ನೇಣು ಬಿಗಿದುಕೊಂಡು ಅಪ್ರಾಪ್ತೆ ಆತ್ಮಹತ್ಯೆ-ಪ್ರೀತಿಸು ಎಂದು ಹಿಂದೆ ಬಿದ್ದಿದ್ದ ಯುವಕನ ವಿರುದ್ಧ ದೂರು-Minor commits suicide by hanging himself - Complaint filed against young man who fell behind in love

 SUDDILIVE || BHADRAVATHI

ನೇಣು ಬಿಗಿದುಕೊಂಡು ಅಪ್ರಾಪ್ತೆ ಆತ್ಮಹತ್ಯೆ-ಪ್ರೀತಿಸು ಎಂದು ಹಿಂದೆ ಬಿದ್ದಿದ್ದ ಯುವಕನ ವಿರುದ್ಧ ದೂರು-Minor commits suicide by hanging himself - Complaint filed against young man who fell behind in love      

Love, fell

ಭದ್ರಾವತಿಯ ಹೊಸಮನೆಯಲ್ಲಿ ಅಪ್ರಾಪ್ತೆಯೊಬ್ಬಳು ನೇಣು ಬಿಗಿದುಕೊಂಡು ಸಾವುಕಂಡಿದ್ದಾಳೆ. ಯುವಕನೋರ್ವ ಪ್ರೀತಿಸುವಂತೆ ಒತ್ತಾಯಿಸಿದ್ದಕ್ಕೆ ಬಾಲಕಿ ಸಾವುಕಂಡಿದ್ದಾಳೆ.

ಈ ಪ್ರಕರಣದಲ್ಲಿ ಪ್ರೀತಿಸುತ್ತಿದ್ದ ಹುಡುಗನ ವಿರುದ್ಧ ಎರಡು ಬಾರಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಏನೂ ಪ್ರಯೋಜನವಾಗಿಲ್ಲ. ಯುಗಾದಿ ಹಬ್ಬದ ದಿನವೇ ಸಂಜೆ ದ್ವಿತೀಯ ಪಿಯುಸಿ ಓದುತ್ತಿದ್ದ ಕೋಮಲ ಎಂಬ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವುಕಂಡಿದ್ದಾಳೆ. 

ಹೊಸಮನೆ ಕೆರೆಕೋಡಮ್ಮ ದೇವಸ್ಥಾನದ ಬಳಿ ವಾಸವಾಗಿದ್ದ ಭರತ್ ಎಂಬ ಯುವಕ ಕೋಮಲ ಎಂಬ ಯುವತಿಯನ್ನ ಪರಿಚಯ ಮಾಡಿಕೊಂಡು ಅವಳ ಹಿಂದೆ ಬಿದ್ದಿದ್ದ. ಪ್ರೀತಿಸು ಎಂದು ಬೆನ್ನುಹತ್ತಿದ್ದ ಭರತ್ ಗೆ 10 ತಿಂಗಳ ಹಿಂದೆ ಹೊಸಮನೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಕೋಮಲಳ ತಾಯಿ ದೂರು ನೀಡಿದ್ದರು. 

ಇದಾದ ಬಳಿಕ ಮಾ.14 ನೇ ತಾರೀಕು ಕೋಮಲಳ ಬೆನ್ನು ಬಿಡದ ಪ್ರೇಮಿ ಭರತ್ ವಿರುದ್ಧ ಇದೇ ಠಾಣೆಯಲ್ಲಿ ಮತ್ತೊಂದು ದೂರು ನೀಡಲಾಗಿತ್ತು. ಆದರೂ ಆತ ಆಕೆಯನ್ನ ಪ್ರೀತಿಸುವಂತೆ ಕಾಡುತ್ತಿದ್ದ. ಯುಗಾದಿ ಹಬ್ಬದ ದಿನ ಸಂಜೆ 5 ಗಂಟೆಗೆ ಸುಮಾರಿಗೆ ಕೋಮಲ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ತಾಯಿ ಯಾರ ಜೊತೆ ಮಾತನಾಡುತ್ತಿರುವೆ ಎಂದು ಪ್ರಶ್ನಿಸಿದ್ದಾಳೆ.

ಭರತ್ ಕರೆ ಮಾಡಿ, ನನ್ನ‌ನ್ನ ಪ್ರೀತಿ ಮಾಡು, ನನ್ನ ಜೊತೆ ಬಾ ಇಲ್ಲವೆಂದರೆ ನೀನು ಬದುಕಲು ಲಾಯಕ್ಕಿಲ್ಲ ಎನ್ನುತ್ತಿದ್ದಾನೆ. ನನಗೆ ತುಂಬ ಕಿರಿಕಿರಿ ಆಗುತ್ತಿದೆ ಎಂದು ಹೇಳಿಕೊಂಡಿದ್ದಳು. ಸಂಜೆ ಹೊತ್ತಿಗೆ ತಾಯಿ ಹೋಟೆಲ್ ನಡೆಸುತ್ತಿದ್ದರಿಂದ ಹೋಟೆಲ್ ಕಡೆಗೆ ಹೋದಾಗ 6 ಗಂಟೆಗೆ ಮಗ ಬಂದು ಅಕ್ಕ ನೇಣು ಹಾಕಿಕೊಂಡಿರುವುದಾಗಿ ತಾಯಿಗೆ ವಿಷಯ ಮುಟ್ಟಿಸಿದ್ದಾನೆ. 

ಮನೆಗೆ ಹೋಗಿ ನೋಡಿದಾಗ ಮಗಳು ಕೋಮಲ ನೇಣು ಬಿಗಿದು ಆತಹತ್ಯೆ ಮಾಡಿಕೊಂಡಿದ್ದು ಆಕೆಯ ಆತ್ಮಹತ್ಯೆಗೆ ಭರತ್ ಕಾರಣನಾಗಿದ್ದಾನೆ. ಪ್ರೀತಿಸು ಎಂದು ಬೆನ್ನುಬಿದ್ದಿದ್ದ ಭರತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಯಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Minor commits suicide by hanging himself - Complaint filed against young man who fell behind in love

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close