Advertisement

ಭದ್ರಾವತಿಯಲ್ಲಿ 110 ಕೆವಿ ವಿದ್ಯುತ್ ತಂತಿ ಮೇಲೆ ಬಿದ್ದ ವ್ಯಕ್ತಿ ಮೃತ್ಯು; ಮೃತದೇಹ ಕೆಳಗಿಳಿಸಿದ ಅಗ್ನಿಶಾಮಕ ಸಿಬ್ಬಂದಿ- Man dies after falling on 110 KV power line in Bhadravati; Firefighters pull body down

 SUDDILIVE || SHIVAMOGGA

ಭದ್ರಾವತಿಯಲ್ಲಿ 110 ಕೆವಿ ವಿದ್ಯುತ್ ತಂತಿ ಮೇಲೆ ಬಿದ್ದ ವ್ಯಕ್ತಿ ಮೃತ್ಯು; ಮೃತದೇಹ ಕೆಳಗಿಳಿಸಿದ ಅಗ್ನಿಶಾಮಕ ಸಿಬ್ಬಂದಿ- Man dies after falling on 110 KV power line in Bhadravati; Firefighters pull body down   

ಭದ್ರಾವತಿ: ನಗರದ ಜೆಪಿಎಸ್ ಕಾಲೋನಿಯಲ್ಲಿ 110 ಕೆವಿ ವಿದ್ಯುತ್ ಮಾರ್ಗದ ಸುಮಾರು 60 ಅಡಿ ಎತ್ತರದ ವಿದ್ಯುತ್ ಕಂಬದ ಮೇಲೆ ಆಕಸ್ಮಿಕವಾಗಿ ಬಿದ್ದಿದ್ದ ಸುಮಾರು 25 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹವನ್ನು ಭದ್ರಾವತಿ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗದ ಸಹಾಯದಿಂದ ಕೆಳಗಿಳಿಸಿದ್ದಾರೆ.

ನವೆಂಬರ್ 25ರಂದು ಬೆಳಗ್ಗೆ 10.14ಕ್ಕೆ ಭದ್ರಾವತಿ ಅಗ್ನಿಶಾಮಕ ಠಾಣೆಗೆ ಈ ಕುರಿತು ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ 10.15ಕ್ಕೆ ಅಗ್ನಿಶಾಮಕ ವಾಹನದೊಂದಿಗೆ ಘಟನಾ ಸ್ಥಳಕ್ಕೆ ತೆರಳಿದರು. ಬೆಳಗ್ಗೆ 10.19ಕ್ಕೆ ಸ್ಥಳಕ್ಕೆ ತಲುಪಿದ ಸಿಬ್ಬಂದಿ, ಸುಮಾರು 60 ಅಡಿ ಎತ್ತರದ ವಿದ್ಯುತ್ ಕಂಬದ ಮೇಲೆ ವ್ಯಕ್ತಿ ಬಿದ್ದಿರುವುದನ್ನು ಗಮನಿಸಿದರು.

ಅಗ್ನಿಶಾಮಕ ಸಿಬ್ಬಂದಿ ವಿದ್ಯುತ್ ಕಂಬದ ಮೇಲೆ ಹತ್ತಿ, ಹಗ್ಗದ ನೆರವಿನಿಂದ ಮೃತದೇಹವನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಬಳಿಕ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಮೃತದೇಹವನ್ನು ಒಪ್ಪಿಸಿ, ಅವರಿಂದ ವರದಿ ಪಡೆದುಕೊಂಡರು.

ಈ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಯಾಗಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ (AFSO) ನೇತೃತ್ವ ವಹಿಸಿದ್ದರು. ಕೃಷ್ಣರಾಜು, ಆನಂದ್, ಸುರೇಶ್, ಮಹೇಂದ್ರ ಹಾಗೂ ಸಂತೋಷ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 10.14ಕ್ಕೆ ಆರಂಭವಾದ ಕಾರ್ಯಾಚರಣೆ ಮಧ್ಯಾಹ್ನ 1.30ಕ್ಕೆ ಪೂರ್ಣಗೊಂಡು ಸಿಬ್ಬಂದಿ ಠಾಣೆಗೆ ಮರಳಿದರು. ಒಟ್ಟು 3 ಗಂಟೆ 5 ನಿಮಿಷಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಘಟನೆಯಲ್ಲಿ ಒಂದು ಮಾನವ ಜೀವ ಹಾನಿಯಾಗಿದೆ. ಮೃತ ವ್ಯಕ್ತಿಯ ಗುರುತು ಹಾಗೂ ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Man dies after falling on 110 KV power line in Bhadravati; Firefighters pull body down   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು