SUDDILIVE || SHIVAMOGGA
ಮಂಟಪ ಮುಳುಗಲು ಕೆಲವು ಅಡಿ ಬಾಕಿ-The pavilion is a few feet away from sinking.
ಶಿವಮೊಗ್ಗದಲ್ಲಿ ಮಳೆ ಅಷ್ಟೊಂದು ಸುರಿಯದಿದ್ದರೂ ಸಹ ತುಂಗಾ ನದಿ ಬಹುತೇಕ ಬರ್ತಿಯಾಗಿದೆ ಮಂಟಪ ಮುಳುಗಲು ಕೆಲವು ಅಡಿಗಳು ಮಾತ್ರ ಬಾಕಿ ಉಳಿದಿದೆ
ಇಂದು ಬೆಳಿಗ್ಗೆ ತುಂಗಾ ಜಲಾಶಯಕ್ಕೆ ರೂ.30,000 ಕಿಸೆ ನೀರು ಹರಿದು ಬರುತ್ತಿತ್ತು ಮಧ್ಯಾಹ್ನದ ನಂತರ ಈ ನೀರು 44,000 ಒಳಹರಿವಿಗೆ ಸಾಕ್ಷಿಯಾಯಿತು ಪರಿಣಾಮ ತುಂಗಾ ನದಿಗೆ ನೀರಿನ ಒಳಹರಿವಿನಷ್ಟೇ ವರಹರಿವು ಬಿಡಲಾಗಿದೆ ಇದರಿಂದಾಗಿ ಜಲಾಶಯ ದ ಮಂಟಪ ಮುಳುಗಲು ಕೆಲವು ಅಡಿಗಳು ಮಾತ್ರ ಬಾಕಿ ಉಳಿದಿದೆ
ಶಿವಮೊಗ್ಗ ಸಿಟಿಯಲ್ಲಿ ಮಳೆಯ ಕಣ್ಣ ಮುಚ್ಚಾಲೆ ಮುಂದುವರೆದಿದೆ ಶಿವಮೊಗ್ಗದಲ್ಲಿ ಈಗಾಗಲೇ ವಾಡಿಕೆ ಮಳೆಗೆ ಅಂತ ಹೆಚ್ಚಿನ ಮಳೆಯ ಯಾಗಿದೆ. ಸರಾಸರಿಯಲ್ಲಿ 336 ಪಾಯಿಂಟ್ 69 ಮಳೆಯಾಗಬೇಕಾಗಿದ್ದ ಜೂನ್ ತಿಂಗಳಲ್ಲಿ 354.84 ಮಿಮಿ ಮಳೆಯಾಗಿದೆ ತೀರ್ಥಳ್ಳಿ ಸಾಗರ ನಾಲ್ಕು ತಾಲೂಕುಗಳಲ್ಲಿ ಸರಾಸರಿ ಮಳೆಗಿಂತ ಹೆಚ್ಚಿಗೆ ಮಳೆಯಾಗಿದೆ
ಜಲಾಶಯಗಳ ಮಟ್ಟ
ಲಿಂಗನಮಕ್ಕಿ ಜಲಾಶಯಕ್ಕೂ ಸಹ ಅಧಿಕ ನೀರು ಹರಿದು ಬರುತ್ತಿದ್ದು ಇಂದು ಬೆಳಿಗ್ಗೆ 46,219 ಕ್ಯೂ ಸೆಟ್ ನೀರು ಒಳಹರಿವಿತ್ತು ಮಧ್ಯಾಹ್ನದ ನಂತರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ ಪರಿಣಾಮ ಇಂದು ಜಲಾಶಯದ ಮಟ್ಟ 1778.95 ಅಡಿ ನೀರು ಸಂಗ್ರಹವಾಗಿದೆ.
ಅದರಂತೆ ಭದ್ರ ಜಲಾಶಯದ ನೀರಿನ ಮಟ್ಟ 155.5 ಅಡಿಗೆ ಏರಿಕೆಯಾಗಿದೆ. 186 ಅಡಿ ನೀರಿನ ಸಂಗ್ರಹವಿರುವ ಜಲಾಶಯದಲ್ಲಿ ನೀರಿನ ಮಟ್ಟ 155.5 ಅಡಿಗೆ ಏರಿಕೆಯಾಗಿದೆ. 15 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ.
The pavilion is a few feet away from sinking.