ಸಾಗರ: ಲಾಡ್ಜ್‌ನಲ್ಲಿ ಗಾಂಜಾ ಸೇವನೆ ಆರೋಪ; ಯುವತಿ ಸೇರಿ ನಾಲ್ವರು ಪೊಲೀಸರ ವಶಕ್ಕೆ- Sagara: Four people, including a young woman, arrested for allegedly consuming marijuana at a lodge

 SUDDILIVE || SAGARA

ಸಾಗರ: ಲಾಡ್ಜ್‌ನಲ್ಲಿ ಗಾಂಜಾ ಸೇವನೆ ಆರೋಪ; ಯುವತಿ ಸೇರಿ ನಾಲ್ವರು ಪೊಲೀಸರ ವಶಕ್ಕೆ- Sagara: Four people, including a young woman, arrested for allegedly consuming marijuana at a lodge  

Ganja, lodge




ಸಾಗರ: ನಗರದ ಜೋಗ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್‌ವೊಂದರ ಕೊಠಡಿಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಯುವತಿ ಸೇರಿದಂತೆ ನಾಲ್ವರನ್ನು ಸಾಗರ ಟೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಾಡ್ಜ್‌ನ ಕೊಠಡಿಯಲ್ಲಿ ಕೆಲ ಯುವಕ-ಯುವತಿಯರು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಎಎಸ್‌ಪಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಸಾಗರ ಟೌನ್ ಪೊಲೀಸರು ಲಾಡ್ಜ್‌ಗೆ ತೆರಳಿ ಸಂಬಂಧಪಟ್ಟ ಕೊಠಡಿಯನ್ನು ಪರಿಶೀಲಿಸಿದ್ದಾರೆ.

ಈ ವೇಳೆ ಕೊಠಡಿಯಲ್ಲಿದ್ದ ಮೂವರು ಯುವಕರು ಹಾಗೂ ಓರ್ವ ಯುವತಿ ಅಸಹಜವಾಗಿ ವರ್ತಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಬಳಿಕ ಕೊಠಡಿಯನ್ನು ತಪಾಸಣೆ ನಡೆಸಿದಾಗ ಟೇಬಲ್ ಮೇಲೆ ಸಿಗರೇಟ್ ತುಂಡುಗಳು ಪತ್ತೆಯಾಗಿವೆ.

ಸಿಗರೇಟ್‌ನಲ್ಲಿದ್ದ ತಂಬಾಕನ್ನು ತೆಗೆದು ಅದರೊಳಗೆ ಗಾಂಜಾ ತುಂಬಿ ಸೇವಿಸುತ್ತಿದ್ದ ಬಗ್ಗೆ ವಿಚಾರಣೆ ವೇಳೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಯುವತಿ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Sagara: Four people, including a young woman, arrested for allegedly consuming marijuana at a lodge  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close