SUDDILIVE || SHIVAMOGGA
ಸೊರಬದಲ್ಲಿ ಚಲಿಸುತ್ತಿದ್ದ ಬಸ್ ಅಡ್ಡಗಟ್ಟಿ ಮ್ಯಾನೇಜರ್ ಮೇಲೆ ಕುಡುಗೋಲಿನಿಂದ ಹಲ್ಲೆ-Bus manager attacked with machete after blocking movement in Soraba
ಶಿವಮೊಗ್ಗ: ಹಳೆಯ ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ಬಸ್‌ನ್ನು ಅಡ್ಡಗಟ್ಟಿ ಮ್ಯಾನೇಜರ್‌ನನ್ನು ಹೊರಗೆಳೆದು ಕುಡುಗೋಲಿನಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಸೊರಬ ಪಟ್ಟಣದ ಅಂಚೆ ಕಚೇರಿ ಬಳಿ ನಡೆದಿದೆ.
ಸಾಗರದಿಂದ ಸಂಚರಿಸುತ್ತಿದ್ದ ಎಮಿರೇಟ್ಸ್ ಬಸ್‌ನ ಮ್ಯಾನೇಜರ್ ಮಹಮದ್ ಶಹದ್ (30) ಹಲ್ಲೆಗೊಳಗಾದವರು. ಆರೋಪಿ ಚಿನ್ನಪ್ಪ ಎಂಬಾತ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಸೊರಬದ ಅಂಚೆ ಕಚೇರಿ ಬಳಿ ಬಸ್ ಬರುತ್ತಿದ್ದ ವೇಳೆ ಚಿನ್ನಪ್ಪ ಬಸ್‌ನ್ನು ಅಡ್ಡಗಟ್ಟಿದ್ದಾನೆ. ಬಳಿಕ ಬಸ್‌ನಿಂದ ಮಹಮದ್ ಶಹದ್ ಅವರನ್ನು ಹೊರಗೆಳೆದು, “ನನ್ನ ಬಸ್ಸಿನ ಹಣ ಕೊಡು” ಎಂದು ಜಗಳ ತೆಗೆದಿದ್ದಾನೆ ಎನ್ನಲಾಗಿದೆ.
ಈ ವೇಳೆ ಆರೋಪಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದು, ಕುಡುಗೋಲಿನ ಏಟಿನಿಂದ ಶಹದ್ ಅವರ ಎಡಗೈಗೆ ಗಾಯವಾಗಿದೆ. ಬಳಿಕ ಆರೋಪಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಮಹಮದ್ ಶಹದ್ ಅವರನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಸೊರಬ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಚಿನ್ನಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಪಿಎಸ್ಐ ನವೀನ್ ನೇತೃತ್ವದ ಪೊಲೀಸ್ ತಂಡ ಸ್ಥಳ ಮಹಜರು ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದೆ.
ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
Bus manager attacked with machete after blocking movement in Soraba
