SUDDILIVE || SHIVAMOGGA
ಒಂದು ವಾರದ ಒಳಗೆ ಡಾ.ಅಶ್ವಿನ್ ಹೆಬ್ಬಾರನ್ನ ಬಂಧಿಸಿ ವಕೀಲ ಶ್ರೀಪಾಲ್-Lawyer Sripal demands to arrest Dr. Ashwin Hebbar within a week
ಮೆಗ್ಗಾನ್ ಆಸ್ಪತ್ರೆ ಲೈಂಗಿಕ ಹಗರಣ ಕುರಿತಂತೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಸೋಸಿಯೇಷನ್ ಕೆ.ಪಿ.ಶ್ರೀಪಾಲ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಸರ್ಜನ್ ಅಶ್ವಿನ್ ಹೆಬ್ನಾರ್ ಅನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಡಾ. ಆಶ್ವಿನ್ ಹೆಬ್ಬಾರ್ ಹೊರರಾಜ್ಯದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೆದಿತ್ತು. ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿತ್ತು. ಅಂದಿನ ಎಸ್ಪಿ ಲಕ್ಷ್ಮೀ ಪ್ರಸಾದ್ ಕೂಡ ಗಂಭೀರವಾಗಿ ಪರಿಗಣಿಸಿದ್ದರು. ಹೈಕೋರ್ಟ್ ಮೊರೆ ಹೋಗಿ ಸ್ಟೈ ತಂದಿದ್ದರು ಎಂದರು.
ಈ ನಡುವೆ ಒಂದೂವರೆ ಸಾವಿರ ಹೊರರೋಗಿ ಸಾವಿರ ಜನರ ಒಳರೋಗಿಗಳಿದ್ದಾರೆ. ಮೆಗ್ಗಾನ್ ಹಲವರ ಜೀವ ಉಳಿಸುತ್ತಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ನೀಡುವುದರಿಂದ ಹೆಚ್ಚುವರಿ ಚಿಕಿತ್ಸೆ ಆಗಲ್ಲ. ಹೆಚ್ಚುವರಿ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರೆಫರ್ ಮಾಡಬೇಕಾಗಿದೆ. ಹೆಬ್ಬಾರ್ ಮೇಲೆ ಹತ್ತು ಹಲವು ಆರೋಪಗಳಿವೆ.
ವಿದ್ಯಾರ್ಥಿಗಳನ್ನು ದುರುಪಯೋಗ ಮಾಡಿಕೊಳ್ಲುತ್ತಿದ್ದಾರೆ. ೧೪ರಂದು ಘಟನೆ ಇದೆ. ಮೆಗ್ಗಾನ್ ಆಸ್ಪತ್ರೆ ಪಾಸ್ಟ್ ಕಮಿಟಿ ಮುಂದೆ ದೂರು ಕೊಟ್ಟಿದ್ದಾರೆ. ಕಮಿಟಿ ಗಂಭೀರವಾಗಿ ಪರಿಗಣಿಸಿಲ್ಲ. ಬಂಧನಕ್ಕೆ ಬಿಟ್ಟಿಲ್ಲ. ಅಮಾನತು ಮಾಡಿಲ್ಲ. ಅಧಿಕೃತವಾಗಿ ಎಫ್ ಐಆರ್ ದಾಖಲಾಗಿರುವುದು ಇದು ಎರಡನೇಯದ್ದಾಗಿದೆ ಎಂದು ವಿವರಿಸಿದರು.
ಸಣ್ಣಪುಟ್ಟರನ್ನು ಬಂಧಿಸುತ್ತಾರೆ. ಆದರೆ ಈ ವೈದ್ಯರ ಬಂಧನಕ್ಕೆ ವಿಳಂಭವೇಕೆ ಎಂದು ಪ್ರಶ್ನಿಸಿದ ವಕೀಲರು ನಿರ್ದೇಶಕ ಸೇರಿ ಇಡೀ ಮೆಗ್ಗಾನ್ ಆಡಳಿತ ಮಂಡಳಿಯನ್ನು ಅಮಾನತಿನಲ್ಲಿಡಬೇಕು. ಒಂದು ದಿನದೊಳಗೆ ಬಂಧಿಸಬೇಕು. ಬಂಧಿಸದಿದ್ದರೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲಾಗುವುದು ಎಂದು ಗುಡುಗಿದರು.
Sripal demands to arrest Dr. Ashwin Hebbar