Advertisement

ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ಶವವಾಗಿ ಪತ್ತೆ- Four young men from Bengaluru who had come for a wedding were found dead

SUDDILIVE || SHIVAMOGGA

ಮದುವೆಗೆ ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು ಶವವಾಗಿ ಪತ್ತೆ-   Four young men from Bengaluru who had come for a wedding were found dead

Mahishi, river

ಶಿವಮೊಗ್ಗ: ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬಂದಿದ್ದ ನಾಲ್ವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ಪೈಕಿ ನಾಲ್ವರ ಮೃತದೇಹ ಪತ್ತೆಯಾಗಿದೆ, ಈ ಮೊದಲು ಮತ್ತೊಬ್ಬ ಯುವಕನಿಗಾಗಿ ಅಗ್ನಿಶಾಮಕ ದಳ, ಪೊಲೀಸರು ಹಾಗೂ ಮುಳುಗು ತಜ್ಞರು ಶೋಧ ಕಾರ್ಯ ಮುಂದುವರಿಸಿದ್ದಾರು ಅವರ ಮೃತದೇಹ ಸಹ ಪತ್ತೆಯಾಗಿದೆ.

ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಯುವಕರು ಸೇರಿದಂತೆ ಎರಡು ಟೆಂಪೋ ಟ್ರಾವೆಲರ್‌ಗಳಲ್ಲಿ ಕುಟುಂಬಸ್ಥರು ಮದುವೆ ಕಾರ್ಯಕ್ರಮಕ್ಕೆಂದು ಶಿವಮೊಗ್ಗಕ್ಕೆ ಬಂದಿದ್ದರು. ಈ ವೇಳೆ ಗೂಗಲ್‌ನಲ್ಲಿ ಹುಡುಕಿ ನೀರಿರುವ ಸ್ಥಳ ಹಾಗೂ ಸೇತುವೆಯನ್ನು ಗುರುತಿಸಿಕೊಂಡು ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.

ಮಧ್ಯಾಹ್ನ ಸುಮಾರು 3ರಿಂದ 3.30ರ ವೇಳೆಗೆ ಯುವಕರ ತಂಡದ ಏಳೆಂಟು ಮಂದಿ ನೀರಿಗೆ ಇಳಿದಿದ್ದರು. ಈ ವೇಳೆ ಮೊದಲು ಓರ್ವ ಯುವಕ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಮತ್ತೊಬ್ಬ ಯುವಕ ನೀರಿಗೆ ಇಳಿದಿದ್ದಾನೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಮುಂದಾದ ಪರಿಣಾಮ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಈಜು ತಿಳಿದಿದ್ದ ಓರ್ವ ಯುವಕ ಮಾತ್ರ ಸುರಕ್ಷಿತವಾಗಿ ದಡ ಸೇರಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆ ಕುರಿತು ಸಂಜೆ ಸುಮಾರು 4 ಗಂಟೆ ವೇಳೆಗೆ ಮಾಹಿತಿ ಲಭಿಸಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರ ನೆರವಿನಿಂದ ಕಾರ್ಯಾಚರಣೆ ನಡೆಸಲಾಗಿದೆ. ಗೂಗಲ್ ನಲ್ಲಿ ಸರ್ಚ್ ಮಾಡಿ ಮದುವೆಗೆ ಬಂದಿದ್ದವರಲ್ಲಿ ನಾಲ್ವರು‌ಮಹಿಷಿಗೆ ಬಂದು ಇಳಿದಿದ್ದಾರೆ. ವಿಧಿ ಇವರನ್ನೂ ಸಹ ಬಿಡಲಿಲ್ಲ

ನೀರಿನಲ್ಲಿ ಮುಳುಗಿದ್ದ ನಾಲ್ವರಲ್ಲಿ ನಕುಲ್ (19), ಚೇತನ್ (21) ಮತ್ತು ಕಾರ್ತಿಕ್ (22) ಎಂಬುವವರ ಮೃತದೇಹಗಳು ಪತ್ತೆಯಾಗಿವೆ. ಪವನ್ ಎಂಬ ಮತ್ತೊಬ್ಬ ಯುವಕನಿಗಾಗಿ  ಶೋಧ ಕಾರ್ಯ ಮುಂದುವರಿದಿತ್ತು. ಪವನ್ ಅವರ ಮೃತದೇಹ (35) ಅವರು ಸಹ ಶವವಾಗಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಘಟನೆಯಿಂದ ಮದುವೆ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ದುಃಖ ಮಡುಗಟ್ಟಿದೆ.

ಸೂಚನೆ: ಸ್ಥಳದ ನಿಖರ ಹೆಸರು, ಮೃತರ ಪೂರ್ಣ ಹೆಸರು ಹಾಗೂ ಘಟನೆಯ ಸ್ಥಳದ ಅಧಿಕೃತ ವಿವರಗಳು ಲಭ್ಯವಾದ ಬಳಿಕ ವರದಿಯಲ್ಲಿ ಸೇರಿಸುವುದು ಸೂಕ್ತ. ಸದ್ಯದ ಮಾಹಿತಿ ಪೊಲೀಸ್ ಮೂಲದ ದೂರವಾಣಿ ಸಂಭಾಷಣೆಯನ್ನು ಆಧರಿಸಿದೆ.

Four young men from Bengaluru who had come for a wedding were found dead

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು