ಜಯನಗರ ಪೊಲೀಸ್ ಠಾಣೆಯಲ್ಲಿ ಬಹಿರಂಗ ಹರಾಜು-Public auction at Jayanagar Police Station

 SUDDILIVE || SHIVAMOGGA

ಜಯನಗರ ಪೊಲೀಸ್ ಠಾಣೆಯಲ್ಲಿ ಬಹಿರಂಗ ಹರಾಜು-Public auction at Jayanagar Police Station     

Public, action

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಹಾಗೂ ದೀರ್ಘಕಾಲದಿಂದ ವಾರಸುದಾರರು ಪತ್ತೆಯಾಗದ ಒಟ್ಟು 8 ವಾಹನಗಳನ್ನು ಏಪ್ರಿಲ್ 6 ರಂದು ಬಹಿರಂಗ ಹರಾಜು ಹಾಕಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಶಿವಮೊಗ್ಗದ 1ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಈ ವಾಹನಗಳ ವಿಲೇವಾರಿಗೆ ಆದೇಶ ನೀಡಿದ್ದು, ಅದರನ್ವಯ ಈ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹರಾಜಿನಲ್ಲಿ ಇರಿಸಲಾಗಿರುವ ಎಂಟು ವಿವಿಧ ಮಾದರಿಯ ವಾಹನಗಳನ್ನು ಅವುಗಳ ಪ್ರಸ್ತುತ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುತ್ತದೆ. 

ಬಹಿರಂಗ ಹರಾಜು ಪ್ರಕ್ರಿಯೆಯು ಏಪ್ರಿಲ್ 6 ರಂದು ಬೆಳಗ್ಗೆ 10 ಗಂಟೆಗೆ ಜಯನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಡೆಯಲಿದೆ. ಆಸಕ್ತ ಸಾರ್ವಜನಿಕರು ನಿಗದಿತ ಸಮಯದಲ್ಲಿ ಠಾಣೆಗೆ ಭೇಟಿ ನೀಡಿ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Public auction at Jayanagar Police Station

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close