SUDDILIVE || SHIVAMOGGA
ವಿದ್ಯಾರ್ಥಿ ಸಂಕೇತ್ ಹತ್ಯೆ ಹಿಂದೆ ಡ್ರಗ್ಸ್ ಜಾಲದ ಸಂಶಯ: ಉನ್ನತ ಮಟ್ಟದ ತನಿಖೆಗೆ ಶರಣ್ ಪಂಪುವೆಲ್ ಆಗ್ರಹ-Drug ring suspected behind student Sanket's murder: Sharan Pumpwel demands high-level investigation
ನಗರದ ಹೊರವಲಯದ ಊರುಗಡೂರಿನಲ್ಲಿ 10ನೇ ತರಗತಿ ವಿದ್ಯಾರ್ಥಿ ಸಂಕೇತ್ (16) ಎಂಬಾತನನ್ನು ಅನ್ಯಕೋಮಿನ ನಾಲ್ವರು ಬಾಲಕರು ಹತ್ಯೆ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, "ಸ್ಪೆಷಲ್ ಕ್ಲಾಸ್ ಮುಗಿಸಿ ಬರುತ್ತಿದ್ದ ಬಾಲಕನ ಮೇಲೆ ನಡೆಸಿರುವ ಈ ಅಮಾನವೀಯ ದಾಳಿಯ ಹಿಂದೆ ಡ್ರಗ್ಸ್ ದಂಧೆ ಹಾಗೂ ವ್ಯವಸ್ಥಿತ ಸಂಚು ಇರುವ ಸಂಶಯವಿದೆ. ಅಪ್ರಾಪ್ತ ಮಕ್ಕಳಲ್ಲಿ ಇಷ್ಟು ದೊಡ್ಡ ಮಟ್ಟದ ದ್ವೇಷದ ಮಾನಸಿಕತೆ ತುಂಬುತ್ತಿರುವ ಶಕ್ತಿಗಳು ಯಾವುವು ಎಂಬುದು ಪತ್ತೆಯಾಗಬೇಕು," ಎಂದು ಒತ್ತಾಯಿಸಿದ್ದಾರೆ.
ಕೊಲೆಗಡುಕರಿಗೆ ಡ್ರಗ್ಸ್ ಪೂರೈಕೆಯಾಗುತ್ತಿರುವ ಜಾಲದ ಬಗ್ಗೆ ತನಿಖೆಯಾಗಬೇಕು ಮತ್ತು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಿ ಮೃತ ಸಂಕೇತ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
Drug ring suspected behind student Sanket's murder: Sharan Pumpvel demands high-level investigation
