ಶುಕ್ರವಾರ, ಆಗಸ್ಟ್ 2, 2024

ನ್ಯಾಯಾಲಯದ ಕಲಾಪಗಳಿಗೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್!



ಸುದ್ದಿಲೈವ್/ಶಿವಮೊಗ್ಗ


23 ಮನೆಗಳ್ಳತನ ಪ್ರಕರಣದಲ್ಲಿ ಆರೋಪಿತನೋರ್ವ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ತಲೆಮರಿಸಿದ್ದವನನ್ನ ದೊಡ್ಡಪೇಟೆ ಪೊಲೀಸರು ಹಿಡಿದು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.


ಇಬ್ರಾಹಿಂ @ ಇಬ್ಬು, 30 ವರ್ಷ, ಅಶೊಕ ನಗರ ಶಿವಮೊಗ್ಗ  ಈತನು ದೊಡ್ಡಪೇಟೆ ಪೊಲೀಸ್ ಠಾಣೆಯ 11 ಪ್ರಕರಣಗಳು,  ಸಾಗರ ಗ್ರಾಮಂತರ ಪೊಲೀಸ್ ಠಾಣೆಯ 5 ಪ್ರಕರಣಗಳು,  ವಿನೋಬನಗರ ಪೊಲೀಸ್ ಠಾಣೆಯ 3  ಪ್ರಕರಣಗಳು, ತುಂಗಾನಗರ ಪೊಲೀಸ್ ಠಾಣೆಯ 2 ಪ್ರಕರಣಗಳು, ಕುಂಸಿ ಪೊಲೀಸ್ ಠಾಣೆಯ 1 ಪ್ರಕರಣ ಮತ್ತು  ಸಾಗರ ಟೌನ್  ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು  23  ಮನೆಗಳ್ಳತನ ಪ್ರಕರಣಗಳಲ್ಲಿ  ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು,  ಘನ ನ್ಯಾಯಾಲಯವು ಆರೋಪಿತನ ವಿರುದ್ಧ ದಸ್ತಗಿರಿ ವಾರೆಂಟ್ ಅನ್ನು  ಹೊರಡಿಸಿರುತ್ತದೆ. 


ದಿನಾಂಕಃ 01-08-2024 ರಂದು  ರವಿ ಪಾಟೀಲ್ ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ರುದ್ರೇಶ್, ಸಿ.ಹೆಚ್.ಸಿ,  ಮಂಜಪ್ಪ ಎಂ ಹೆಚ್, ಸಿ.ಹೆಚ್.ಸಿ, ರವೀಂದ್ರ ಪ್ರಸಾದ್, ಸಿ.ಪಿ.ಸಿ ಹಾಗೂ ಮಂಜುನಾಥ್ ನಾಯ್ಕ್, ಸಿ.ಪಿ.ಸಿ ರವರುಗಳ ತಂಡವು ಆರೋಪಿ ಇಬ್ರಾಹಿಂ @ ಇಬ್ಬು ಈತನನ್ನು ದಸ್ತಗಿರಿ ಮಾಡಿ, ಘನ 2ನೇ  ಜೆ ಎಂ ಎಫ್ ಸಿ ನ್ಯಾಯಾಲಯ ಶಿವಮೊಗ್ಗದ ಮುಂದೆ ಹಾಜರ್ ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. 


ಇದನ್ನೂ ಓದಿ-https://www.suddilive.in/2024/08/blog-post_47.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ