SUDDILIVE || SHIVAMOGGA
ಹಾಡೋನಹಳ್ಳಿಯಲ್ಲಿ ಪದೇ ಪದೇ ದಾಳಿ ನಡೆದರೂ ತಡೆಯಲಾಗದ ಅಕ್ರಮ ಮರಳುಗಾರಿಕೆ- Illegal sand mining in Hadonahalli unstoppable despite repeated raids
ಮರಳು ವಾಶ್ ಮಾಡಿ 60 ಮೆಟ್ರಿಕ್ ಟನ್ ಮರಳನ್ನ ಅಕ್ರಮವಾಗಿ ಸಂಗ್ರಹಿಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಾಳಿ ನಡೆಸಿದೆ. ಅಕ್ರಮ ಮರಳನ್ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಸಾಗಿಸಿದೆ. ಆದರೆ ಯಾವನೂ ಈ ದಾಳಿಯಲ್ಲಿ ಬಂಧನವಾಗಿಲ್ಲ.
ಹಾಡೋನಹಳ್ಳಿಯಲ್ಲಿ ತುಂಗಭದ್ರ ನದಿಯಲ್ಲಿ ಅಕ್ರಮ ಮರಳನ್ನ ಎತ್ತಿ ಸಾಗಾಣಿಕೆ ಮಾಡಲಾಗುತ್ತಿದೆವೆಂದು ದೂರು ಬಂದ ಹಿನ್ನಲೆಯಲ್ಲಿ ಅಧಿಕಾರಿ ಪ್ರಯಾ ದೊಡ್ಡಗೌಡರು ದಾಳಿ ನಡೆಸಿದ್ದಾರೆ. ದೂರು ಆದಾರದ ಮೇರೆಗೆ ದಾಳಿ ನಡೆಸಿದಾಗ ಮರಳುವಾಶ್ ಮಾಡಿ ಮರಳು ಎತ್ತುವಳಿ ಮಾಡಲು ಕೆಎ 14 TB 8548 ಕ್ರಮಸಂಖ್ಯೆ ಟ್ರಾಕ್ಟರ್ ಇಂಜಿನ್ ಅಳವಡಿಸಲಾಗಿರುವ ಮೋಟಾರ್ ಪುಲ್ಲಿ ಇರುತ್ತದೆ.
ನದಿಯ ದಂಡೆಯ ಮೇಲೆ 60 ಮೆಟ್ರಿಕ್ ಟನ್ ಮರಳ ಸಂಗ್ರಹವಾಗಿರುವುದು ಪತ್ತೆಯಾಗಿದೆ. ಟ್ರ್ಯಾಕ್ಟರ್ ಮತ್ತು ಪುಲ್ಲಿಯನ್ನ ವಶಕ್ಕೆ ಪಡೆಯಲಾಗಿದೆ. ಇಷ್ಟೆಲ್ಲಾ ಪತ್ತೆಯಾದರೂ ಯಾವನೂ ಪತ್ತೆಯಾಗಲ್ಲ. ಯಾರನ್ನೂ ಬಂಧಿಸಿಲ್ಲ. ಇಂತಹ ಕಣ್ಣಾಮುಚ್ಚಾಲೆಯ ದಾಳಿ ಎಂದಿನಂತೆ ಇಲಾಖೆಯವತಿಯಿಂದ ಮುಂದುವರೆದಿದೆ.
ಹಾಡೋನಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ದಾಳಿ ನಡೆದಿಲ್ಲ. ಅಲ್ಲಿ ನದಿಗೆ ಮೋಟಾರ್ ಪುಲ್ಲಿ ಹಾಕಿ ಮರಳು ತೆಗೆದಿರುವುದು ಸಹ ಮೊದಲಬಾರಿಗೂ ಅಲ್ಲಿ ಇದೇ ಒಂದು ವರ್ಷದ ಹಿಂದೆ ಇದೇ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ತಹಶೀಲ್ದಾರ್ ಜೊತೆಗೆ ಹೋಗಿ ದಾಳಿ ನಡೆಸಿದ್ದರು. ಅದೇ ಪುಲ್ಲಿಗೆ ಸುತ್ತಿಗೆ ತೆಗೆದುಕೊಂಡು ಹೊಡೆದು ಬಂದಿದ್ದರು. 2025 ಜನವರಿ ಮೊದಲವಾರದಲ್ಲಿ ದಾಳಿ ಮಾಡಿ ಪುಲ್ಲಿ ಕಿತ್ತು ಬಂದಿದ್ದರು. ಆದರೂ ಮರಳು ಮುಂದುವರೆದಿದೆ.
ಇದೇ ಎಪ್ರಿಲ್ 2025 ಕೊನೆಯವಾರದಲ್ಲೂ ಎಸಿ ನೇತೃತ್ವದಲ್ಲಿ ದಾಳಿ ನಡೆದಿದೆ. 20 ಮೆಟ್ರಿಕ್ ಟನ್ ಮರಳು ಪತ್ತೆಯಾಗಿತ್ತು. ಇದಕ್ಕೂ ಹಿಂದೆ 2024 ರಲ್ಲಿ ಇದೇ ಹಾಡೋನಹಳ್ಳಿಯಲ್ಲಿ ಅಕ್ರಮಮರಳುಗಾರಿಕೆ ಮೇಲೆ ದಾಳಿ ನಡೆದಿದೆ. ಪದೇ ಪದೇ ಅಕ್ರಮಮರಳುಗಾರಿಕೆಗೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ ಎಂಬುದು ಈ ದಾಳಿಯಿಂದ ತಿಳಿದು ಬರುತ್ತಿದೆ.
Illegal sand mining in Hadonahalli unstoppable despite repeated raids
