SUDDILIVE || SHIVAMOGGA
ಬಿಜೆಪಿ ಜೊತೆ ಫ್ರೆಂಡ್ಲಿ ಫೈಟ್ ಹೇಳಿಕೆ: ಅಚ್ಚರಿ ವ್ಯಕ್ತಪಡಿಸಿದ ಶಾಸಕಿ ಶಾರದಾ ಪೂರ್ಯನಾಯ್ಕ್- Statement about a 'friendly fight' with the BJP: MLA Sharada Puryanaik expresses surprise
ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಜೊತೆ ಫ್ರೆಂಡ್ಲಿ ಫೈಟ್ ನಡೆಸುವ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷರು ನೀಡಿರುವ ಹೇಳಿಕೆಗೆ ಶಿವಮೊಗ್ಗ ಶಾಸಕಿ ಶಾರದಾ ಪೂರ್ಯನಾಯ್ಕ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಿನ್ನೆಯಿಂದ ಮಾಜಿ ಶಾಸಕರು ಪಕ್ಕದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರನ್ನಕೂರಿಸಿಕೊಂಡು ಜಿಪಂ ತಾಪಂ ಚುನಾವಣೆಗೆ ಫ್ರೈಂಡ್ಲಿ ಫೈಟ್ ಎಂದುರುವುದು ಅಚ್ಚರಿಯಾಗಿದೆ.
ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಎರಡೂ ಪಕ್ಷಗಳ ಹೊಂದಾಣಿಕೆ ಹೇಗಿರಬೇಕು ಎಂಬುದನ್ನು ಮೇಲ್ಮಟ್ಟದ ನಾಯಕರು ನಿರ್ಧರಿಸಲಿದ್ದಾರೆ. ಮೇಲಿನಿಂದ ಯಾವ ಆದೇಶ ಬರುತ್ತದೆಯೋ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಮಟ್ಟದಲ್ಲಿ ಮೈತ್ರಿ ವಿಚಾರವಾಗಿ ಗೊಂದಲಗಳಿರುವುದು ಸಹಜ. ಕಾರ್ಯಕರ್ತರಲ್ಲಿಯೂ ಗೊಂದಲ ಉಂಟಾಗಬಹುದು. ಆದರೆ ಪಕ್ಷದ ವರಿಷ್ಠರು ಒಟ್ಟಾಗಿ ಸ್ಪರ್ಧಿಸಲು ಸೂಚಿಸಿದರೆ ಒಟ್ಟಾಗಿ, ಪ್ರತ್ಯೇಕವಾಗಿ ಸ್ಪರ್ಧಿಸಲು ಸೂಚಿಸಿದರೆ ಪ್ರತ್ಯೇಕವಾಗಿ ಹಾಗೂ ಫ್ರೆಂಡ್ಲಿ ಫೈಟ್ ನಡೆಸಲು ಸೂಚಿಸಿದರೆ ಅದಕ್ಕೂ ಸಿದ್ಧರಿದ್ದೇವೆ ಎಂದರು.
ಪಕ್ಕದಲ್ಲೇ ಬಿಜೆಪಿ ಜಿಲ್ಲಾಧ್ಯಕ್ಷರು ಕುಳಿತಿದ್ದ ಸಂದರ್ಭದಲ್ಲಿ ಫ್ರೆಂಡ್ಲಿ ಫೈಟ್ ವಿಚಾರ ಪ್ರಸ್ತಾಪವಾಗಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಶಾಸಕಿ, ಬಿಜೆಪಿ ಮುಖಂಡರ ಹೇಳಿಕೆಗಳ ಬಗ್ಗೆ ಅವರ ಪಕ್ಷದವರೇ ಪ್ರತಿಕ್ರಿಯಿಸಬೇಕು. ನಾನು ಆ ಬಗ್ಗೆ ಹೇಳಲು ಬರುವುದಿಲ್ಲ ಎಂದರು.
ಇದು ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ನಿರ್ಧಾರವಾಗುವ ವಿಚಾರವಲ್ಲ. ದೇಶದ ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ತೀರ್ಮಾನವಾಗುತ್ತದೆ. ಎನ್ಡಿಎ ಮೈತ್ರಿ ಇರುವುದರಿಂದ ಎರಡೂ ಪಕ್ಷಗಳ ನಡುವೆ ಮಾತುಕತೆಗೆ ಅವಕಾಶವಿದೆ ಎಂದು ತಿಳಿಸಿದರು.
ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಯಾವ ಸ್ವರೂಪದಲ್ಲಿರಲಿದೆ ಎಂಬುದಕ್ಕೆ ಮೇಲ್ಮಟ್ಟದ ನಾಯಕರ ನಿರ್ಧಾರವೇ ಅಂತಿಮವಾಗಲಿದೆ ಎಂಬುದು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರ ಹೇಳಿಕೆಯ ಸಾರವಾಗಿದೆ.
ಸ್ಟಿಂಗ್ ಆಪರೇಷನ್
ಸ್ಟಿಂಗ್ ಆಪರೇಷನ್ ವಿಚಾರವನ್ನು ಬೇರೆ ರೀತಿಯಲ್ಲಿ ತಿರುಚದೆ, ಪಾರದರ್ಶಕವಾಗಿ ನಡೆಸಿ ವಾಸ್ತವಾಂಶ ಹಾಗೂ ಸತ್ಯಾಂಶಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟಿಂಗ್ ಆಪರೇಷನ್ನ ಉದ್ದೇಶ ಪಾರದರ್ಶಕತೆ ಕಾಪಾಡುವುದಾಗಿರಬೇಕು. ಆದರೆ ಈ ವಿಚಾರವನ್ನು ಬೇರೆ ರೀತಿಯಲ್ಲಿ ತಿರುವು ನೀಡಲಾಗುತ್ತಿದೆ. ಪ್ರತಿದಿನ ಈ ಕುರಿತು ಪ್ರಸಾರವಾಗುತ್ತಿರುವ ವರದಿಗಳನ್ನು ಗಮನಿಸುತ್ತಿದ್ದೇವೆ. ಹೀಗೆ ವಿಷಯವನ್ನು ತಿರುಚುವುದು ಬೇಡ. ನೈಜವಾಗಿ ಏನಾಗಿದೆ ಎಂಬ ಸತ್ಯಾಂಶವನ್ನು ಹೊರತೆಗೆದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅವರು ಹೇಳಿದರು.
ಸ್ಟಿಂಗ್ ಆಪರೇಷನ್ ಮೂಲಕ ಸತ್ಯ ಹೊರಬರಬೇಕು. ಜನರಿಗೆ ವಾಸ್ತವಾಂಶ ತಿಳಿಯುವಂತಾಗಬೇಕು ಎಂಬುದು ತಮ್ಮ ಆಶಯ ಎಂದು ಅವರು ತಿಳಿಸಿದರು.
Statement about a 'friendly fight' with the BJP: MLA Sharada Puryanaik expresses surprise



0 ಕಾಮೆಂಟ್ಗಳು