್ಯೆಯನ್ನು ಗ್ರಾಮಸ್ಥರ ಗನಮಕ್ಕೆ ತಂದಿದ್ದಾರೆ. ಕೂಡಲೆ ಕಾರ್ಯಕ್ರವೃತ್ತರಾದ ಯುವಕರ ತಂಡ ಮಾಜಿ ಗ್ರಾಪಂ ಸದಸ್ಯ ತಿಪ್ಪೇಶ್ ಹಾಗೂ ಗ್ರಾಮ ಮುಖಂಡ ಈಶ್ವರಪ್ಪನ ಸಹಕಾರ ಪಡೆದು ತಾವೇ ಟ್ರಾಕ್ಟರ್ ತೆಗೆದುಕೊಂಡು ಹೋಗಿ ಗುಡ್ಡದ ಮಣ್ಣನ್ನು ತುಂಬಿಕೊAಡು ಬಂದು ಗುದ್ದಲಿ ಪುಟ್ಟಿ ಹಿಡಿದು ಮಣ್ಣು ತುಂಬಿ ರಸ್ತೆ ಗುಂಡಿಗಳಿಗೆ ಸುರಿದು ರಸ್ತೆ ಗುಂಡಿ ಸಮಸ್ಯೆಯಿಂದ ತಾತ್ಕಾಲಿಕ ಪರಿಹಾರ ಕಂಡುಕೊAಡಿದ್ದಾರೆ. ಯುವಕರ ರಸ್ತೆ ದುರಸ್ತಿ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಯುವಕರ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲೂ ಅಭಿನಂದನೆಗಳ ಮಹಾಪೂರವೆ ಹರಿದು ಬಂದಿದೆ.

ಗ್ರಾಪಂ ಸದಸ್ಯ ತಿಪ್ಪೇಶ್, ಗ್ರಾಮ ಮುಖಂಡ ಈಶ್ವರಪ್ಪ, ನೀರುಗಂಟಿ ಪರಸಪ್ಪ, ರವಿಕುಮಾರ್, ಸುನೀಲ್, ಮನು, ಮಲ್ಲೇಶ್, ದೇವು, ಪರುಶುರಾಮ್, ಹನುಮಂತ, ಕಿರಣ್ ಇತರರಿದ್ದರು. 

Doesn't the government have money? Village youths repair potholes

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close