ಮುಸ್ಲೀಂ ಹುಡುಗಿ ಜೊತೆಯಿದ್ದಿದ್ದಕ್ಕೆ ಅಪಹರಿಸಿ ಹಣಕ್ಕೆ ಬೇಡಿಕೆ, ಬ್ರಾಸ್ ಲೇಟ್ ಕಿತ್ತುಕೊಂಡು ಪರಾರಿ-Muslim girl kidnapped for being with him, demanded money, snatched brass and fled

SUDDILIVE || SHIVAMOGGA

ಮುಸ್ಲೀಂ ಹುಡುಗಿ ಜೊತೆಯಿದ್ದಿದ್ದಕ್ಕೆ ಅಪಹರಿಸಿ ಹಣಕ್ಕೆ ಬೇಡಿಕೆ, ಬ್ರಾಸ್ ಲೇಟ್ ಕಿತ್ತುಕೊಂಡು ಪರಾರಿ-Muslim girl kidnapped for being with him, demanded money, snatched brass and fled   

Abducted, demand


ಶಿವಮೊಗ್ಗ:
ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಕಾಲೇಜು ಯುವತಿಯೊಂದಿಗೆ ಇದ್ದನೆಂಬ ಕಾರಣಕ್ಕೆ 17 ವರ್ಷದ ಅಪ್ರಾಪ್ತ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿ, ಆತನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟು, ಬೆಳ್ಳಿ ಬ್ರೇಸ್‌ಲೆಟ್ ಕಸಿದುಕೊಂಡು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ವಿವರ:

ಸೆಪ್ಟೆಂಬರ್ 19 ರಂದು ಮಧ್ಯಾಹ್ನ ಕಾಲೇಜು ಮುಗಿಸಿ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ 17 ವರ್ಷದ ಅಪ್ರಾಪ್ತ ಯುವಕನ ಬಳಿ ಬಂದ ಇಬ್ಬರು ಅಜ್ಞಾತ ಯುವಕರು, "ನಿನ್ನ ಜೊತೆ ಇದ್ದ ಮುಸ್ಲಿಂ ಯುವತಿ ಯಾರು?" ಎಂದು ಪ್ರಶ್ನಿಸಿ ಗಲಾಟೆ ತೆಗೆದಿದ್ದಾರೆ. ಬಳಿಕ ಆತನನ್ನು ಬಲಾತ್ಕಾರವಾಗಿ ಬಸ್ ನಿಲ್ದಾಣದ ಹಿಂಭಾಗಕ್ಕೆ ಕರೆದೊಯ್ದಿದ್ದಾರೆ.

ಅಲ್ಲಿಂದ ಬೈಕ್‌ನಲ್ಲಿ ಕಾಯುತ್ತಿದ್ದ ಮತ್ತೊಬ್ಬ ಸೇರಿ ನಾಲ್ವರು ಅಪ್ರಾಪ್ತ ಯುವಕನನ್ನು ಅಣ್ಣಾನಗರ ಚಾನಲ್ ದಾಟಿ ಟಿಪ್ಪು ನಗರದ 2ನೇ ಕ್ರಾಸ್‌ನಲ್ಲಿರುವ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸುಮಾರು ಅರ್ಧ ಗಂಟೆ ಕೂರಿಸಿ, "ನಿನ್ನ ವಿಡಿಯೋ ಇದೆ, ಮನೆಯಲ್ಲಿ ₹10,000 ಹಣ ಹಾಕಿಸಲು ಹೇಳು" ಎಂದು ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ಯುವಕನ ಬಳಿ ಮೊಬೈಲ್ ಇಲ್ಲದಿದ್ದಾಗ, ಆತನ ಜೇಬು ಮತ್ತು ಬ್ಯಾಗ್ ಪರಿಶೀಲಿಸಿದ ಆರೋಪಿಗಳು, ಕೈಯಲ್ಲಿದ್ದ ಸುಮಾರು ₹2,500 ಮೌಲ್ಯದ ಬೆಳ್ಳಿಯ ಬ್ರೇಸ್‌ಲೆಟ್ ಅನ್ನು ಕಸಿದುಕೊಂಡಿದ್ದಾರೆ. "ಇನ್ನು ಮುಂದೆ ಮುಸ್ಲಿಂ ಹುಡುಗಿಯರೊಂದಿಗೆ ಓಡಾಡಿದರೆ ಸುಮ್ಮನೆ ಬಿಡುವುದಿಲ್ಲ" ಎಂದು ನೈತಿಕ ಪೊಲೀಸ್‌ಗಿರಿ ನಡೆಸಿ ಬೆದರಿಕೆ ಹಾಕಿ, ಬಳಿಕ ಆತನನ್ನು ಲಕ್ಷ್ಮಿ ಕ್ಯಾಂಟೀನ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಪ್ರಕರಣ ದಾಖಲು:

ಈ ಸಂಬಂಧ 17 ವರ್ಷದ ಅಪ್ರಾಪ್ತ ಯುವಕ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ BNS ಕಾಯ್ದೆಯಡಿ ಪ್ರಕರಣ (ಅಪರಾಧ ಸಂಖ್ಯೆ: 324/2026) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Muslim girl kidnapped for being with him, demanded money, snatched brass and fled   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close