ಬಜಾರ್ ನ ಮಸೀದಿ ದಾಟಿದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ: ಘೋಷಣೆಗಳ ನಡುವೆ ಮೆರವಣಿಗೆ-Hindu Mahasabha Ganapati Rajbeedi festival passes through the mosque in the bazaar: procession amidst slogans

 SUDDILIVE || SHIVAMOGGA

ಬಜಾರ್ ನ ಮಸೀದಿ ದಾಟಿದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ: ಘೋಷಣೆಗಳ ನಡುವೆ ಮೆರವಣಿಗೆ-Hindu Mahasabha Ganapati Rajbeedi festival passes through the mosque in the bazaar: procession amidst slogans    
Hindu, mahasabha


ಶಿವಮೊಗ್ಗ: ನಗರದ 82ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಶುಕ್ರವಾರವೂ ಭಕ್ತಿಭಾವ ಹಾಗೂ ಸಂಭ್ರಮದ ನಡುವೆ ಮುಂದುವರಿದಿದ್ದು, ನಗರದ ಬಜಾರ್ ಪ್ರದೇಶದಲ್ಲಿರುವ ಮಸೀದಿಯನ್ನ ಗಣಪತಿ ಮೆರವಣಿಗೆ ದಾಟಿ ಮುಂದೆ ಸಾಗಿದೆ. 

ಈ ವೇಳೆ ಗಣಪತಿ ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ ಮಾಜಿ ಡಿಸಿಎಂ ಈಶ್ವರಪ್ಪ ಹಾಗೂ ಪುತ್ರ ಕಾಂತೇಶ್ ಗಣೇಶನನ್ನ ಹೊತ್ತ ಟ್ರ್ಯಾಕ್ಟರ್ ನಲ್ಲಿಯೇ ಇದ್ದಿದ್ದು ಮೆರವಣಿಗೆಯ ಮತ್ತೊಂದು ವಿಷಯವಾಗಿದೆ. ಮುಂಭಾಗದಲ್ಲಿ ಶಾಸಕ ಚೆನ್ನಿಯವರನ್ನ ಅಭಿಮಾನಿಗಳೊಬ್ವರು ಭುಜದ ಮೇಲೆ ಹೊತ್ತು ಮೆರೆದ ದೃಶ್ಯಗಳು ಕಂಡುಬಂದವು. 

ಕೋಟೆ ಭೀಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಾಜಬೀದಿ ಉತ್ಸವವು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿದ್ದು, ಗಣಪತಿ ಮೂರ್ತಿಯ ದರ್ಶನ ಪಡೆಯಲು ಮಾರ್ಗದುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮೆರವಣಿಗೆಯ ವೇಳೆ ಮಂಗಳವಾದ್ಯ, ಘೋಷಣೆಗಳು ಹಾಗೂ ವಿವಿಧ ಧಾರ್ಮಿಕ
ದೃಶ್ಯಗಳು ಕಂಡುಬಂದಿತು.

ಮಸೀದಿ ದಾಟುವ ವೇಳೆ ಮಾಮೂಲಿನಂತೆ ದೊಡ್ಡದೊಡ್ಡ ಕರ್ಪೂರಗಳನ್ನ ಹಚ್ಚಿ ಸಂಭ್ರಮಿಸಲಾಯಿತು. ಈ ವೇಳೆ ಘೋಷಣೆಗಳು ಮೊಳಗಿದವು. ಸ್ಥಳದಲ್ಲಿ ಎಸ್ಪಿ ನಿಖಿಲ್ ಹಾಜರಿದ್ದರು.  ನಿಯೋಜಿಸಲಾಗಿದ್ದ ಪೊಲೀಸರು ಭದ್ರತೆಯಲ್ಲಿಯೇ ಮೆರವಣಿಗೆ ಸಾಗಿದೆ. 

ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ವಿಶೇಷ ಎಚ್ಚರಿಕೆ ವಹಿಸಿದ್ದರು. ಮೆರವಣಿಗೆ ಯಾವುದೇ ರೀತಿಯ ಅಹಿತಕರ ಘಟನೆಗೆ ಕಾರಣವಾಗದಂತೆ ಪೊಲೀಸರು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದರು.

Hindu, mahasabha

ಬಜಾರ್ ನ ಮಸೀದಿ ಎದುರು  ಉತ್ಸವದ ಮೆರವಣಿಗೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯ ಕೆಲವರು ಹಿಂದೂ ಸಂಘಟನೆಯ ಕಾರ್ಯಕರ್ತರ ವೇಷದಲ್ಲಿದ್ದಿದ್ದು ಕಂಡುಬಂದಿದೆ, ಮೆರವಣಿಗೆಯನ್ನು ವೇಗವಾಗಿ ಮುಂದಕ್ಕೆ ಸಾಗಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು.

ಬಜಾರ್ ಪ್ರದೇಶ ಸೇರಿದಂತೆ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಾಗಿತ್ತು.  ಪೊಲೀಸರು  ಮೆರವಣಿಗೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ನಿಂತು ಗಣಪತಿ ಮೂರ್ತಿಯ ದರ್ಶನ ಪಡೆಯುವ ಬಂದೋ ಬಸ್ತ್ ಮಾಡಿದ್ದರು. ಅಲ್ಲಲ್ಲಿ ಹಾರ ತುರಾಯಿ, ಹೂವಿನ ಸುರಿಮಳೆ ಬಜಾರ್ ನ ಉದ್ದಕ್ಕೂ ಕಂಡುಬಂದವು. 

ನಗರದಲ್ಲಿ ನಡೆಯುತ್ತಿರುವ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದು, ಒಟ್ಟಿನಲ್ಲಿ ಗಣಪನ ರಾಜಬೀದಿ ಉತ್ಸವ ಜಾತ್ರೆಗೂ ಹೆಚ್ಚಾಗಿ ಕಂಡು ಬಂದಿದೆ. ಶಿವಪ್ಪ ನಾಯಕ ಪ್ರತಿಮೆಯ ಬಳಿ ರಾಜಬೀದಿ ಉತ್ಸವ ಸಾಗಿದೆ. ಇದರ ಜೊತೆಗೆ ರಾಜಕೀಯ ಮುತ್ಸದ್ದಿಗಳು ಒಟ್ಟಿಗೆ ಸಾಗುತ್ತಿರುವುದು ಮೆರವಣಿಗೆಯ ಮತ್ತೊಂದು ವಿಶೇಷವಾಗಿದೆ. 

Hindu Mahasabha Ganapati Rajbeedi festival passes through the mosque in the bazaar: procession amidst slogans    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close