PDO ದಂಪತಿಯ ಮನೆಗೆ ಕನ್ನ: 300–400 ಗ್ರಾಂ ಚಿನ್ನ ಕಳುವಾಗಿರುವ ಶಂಕೆ-Burglary at PDO couple's home: Suspected theft of 300–400 grams of gold

 SUDDILIVE || SHIVAMOGGA

PDO ದಂಪತಿಯ ಮನೆಗೆ ಕನ್ನ: 300–400 ಗ್ರಾಂ ಚಿನ್ನ ಕಳುವಾಗಿರುವ ಶಂಕೆ-Burglary at PDO couple's home: Suspected theft of 300–400 grams of gold   
Pdo, bulgery

ಬೀಗ ಹಾಕಿದ್ದ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದ ವಿದ್ಯಾನಗರದಲ್ಲಿರುವ ಜ್ಯೋತಿರಾವ್ ಬಡಾವಣೆಯಲ್ಲಿ ನಡೆದಿದೆ.

ಕಳುವಿಗೆ ಒಳಗಾದ ಮನೆ PDO ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಿಂಗರಾಜು ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ನಿಂಗರಾಜು ಹಾಗೂ ಅವರ ಪತ್ನಿ ಇಬ್ಬರೂ PDOಗಳಾಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಕಳುವಾಗಿವೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಮನೆಯವರು ನೀಡಿರುವ ಮಾಹಿತಿಯಂತೆ ಸುಮಾರು 300ರಿಂದ 400 ಗ್ರಾಂನಷ್ಟು ಚಿನ್ನ ಮನೆಯಲ್ಲಿತ್ತು ಎನ್ನಲಾಗಿದ್ದು, ನಿಖರವಾಗಿ ಎಷ್ಟು ಚಿನ್ನ ಹಾಗೂ ಬೆಳ್ಳಿ ಕಳುವಾಗಿದೆ ಎಂಬುದು ಪೊಲೀಸ್ ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಮನೆಗೆ ಬೀಗ ಹಾಕಿಕೊಂಡು ದಂಪತಿ ಇಬ್ಬರೂ ಕೆಲಸಕ್ಕೆ ತೆರಳಿದ್ದರು. ಇದೇ ಸಮಯವನ್ನು ಗಮನಿಸಿ ಕಳ್ಳರು ಮನೆಗೆ ನುಗ್ಗಿ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಿಂಗರ್‌ಪ್ರಿಂಟ್ ತಜ್ಞರ ತಂಡ ಸ್ಥಳಕ್ಕೆ ತೆರಳಿ ಮನೆಯೊಳಗೆ ಹಾಗೂ ಕಳ್ಳರು ಪ್ರವೇಶಿಸಿರುವ ಸಾಧ್ಯತೆಯಿರುವ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿದೆ. ಕಳ್ಳರ ಯಾವುದೇ ಸುಳಿವು ಅಥವಾ ಬೆರಳಚ್ಚು ಪತ್ತೆಯಾಗಿದೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

ಘಟನೆಯ ಹಿನ್ನೆಲೆಯಲ್ಲಿ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಸಾಧ್ಯತೆಯಿದ್ದು, ಕಳ್ಳರು ಯಾವ ಮಾರ್ಗದಲ್ಲಿ ಬಂದು ಹೋಗಿದ್ದಾರೆ ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Burglary at PDO couple's home: Suspected theft of 300–400 grams of gold   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close