Advertisement

ಕುಂಸಿ, ಹಾರ್ನಳ್ಳಿ ಭಾಗದ ರೈತರಿಗೆ ವಿದ್ಯುತ್ ವ್ಯತ್ಯಯದ ಬಿಸಿ; ನ.16ರಿಂದ ನಾಲ್ಕು ದಿನ ರಾತ್ರಿ ವೇಳೆ ಮಾತ್ರ 3 ಫೇಸ್ ವಿದ್ಯುತ್- Farmers in Kunsi and Hornalli areas face power outages; 3-phase power only at night for four days from Nov. 16

 SUDDILIVE || SHIVAMOGGA

ಕುಂಸಿ, ಹಾರ್ನಳ್ಳಿ ಭಾಗದ ರೈತರಿಗೆ ವಿದ್ಯುತ್ ವ್ಯತ್ಯಯದ ಬಿಸಿ; ನ.16ರಿಂದ ನಾಲ್ಕು ದಿನ ರಾತ್ರಿ ವೇಳೆ ಮಾತ್ರ 3 ಫೇಸ್ ವಿದ್ಯುತ್- Farmers in Kunsi and Hornalli areas face power outages; 3-phase power only at night for four days from Nov. 16  

Pwer, outage



ಶಿವಮೊಗ್ಗ ತಾಲ್ಲೂಕಿನ ಕುಂಸಿ ಮತ್ತು ಹಾರ್ನಳ್ಳಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯ ಸುಧಾರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನವೆಂಬರ್ 16ರಿಂದ 19ರವರೆಗೆ ನಾಲ್ಕು ದಿನಗಳ ಕಾಲ ನೀರಾವರಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಬದಲಾವಣೆ ಮಾಡಲಾಗಿದೆ.

ಕುಂಸಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕುಂಸಿ ಮತ್ತು ಹಾರ್ನಳ್ಳಿ ಶಾಖೆಗಳ ಹಳೆಯ ಪವರ್ ಕೇಬಲ್‌ಗಳನ್ನು ಬದಲಾಯಿಸುವುದು ಹಾಗೂ ಹೊಸ ಡಿ.ಪಿ. ಸ್ಟ್ರಕ್ಚರ್‌ಗಳನ್ನು ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಪೂರೈಕೆಯ ಸಮಯವನ್ನು ಪರಿಷ್ಕರಿಸಲಾಗಿದೆ.

ಯಾವ ಯಾವ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಬದಲಾವಣೆ?

ಕುಂಸಿ ಶಾಖಾ ವ್ಯಾಪ್ತಿಯ ಕುಂಸಿ, ಬಾಳೇಕೊಪ್ಪ, ಚಿಕ್ಕಮರನ, ರೇಚಿಕೊಪ್ಪ, ಹಳೆಶಿಕಾರಿಪುರ ರಸ್ತೆ, ಹುಬ್ಬನಹಳ್ಳಿ, ಹೊಸಕೋಟೆ ದುರ್ಗಮ್ಮ ದೇವಸ್ಥಾನ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯ ಸಮಯದಲ್ಲಿ ಬದಲಾವಣೆಯಾಗಲಿದೆ.

ಅದೇ ರೀತಿ ಹಾರ್ನಳ್ಳಿ ಶಾಖಾ ವ್ಯಾಪ್ತಿಯ ಹಾರ್ನಳ್ಳಿ, ಮಲ್ಲಾಪುರ, ರಟ್ಟೆಹಳ್ಳಿ, ಸೊಟ್ಟುಕೋಟೆ, ಹಿಟ್ಟೂರು, ನಾರಾಯಣಪುರ, ಬೈರನಕೊಪ್ಪ, ಮುದುವಾಲ, ವಾಲಾಕೇಶಪುರ, ದೇವಬಾಳು, ಎಡವಾಲ, ತ್ಯಾಗವಳ್ಳಿ, ಕೊನಗವಳ್ಳಿ ಹಾಗೂ ಚಾಮೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೂ ಈ ಬದಲಾವಣೆ ಅನ್ವಯಿಸಲಿದೆ.

ಸಂಜೆ 6ರಿಂದ ಬೆಳಿಗ್ಗೆ 10ರವರೆಗೆ 3 ಫೇಸ್ ವಿದ್ಯುತ್

ನವೆಂಬರ್ 16ರಿಂದ 19ರವರೆಗೆ ನಾಲ್ಕು ದಿನಗಳ ಕಾಲ ನೀರಾವರಿ ಕೃಷಿ ಪಂಪ್‌ಸೆಟ್‌ಗಳ (ಐ.ಪಿ.) ಗ್ರಾಹಕರಿಗೆ ಪ್ರತಿದಿನ ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಉಳಿದ ಅವಧಿಯಲ್ಲಿ 3 ಫೇಸ್ ವಿದ್ಯುತ್ ಲಭ್ಯವಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಕುಂಸಿ ಮತ್ತು ಹಾರ್ನಳ್ಳಿ ಶಾಖಾ ವ್ಯಾಪ್ತಿಯ ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಪೂರೈಕೆಯ ಬದಲಾದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕೃಷಿ ಚಟುವಟಿಕೆಗಳನ್ನು ಯೋಜಿಸಿಕೊಳ್ಳಬೇಕು. ಕಾಮಗಾರಿಗೆ ಸಹಕರಿಸುವಂತೆ ಮೆಸ್ಕಾಂ ಪಾಲನೆ ಮತ್ತು ನಿರ್ವಹಣೆ ಉಪವಿಭಾಗ, ಕುಂಸಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.

Farmers in Kunsi and Hornalli areas face power outages; 3-phase power only at night for four days from Nov. 16

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು