ಶಿವಮೊಗ್ಗದ ವಿವಿಧೆಡೆ ಅ.18ರಂದು ವಿದ್ಯುತ್ ವ್ಯತ್ಯಯ-Power outage in various places in Shivamogga on October 18

SUDDILIVE || SHIVAMOGGA

ಶಿವಮೊಗ್ಗದ ವಿವಿಧೆಡೆ ಅ.18ರಂದು ವಿದ್ಯುತ್ ವ್ಯತ್ಯಯ-Power outage in various places in Shivamogga on October 18   

Power, cut


ಶಿವಮೊಗ್ಗ: ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 18ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎ.ಎಫ್-1ರಿಂದ ಎ.ಎಫ್-4ರವರೆಗಿನ ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಸ್.ವಿ. ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಕೀಯ ಕಾಲೇಜು, ಮಲ್ಲಿಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಸೋಮಿನಕೊಪ್ಪ, ಗಾಯತ್ರಿ ಲೇಔಟ್, ತ್ಯಾವರೆಕೊಪ್ಪ, ಮುದ್ದಿನಕೊಪ್ಪ, 

ಕೋಟೆಗಂಗೂರು, ಗುಡ್ಡದಾರೆ ಕೆರೆ, ಜಕಾತಿಕೊಪ್ಪ, ಪೆಸಿಟ್ ಕಾಲೇಜು, ಭೂಮಿಕಾ ಅಲಾಯ್ಸ್, ಸಿದ್ಲಿಪುರ, ಆಲ್ದೇವರ ಹೊಸೂರು, ವಿರುಪಿನಕೊಪ್ಪ, ಗಿರಿದೀಪಂ, ಶಾಲೆ, ಲಯನ್ ಸಫಾರಿ, ಭೋವಿ ಕಾಲೋನಿ, ಸಾಗರ ಮುಖ್ಯರಸ್ತೆ ಹಾಗೂ ಆಲ್ಕೊಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

Power outage in various places in Shivamogga on October 18   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close