ಶುಕ್ರವಾರ, ಆಗಸ್ಟ್ 2, 2024

ಮನೆಗಳ್ಳವು ಪ್ರಕರಣದ ಆರೋಪಿಗಳು ಅರೆಸ್ಟ್



ಸುದ್ದಿಲೈವ್/ಶಿವಮೊಗ್ಗ


ಬಾಪೂಜಿನಗರದ ನಿವಾಸಿ ದಸ್ತಗೀರ್ ಖಾನ್ @ ಬಾಬು ಎಂಬುವರ ಮನೆಯ ಒಳಗೆ ಇದ್ದ ಬಂಗಾರದ ಒಡವೆಗಳು ಮತ್ತು ಹಣವನ್ನು ಕಳವು ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿದಂತೆ  ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 


ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಭೂಮಾರಡ್ಡಿ, ಕಾರಿಯಪ್ಪ ಎ.ಜಿ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪನವರ ಮೇಲ್ವಿಚಾರಣೆಯಲ್ಲಿ ಕೋಟೆ ಠಾಣೆ ಪಿಐ ಎಮ್. ಎಸ್ ದೀಪಕ್,   ಪಿ.ಎಸ್.ಐ ರವರಾದ  ಕುಮಾರ್, ಸಿ.ಅರ್.ಕೊಪ್ಪದ್ ಹಾಗೂ ಸಿಬ್ಬಂದಿಯವರಾದ ಎಎಸ್ಐ ಟಿ. ಶ್ರೀಹರ್ಷ, ಹೆಚ್.ಸಿ. ರವರಾದ ಅಣ್ಣಪ್ಪ, ನಾಗರಾಜ್, ಸಿ.ಪಿ.ಸಿ ರವರಾದ ಪ್ರಕಾಶ್, ಗೊರವರ ಅಂಜಿನಪ್ಪ, ಕಿಶೋರ, ಮಪಿಸಿ ಜಯಶ್ರೀ .ಎಲ್ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ. 


ಸದರಿ ತನಿಖಾ ತಂಡವು ದಿನಾಂಕಃ 31-07-2024 ರಂದು ಪ್ರಕರಣದ ಆರೋಪಿತರಾದ 1) ಮೊಹಮ್ಮದ್ ರಫೀಕ್ @ ಕಾಣ, 25 ವರ್ಷ, ಚಿಕ್ಕಲ್, ಶಿವಮೊಗ್ಗ ಮತ್ತು 2) ಅತಾವುಲ್ಲಾ, 24 ವರ್ಷ,  ಬಾಪೂಜಿನಗರ, ಶಿವಮೊಗ್ಗ ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ  ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ 7,62,000/- ರೂಗಳ 127 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. 


ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.


ಇದನ್ನೂ ಓದಿ-https://www.suddilive.in/2024/08/blog-post_24.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ