ಸೆ.27ರಂದು ಶಿವಮೊಗ್ಗದಲ್ಲಿ 2ನೇ ವರ್ಷದ ‘ಯಕ್ಷ ಸಂಭ್ರಮ-2nd annual 'Yaksha Sambrham' to be held in Shivamogga on September 27

 SUDDILIVE || SHIVAMOGGA

ಸೆ.27ರಂದು ಶಿವಮೊಗ್ಗದಲ್ಲಿ 2ನೇ ವರ್ಷದ ‘ಯಕ್ಷ ಸಂಭ್ರಮ-2nd annual 'Yaksha Sambrham' to be held in Shivamogga on September 27 
Yaksha, sambhrama


ಶಿವಮೊಗ್ಗ: ಯಕ್ಷಗಾನ ಕಲೆಯ ವೈಭವ, ಪೌರಾಣಿಕ ಕಥಾನಕಗಳ ಸೊಗಡು ಹಾಗೂ ಹಿರಿಯ-ಕಿರಿಯ ಕಲಾವಿದರ ಅದ್ಭುತ ಕಲಾ ಪ್ರದರ್ಶನವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ 2ನೇ ವರ್ಷದ ‘ಯಕ್ಷ ಸಂಭ್ರಮ’ ಕಾರ್ಯಕ್ರಮವನ್ನು ಸೆ.27ರಂದು ಆಯೋಜಿಸಲಾಗಿದೆ.

ಯಕ್ಷ ಸಂಗಮ ಬಳಗದ ಸಂಯೋಜನೆಯಲ್ಲಿ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದರ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ನಗರದ ಕುವೆಂಪು ರಂಗಮಂದಿರದಲ್ಲಿ ಸೆ.27ರಂದು ಸಂಜೆ 4.35ಕ್ಕೆ ಆರಂಭವಾಗಲಿದೆ.

ಕಾರ್ಯಕ್ರಮದಲ್ಲಿ ಪೌರಾಣಿಕ ಪ್ರಸಂಗಗಳಾದ ‘ಶ್ರೀಕೃಷ್ಣ ಕೃಷ್ಣಾರ್ಜುನ’ ಹಾಗೂ ‘ಶ್ರೀರಾಮ ಲವಕುಶ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಯಕ್ಷಗಾನ ಪ್ರಿಯರಿಗೆ ವಿಭಿನ್ನ ಕಲಾನುಭವ ನೀಡುವ ನಿರೀಕ್ಷೆ ಇದೆ.

ಖ್ಯಾತ ಕಲಾವಿದರಿಂದ ಹಿಮ್ಮೇಳ

ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಖ್ಯಾತ ಭಾಗವತರು ಹಾಗೂ ವಾದ್ಯ ಕಲಾವಿದರು ಭಾಗವಹಿಸಲಿದ್ದಾರೆ. ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು ಹಾಗೂ ದರ್ಶನ್ ಗೌಡ ಗೋಳಿಹೊಳೆ ಭಾಗವತರಾಗಿ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ.

ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ ಹಾಗೂ ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ ಭಾಗವಹಿಸಲಿದ್ದು, ಚಂಡೆಯಲ್ಲಿ ಸುಜನ್ ಹಾಲಾಡಿ ಹಾಗೂ ಪ್ರಜ್ವಲ್ ಮುಂಡಾಡಿ ಕಲಾ ಪ್ರದರ್ಶನಕ್ಕೆ ಸಾಥ್ ನೀಡಲಿದ್ದಾರೆ.

ಹಿರಿಯ-ಕಿರಿಯ ಕಲಾವಿದರ ಸಂಗಮ

ಮುಮ್ಮೇಳದಲ್ಲಿ ಯಕ್ಷಗಾನ ಕ್ಷೇತ್ರದ ಹಲವು ಅನುಭವಿ ಹಾಗೂ ಯುವ ಕಲಾವಿದರು ಭಾಗವಹಿಸಲಿದ್ದಾರೆ. ವಿದ್ಯಾಧರ ರಾವ್ ಜಲವಳ್ಳಿ, ನಿಲ್ಕೋಡ್ ಶಂಕರ ಹೆಗಡೆ, ಶಶಿಕಾಂತ್ ಶೆಟ್ಟಿ ಕಾರ್ಕಳ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ ಹೆಗಡೆ ಕಡಬಾಳ, ವಿಶ್ವನಾಥ್ ಆಚಾರ್ಯ ತೊಂಭಟ್ಟು, ಸುಧೀರ್ ಉಪ್ಪೂರು, ಹರೀಶ್ ಮೊಗವೀರ ಜಪ್ತಿ, ಸಂತೋಷ್ ಹೆಂಗವಳ್ಳಿ, ಕೆ.ಜೆ. ಕಾರ್ತಿಕ್, ರವೀಂದ್ರ ದೇವಾಡಿಗ ಕಮಲಶಿಲೆ, ಪುರಂದರ ಮೂಡ್ಕಣಿ ಹಾಗೂ ಕು. ಆತ್ರೇಯ ಗಾಂವ್ಕರ್ ಸೇರಿದಂತೆ ಹಲವು ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯಕ್ಷಗಾನದ ಸಾಂಪ್ರದಾಯಿಕ ಹಿಮ್ಮೇಳ-ಮುಮ್ಮೇಳದ ಸಮ್ಮಿಲನದೊಂದಿಗೆ ಪೌರಾಣಿಕ ಪ್ರಸಂಗಗಳನ್ನು ರಂಗದ ಮೇಲೆ ಕಟ್ಟಿಕೊಡಲಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಯಕ್ಷಗಾನ ಅಭಿಮಾನಿಗಳಿಗೆ ಇದು ವಿಶೇಷ ಕಾರ್ಯಕ್ರಮವಾಗಲಿದೆ.

₹200 ಪ್ರವೇಶ ದರ

‘ಯಕ್ಷ ಸಂಭ್ರಮ’ ಕಾರ್ಯಕ್ರಮಕ್ಕೆ ಗೌರವ ಪ್ರವೇಶ ಹೊರತುಪಡಿಸಿ ₹200 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಾಭಿಮಾನಿಗಳು ಆಗಮಿಸುವಂತೆ ಯಕ್ಷಸಂಗಮ ಬಳಗ ಮನವಿ ಮಾಡಿದೆ.

ಕಾರ್ಯಕ್ರಮದ ಮಾಹಿತಿ ಹಾಗೂ ಟಿಕೆಟ್‌ಗಾಗಿ ನಾಗರಾಜ್ – 9845863549 ಅವರನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ 2ನೇ ವರ್ಷದ ‘ಯಕ್ಷ ಸಂಭ್ರಮ’ದಲ್ಲಿ ಯಕ್ಷಗಾನದ ವೈಭವವನ್ನು ಕಣ್ತುಂಬಿಕೊಳ್ಳಲು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಯಕ್ಷಸಂಗಮ ಬಳಗ ಕೋರಿದೆ.

2nd annual 'Yaksha Sambrham' to be held in Shivamogga on September 27   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close