SUDDILIVE || SHIVAMOGGA
ಶಿವಮೊಗ್ಗಕ್ಕೆ ಆಗಮಿಸಿದ ವಿಧಾನ ಪರಿಷತ್ ಮುಖ್ಯ ಸಚೇತಕ ಮಂಜುನಾಥ ಭಂಡಾರಿ ಅವರಿಗೆ ಭರ್ಜರಿ ಸ್ವಾಗತ- Grand Welcome to Legislative Council Chief Whip Manjunath Bhandari on His Visit to Shivamogga
ಶಿವಮೊಗ್ಗ: ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿ ನೇಮಕಗೊಂಡಿರುವ ವಿಧಾನ ಪರಿಷತ್ ಸದಸ್ಯ ಸನ್ಮಾನ್ಯ ಮಂಜುನಾಥ ಭಂಡಾರಿ ಅವರು ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು.
ಶಿವಮೊಗ್ಗ ನಗರದ ಹೊಳೆ ಬಸ್ ನಿಲ್ದಾಣದ ಬಳಿ ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಸೇಬಿನ ಹಣ್ಣಿನ ಹಾರ ಹಾಕಿ ಮಂಜುನಾಥ ಭಂಡಾರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅರ್ಜುನ್, ಹುಸೇನ್, ಪಿ. ಕವಿತಾ, ಪೋತಮಾನ್ ಉಸ್ಮಾನ್, ರಾಘವೇಂದ್ರ, ಮೋಸಿ ಮಂಜುನಾಥ್, ಸ್ಟೇಲಾ ಮಾರ್ಟಿನ್, ಬೊಮ್ಮನಕಟ್ಟೆ ಅನಂತ ದರ್ಶನ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Grand Welcome to Legislative Council Chief Whip Manjunath Bhandari on His Visit to Shivamogga



0 ಕಾಮೆಂಟ್‌ಗಳು