Advertisement

ಶಿವಮೊಗ್ಗ ಡಿಎಆರ್ ಘಟಕಕ್ಕೆ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಓವರ್‌ಆಲ್ ಚಾಂಪಿಯನ್ ಪಟ್ಟ-Shivamogga DAR unit crowned overall champion of District Police Sports Meet

SHIVAMOGGA || SHIVAMOGGA

ಶಿವಮೊಗ್ಗ ಡಿಎಆರ್ ಘಟಕಕ್ಕೆ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಓವರ್‌ಆಲ್ ಚಾಂಪಿಯನ್ ಪಟ್ಟ-Shivamogga DAR unit crowned overall champion of District Police Sports Meet 

Police, sports

Police, sports

69 ಅಂಕಗಳೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಡಿಎಆರ್ ತಂಡ; ಮಹಿಳಾ ವಿಭಾಗದಲ್ಲಿ ಶಿಲ್ಪ, ಪುರುಷರ ವಿಭಾಗದಲ್ಲಿ ಕಿರಣ್ ನಾಯಕ್ ವೈಯಕ್ತಿಕ ಚಾಂಪಿಯನ್

ಶಿವಮೊಗ್ಗ: ನಗರದ ಡಿಎಆರ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ (ಡಿಎಆರ್) ಘಟಕವು 69 ಅಂಕಗಳೊಂದಿಗೆ ಓವರ್‌ಆಲ್ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಸಮಾರೋಪ ಸಮಾರಂಭದಲ್ಲಿ ಪೊಲೀಸ್ ಪೂರ್ವ ವಲಯದ ಐಜಿಪಿ ಸತೀಶ್ ಕುಮಾರ್ ಅವರು ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ಹಾಗೂ ಪ್ರಶಸ್ತಿಗಳನ್ನು ವಿತರಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರು ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ ಅವರು ವಂದಿಸಿದರು. ಈ ಕೆಳಗಿನ ಬಹುಮಾನಗಳು ಇಂದು ನಡೆದ ಕ್ರೀಡೆಗಳದ್ದಾಗಿದೆ. ಹಿಂದಿನ ಎರಡು ದಿನದ ಬಹುಮಾನಗಳ ಪಟ್ಟಿ ಲಭ್ಯವಾಗಬೇಕಿದೆ. 

ಡಿಎಆರ್ ಶಿವಮೊಗ್ಗಕ್ಕೆ ಓವರ್‌ಆಲ್ ಚಾಂಪಿಯನ್ ಪ್ರಶಸ್ತಿ

ಮೂರು ದಿನಗಳ ಕ್ರೀಡಾಕೂಟದಲ್ಲಿ ವಿವಿಧ ಪೊಲೀಸ್ ಠಾಣೆಗಳು, ಉಪವಿಭಾಗಗಳು ಹಾಗೂ ಡಿಎಆರ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಂತಿಮವಾಗಿ 69 ಅಂಕಗಳನ್ನು ಗಳಿಸಿದ ಶಿವಮೊಗ್ಗ ಡಿಎಆರ್ ಘಟಕ ಓವರ್‌ಆಲ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತು.

ವಿಜೇತ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರು 20 ಸಾವಿರ ರೂ. ನಗದು ಬಹುಮಾನ ಘೋಷಿಸಿದರು. ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಅವರು 10 ಸಾವಿರ ರೂ. ನಗದು ಬಹುಮಾನ ಘೋಷಿಸಿ ತಂಡವನ್ನು ಅಭಿನಂದಿಸಿದರು.

ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ

ಮಹಿಳಾ ವಿಭಾಗದಲ್ಲಿ ತೀರ್ಥಹಳ್ಳಿ ಉಪವಿಭಾಗದ ನಗರ ಪೊಲೀಸ್ ಠಾಣೆಯ ಡಬ್ಲ್ಯೂಪಿಸಿ ಶಿಲ್ಪ ಎನ್. ಅವರು 13 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿದರು. 100 ಮೀಟರ್, 200 ಮೀಟರ್ ಓಟ ಹಾಗೂ ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇವರಿಗೆ 5 ಸಾವಿರ ರೂ. ನಗದು ಬಹುಮಾನ ಘೋಷಿಸಲಾಯಿತು.

ಪುರುಷರ ವಿಭಾಗದಲ್ಲಿ ಭದ್ರಾವತಿ ಸಂಚಾರ ಪೊಲೀಸ್ ಠಾಣೆಯ ಸಿಪಿಸಿ ಕಿರಣ್ ನಾಯಕ್ (ಸಂಖ್ಯೆ 1702) ಅವರು 18 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇವರಿಗೂ 5 ಸಾವಿರ ರೂ. ನಗದು ಬಹುಮಾನ ಘೋಷಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ಪೊಲೀಸ್ ಸಿಬ್ಬಂದಿ ಸಾಧನೆ

ಕ್ರೀಡಾಕೂಟದಲ್ಲಿ 100 ಮೀಟರ್ ಓಟ, 200 ಮೀಟರ್ ಓಟ, ರಿಲೇ, ಶಾಟ್‌ಪುಟ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ಲಾಂಗ್ ಜಂಪ್, ಹರ್ಡಲ್ಸ್, ಬ್ಯಾಡ್ಮಿಂಟನ್, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮಹಿಳಾ ವಿಭಾಗದಲ್ಲಿ ತೀರ್ಥಹಳ್ಳಿ ಉಪವಿಭಾಗದ ನಗರ ಪೊಲೀಸ್ ಠಾಣೆಯ ಡಬ್ಲ್ಯೂಪಿಸಿ ಶಿಲ್ಪ ಎನ್. (ಸಂಖ್ಯೆ 1605) ಅವರು 13 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಆದರು. ಇವರು 100 ಮೀಟರ್ ಓಟ, 200 ಮೀಟರ್ ಓಟ ಹಾಗೂ ಲಾಂಗ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಪುರುಷರ ವಿಭಾಗದಲ್ಲಿ ಭದ್ರಾವತಿ ಸಂಚಾರ ಪೊಲೀಸ್ ಠಾಣೆಯ ಸಿಪಿಸಿ ಕಿರಣ್ ನಾಯಕ್ (ಸಂಖ್ಯೆ 1702) ಅವರು 18 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.

4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭದ್ರಾವತಿ ತಂಡ ಪ್ರಥಮ ಸ್ಥಾನ ಗಳಿಸಿತು. ಶಿವಮೊಗ್ಗ ಡಿಎಆರ್ ಘಟಕ ದ್ವಿತೀಯ ಹಾಗೂ ತೀರ್ಥಹಳ್ಳಿ ಉಪವಿಭಾಗ ತೃತೀಯ ಸ್ಥಾನ ಪಡೆಯಿತು.

ಪಿಎಸ್ಐ ಮತ್ತು ಆರ್ಎಸ್ಐ ವಿಭಾಗದ ಸ್ಪರ್ಧೆಗಳು

ಈ ವಿಭಾಗದಲ್ಲಿ 100 ಮೀಟರ್ ಓಟ, ಶಾಟ್‌ಪುಟ್, ಜಾವೆಲಿನ್, ಹರ್ಡಲ್ಸ್, ಬ್ಯಾಡ್ಮಿಂಟನ್ ಹಾಗೂ ಶೂಟಿಂಗ್ ಸ್ಪರ್ಧೆಗಳಲ್ಲಿ ಅಧಿಕಾರಿಗಳು ಪ್ರಶಸ್ತಿ ಗಳಿಸಿದರು.

ಸುನೀಲ್ ಕುಮಾರ್ ಡಿಸಿ (ಪಿಎಸ್ಐ, ಮಾಳೂರು ಪೊಲೀಸ್ ಠಾಣೆ): 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ.

ಮಾರುತಿ ಬೆಳಿಗೆರೆ (ಪಿಎಸ್ಐ, ಸೊರಬ): 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ.

ನವೀನ್ ಎಂ.ಎಚ್. (ಪಿಎಸ್ಐ, ಸೊರಬ): 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ.

ರಾಜು ರೆಡ್ಡಿ (ಪಿಎಸ್ಐ, ರಿಪ್ಪನ್‌ಪೇಟೆ ಪೊಲೀಸ್ ಠಾಣೆ): ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ.

ಮಂಜುನಾಥ್ ಬಿದ್ರಿಕೊಪ್ಪ (ಆರ್ಎಸ್ಐ, ಡಿಎಆರ್ ಶಿವಮೊಗ್ಗ): ಶಾಟ್‌ಪುಟ್‌ನಲ್ಲಿ ದ್ವಿತೀಯ, ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ರನ್ನರ್ ಅಪ್, 9 ಎಂಎಂ ಪಿಸ್ತೂಲ್ ಫೈರಿಂಗ್ ಮತ್ತು 5.56 ರೈಫಲ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.

ಪ್ರವೀಣ್ (ಪಿಎಸ್ಐ): ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ.

ರಮೇಶ್ (ಪಿಎಸ್ಐ): 100 ಮೀಟರ್ ಓಟ ಮತ್ತು ಶಾಟ್‌ಪುಟ್‌ನಲ್ಲಿ ಪ್ರಥಮ, ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ.

ವಿ.ಎಂ. ಅಗಸಿ (ಪಿಎಸ್ಐ, ಆನವಟ್ಟಿ): ಹರ್ಡಲ್ಸ್‌ನಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ.

ಸಂಗೊಳ್ಳಿ ಆರ್.ಎಚ್. (ಪಿಎಸ್ಐ): 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ.ಈಶಪ್ಪ (ಪಿಎಸ್ಐ, ಡಿಎಆರ್ ಘಟಕ): ಜಾವೆಲಿನ್ ಥ್ರೋನಲ್ಲಿ ಪ್ರಥಮ, ಶಾಟ್‌ಪುಟ್‌ನಲ್ಲಿ ದ್ವಿತೀಯ ಹಾಗೂ ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ.

ರಾಜೇಶ್ (ಪಿಎಸ್ಐ): ಜಾವೆಲಿನ್ ಥ್ರೋನಲ್ಲಿ ದ್ವಿತೀಯ, ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ.

ಗಿರಿರಾಜ್ (ಪಿಎಸ್ಐ, ವೈರ್‌ಲೆಸ್): ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ರನ್ನರ್ ಅಪ್, ಹರ್ಡಲ್ಸ್‌ನಲ್ಲಿ ದ್ವಿತೀಯ ಹಾಗೂ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ತೃತೀಯ ಸ್ಥಾನ.

ಕೇಶವಮೂರ್ತಿ (ಪಿಎಸ್ಐ, ನ್ಯೂಟೌನ್ ಪೊಲೀಸ್ ಠಾಣೆ): 9 ಎಂಎಂ ಪಿಸ್ತೂಲ್‌ನಲ್ಲಿ ಪ್ರಥಮ, 5.56 ರೈಫಲ್ ಶೂಟಿಂಗ್‌ನಲ್ಲಿ ತೃತೀಯ ಸ್ಥಾನ.

ಷಡಕ್ಷರಿ (ಪಿಎಸ್ಐ, ವೈರ್‌ಲೆಸ್): 9 ಎಂಎಂ ಪಿಸ್ತೂಲ್ ಮತ್ತು 5.56 ರೈಫಲ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ.ಚಂದನ್ (ಪಿಎಸ್ಐ): 9 ಎಂಎಂ ಪಿಸ್ತೂಲ್ ಶೂಟಿಂಗ್‌ನಲ್ಲಿ ತೃತೀಯ ಸ್ಥಾನ.

ಕಾಂತರಾಜ್ (ಪಿಎಸ್ಐ, ನ್ಯೂಟೌನ್ ಪೊಲೀಸ್ ಠಾಣೆ): 5.56 ರೈಫಲ್ ಮತ್ತು 9 ಎಂಎಂ ಪಿಸ್ತೂಲ್ ವಿಭಾಗಗಳಲ್ಲಿ ಪ್ರಥಮ ಸ್ಥಾನ.

ಮಹಿಳಾ ಪೊಲೀಸ್ ಅಧಿಕಾರಿಗಳ ವಿಭಾಗ

ಸ್ವಪ್ನ (ಡಬ್ಲ್ಯೂಪಿಎಸ್ಐ, ವೆಸ್ಟ್ ಟ್ರಾಫಿಕ್ ಪೊಲೀಸ್, ಶಿವಮೊಗ್ಗ): 100 ಮೀಟರ್ ಓಟದಲ್ಲಿ ಪ್ರಥಮ, ಡಿಸ್ಕಸ್ ಥ್ರೋನಲ್ಲಿ ದ್ವಿತೀಯ ಸ್ಥಾನ.

ಕವಿತಾ (ಡಬ್ಲ್ಯೂಪಿಎಸ್ಐ): ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ.

ನಾಗಮ್ಮ (ಸಿಪಿಐ, ಭದ್ರಾವತಿ): ಶಾಟ್‌ಪುಟ್ ಮತ್ತು ಡಿಸ್ಕಸ್ ಥ್ರೋನಲ್ಲಿ ಪ್ರಥಮ, 9 ಎಂಎಂ ಪಿಸ್ತೂಲ್‌ನಲ್ಲಿ ದ್ವಿತೀಯ, 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ.

ನಂದಿನಿ ಕೆ.ಎಂ. (ಪ್ರೊಬೇಷನರಿ ಡಬ್ಲ್ಯೂಪಿಎಸ್ಐ): ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ.

ಭಾರತಿ (ಡಬ್ಲ್ಯೂಪಿಎಸ್ಐ): ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ರನ್ನರ್ ಅಪ್, ಡಿಸ್ಕಸ್ ಥ್ರೋನಲ್ಲಿ ತೃತೀಯ ಸ್ಥಾನ. ಇವರು ರಾಷ್ಟ್ರ ಮತ್ತು ರಾಜ್ಯಮಟ್ಟದ ಆಟಗಾರ್ತಿಯಾಗಿದ್ದಾರೆ.

ಭಾರತಿ (ಡಬ್ಲ್ಯೂಪಿಎಸ್ಐ, ಈಸ್ಟ್ ಟ್ರಾಫಿಕ್): 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ 100 ಮೀಟರ್ ಓಟ, ಶಾಟ್‌ಪುಟ್ ಹಾಗೂ ಡಿಸ್ಕಸ್ ಥ್ರೋನಲ್ಲಿ ಪ್ರಥಮ ಸ್ಥಾನ.

ಶಶಿಕಲ (ಡಬ್ಲ್ಯೂಪಿಎಸ್ಐ, ಬಿಎಸ್‌ಪಿ): 100 ಮೀಟರ್ ಓಟದಲ್ಲಿ ದ್ವಿತೀಯ, ಡಿಸ್ಕಸ್ ಥ್ರೋನಲ್ಲಿ ತೃತೀಯ ಸ್ಥಾನ.

ಪಾರ್ವತಿಬಾಯಿ (ಡಬ್ಲ್ಯೂಪಿಎಸ್ಐ, ಕುಂಸಿ ಪೊಲೀಸ್ ಠಾಣೆ): 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ.

ಸುಷ್ಮಾ (ಡಬ್ಲ್ಯೂಪಿಎಸ್ಐ, ತೀರ್ಥಹಳ್ಳಿ): ಶಾಟ್‌ಪುಟ್‌ನಲ್ಲಿ ತೃತೀಯ, ಡಿಸ್ಕಸ್ ಥ್ರೋನಲ್ಲಿ ದ್ವಿತೀಯ ಸ್ಥಾನ.

ಮಂಜಮ್ಮ (ಡಬ್ಲ್ಯೂಪಿಎಸ್ಐ, ತುಂಗನಗರ ಪೊಲೀಸ್ ಠಾಣೆ): ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ.

ವಾಲಿಬಾಲ್‌ನಲ್ಲಿ ಭದ್ರಾವತಿ ತಂಡ ವಿಜೇತರಾದರೆ, ತೀರ್ಥಹಳ್ಳಿ ತಂಡ ರನ್ನರ್ ಅಪ್ ಆಯಿತು. ಕಬಡ್ಡಿಯಲ್ಲಿ ಶಿವಮೊಗ್ಗ ಡಿಎಆರ್ ತಂಡ ಪ್ರಥಮ ಸ್ಥಾನ ಗಳಿಸಿದರೆ, ಸಾಗರ ತಂಡ ದ್ವಿತೀಯ ಸ್ಥಾನ ಪಡೆಯಿತು.

ವಾಲಿಬಾಲ್ ವಿಜೇತ ತಂಡಕ್ಕೆ ಹೆಚ್ಚುವರಿ ಎಸ್ಪಿ ಕಾರ್ಯಪ್ಪ ಅವರು 10 ಸಾವಿರ ರೂ. ನಗದು ಬಹುಮಾನ ಘೋಷಿಸಿದರು. ಹಗ್ಗಜಗ್ಗಾಟದಲ್ಲಿ ವಿಜೇತ ತಂಡಕ್ಕೆ ಭದ್ರಾವತಿ ಡಿವೈಎಸ್ಪಿ 10 ಸಾವಿರ ರೂ. ಬಹುಮಾನ ಘೋಷಿಸಿದರು. ಕಬಡ್ಡಿ ವಿಜೇತ ತಂಡಕ್ಕೂ ಶಿಕಾರಿಪುರ ಡಿವೈಎಸ್ಪಿ ಕೇಶವ ಅವರು 10 ಸಾವಿರ ರೂ. ನಗದು ಬಹುಮಾನ ಘೋಷಿಸಿದರು.

ಸಿಪಿಐ, ಪಿಐ ಮತ್ತು ಆರ್‌ಪಿಐ ವಿಭಾಗ: 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು

ದೇವರಾಜ್ (ಸಿಪಿಐ, ಟ್ರಾಫಿಕ್ ಶಿವಮೊಗ್ಗ): 100 ಮೀಟರ್ ಓಟದಲ್ಲಿ ಪ್ರಥಮ, ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ಪ್ರಥಮ ಹಾಗೂ ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ.

ಸಂತೋಷ್ ಪಾಟೀಲ್ (ಸಿಪಿಐ, ಶಿಕಾರಿಪುರ): ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪ್ರಥಮ, ಶಾಟ್‌ಪುಟ್ ಮತ್ತು ಜಾವೆಲಿನ್ ಥ್ರೋನಲ್ಲಿ ಪ್ರಥಮ, 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ.

ಯುವರಾಜ್ (ಆರ್‌ಪಿಐ, ಡಿಎಆರ್ ಶಿವಮೊಗ್ಗ): 9 ಎಂಎಂ ಪಿಸ್ತೂಲ್‌ನಲ್ಲಿ ದ್ವಿತೀಯ, 100 ಮೀಟರ್ ಓಟ ಹಾಗೂ ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ.

ಶಿವಪ್ರಕಾಶ್ (ಪಿಐ, ಹೊಳಲೂರು ಠಾಣೆ): ಶಾಟ್‌ಪುಟ್‌ನಲ್ಲಿ ದ್ವಿತೀಯ ಸ್ಥಾನ.

ಮಂಜುನಾಥ್ (ಪಿಐ, ಶಿವಮೊಗ್ಗ ಠಾಣೆ): ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ.

ರಾಘವೇಂದ್ರ ಕಾನಡಿಕೆ (ಪಿಐ, ಶಿವಮೊಗ್ಗ ಗ್ರಾಮಾಂತರ): ಹರ್ಡಲ್ಸ್‌ನಲ್ಲಿ ಪ್ರಥಮ, 5.56 ರೈಫಲ್ ಶೂಟಿಂಗ್‌ನಲ್ಲಿ ತೃತೀಯ ಸ್ಥಾನ.

ಮಹಂತೇಶ್ ಲಂಬಿ (ಸಿಪಿಐ, ಸೊರಬ): 5.56 ರೈಫಲ್ ಶೂಟಿಂಗ್‌ನಲ್ಲಿ ಪ್ರಥಮ ಸ್ಥಾನ.

ಸಂತೋಷ್ ಕುಮಾರ್ (ಪಿಐ, ವಿನೋಬನಗರ ಠಾಣೆ): 5.56 ರೈಫಲ್ ಶೂಟಿಂಗ್‌ನಲ್ಲಿ ದ್ವಿತೀಯ ಸ್ಥಾನ.

45 ವರ್ಷ ಮೇಲ್ಪಟ್ಟ ಅಧಿಕಾರಿಗಳ ವಿಭಾಗ

ಎಂ.ಐ. ಗೌಡಪ್ಪ ಗೌಡ (ಸಿಪಿಐ, ಹೊಸನಗರ): 100 ಮೀಟರ್ ಓಟದಲ್ಲಿ ಪ್ರಥಮ, ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ.

ಸೋಮಶೇಖರಪ್ಪ (ಆರ್‌ಪಿಐ, ಡಿಎಆರ್ ಶಿವಮೊಗ್ಗ): 9 ಎಂಎಂ ಪಿಸ್ತೂಲ್‌ನಲ್ಲಿ ಪ್ರಥಮ, 100 ಮೀಟರ್ ಓಟ ಮತ್ತು ಶಾಟ್‌ಪುಟ್‌ನಲ್ಲಿ ದ್ವಿತೀಯ ಸ್ಥಾನ.

ಹರೀಶ್ ಪಾಟೀಲ್ (ಪಿಐ, ಕೋಟೆ ಠಾಣೆ): ಶಾಟ್‌ಪುಟ್‌ನಲ್ಲಿ ಪ್ರಥಮ, ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ.

ಆರ್.ಆರ್. ಪಾಟೀಲ್ (ಪಿಐ, ಶಿಕಾರಿಪುರ ಠಾಣೆ): ಶಾಟ್‌ಪುಟ್‌ನಲ್ಲಿ ತೃತೀಯ ಸ್ಥಾನ.

ರವಿ ಪಾಟೀಲ್ (ಪಿಐ, ಜಯನಗರ ಪೊಲೀಸ್ ಠಾಣೆ, ಶಿವಮೊಗ್ಗ): ಜಾವೆಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ.

ಚಿದಾನಂದ (ಪಿಐ, ಭದ್ರಾವತಿ ಗ್ರಾಮಾಂತರ ಠಾಣೆ): ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ.

ಯುವರಾಜ್ (ಪಿಐ, ತುಂಗನಗರ ಠಾಣೆ): ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ರನ್ನರ್ ಅಪ್, 9 ಎಂಎಂ ಪಿಸ್ತೂಲ್‌ನಲ್ಲಿ ತೃತೀಯ ಸ್ಥಾನ.

ಹಿರಿಯ ಪೊಲೀಸ್ ಅಧಿಕಾರಿಗಳ ವಿಭಾಗ

ಶೀಲವಂತ (ಡಿವೈಎಸ್ಪಿ, ಶಿವಮೊಗ್ಗ ಎ ವಿಭಾಗ): ಹರ್ಡಲ್ಸ್‌ನಲ್ಲಿ ದ್ವಿತೀಯ, ಶಾಟ್‌ಪುಟ್ ಮತ್ತು ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ.

ಪ್ರಕಾಶ್ ರಾಥೋಡ್ (ಡಿವೈಎಸ್ಪಿ, ಭದ್ರಾವತಿ): ಜಾವೆಲಿನ್ ಥ್ರೋನಲ್ಲಿ ದ್ವಿತೀಯ, ಬ್ಯಾಡ್ಮಿಂಟನ್ ಡಬಲ್ಸ್ ಮತ್ತು ಸಿಂಗಲ್ಸ್‌ನಲ್ಲಿ ರನ್ನರ್ ಅಪ್, ಡಿಸ್ಕಸ್ ಥ್ರೋನಲ್ಲಿ ತೃತೀಯ ಸ್ಥಾನ.

ಕೇಶವ (ಡಿವೈಎಸ್ಪಿ, ಶಿಕಾರಿಪುರ): ಡಿಸ್ಕಸ್ ಥ್ರೋ ಮತ್ತು 9 ಎಂಎಂ ಪಿಸ್ತೂಲ್ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ.

ಸಂಜೀವ್ ಕುಮಾರ್ (ಡಿವೈಎಸ್ಪಿ, ಶಿವಮೊಗ್ಗ ಬಿ ವಿಭಾಗ): 5.56 ರೈಫಲ್ ಶೂಟಿಂಗ್‌ನಲ್ಲಿ ದ್ವಿತೀಯ, 100 ಮೀಟರ್ ಓಟ, ಹರ್ಡಲ್ಸ್ ಮತ್ತು 9 ಎಂಎಂ ಪಿಸ್ತೂಲ್ ಶೂಟಿಂಗ್‌ನಲ್ಲಿ ತೃತೀಯ ಸ್ಥಾನ.

ಡಾ. ಬೆನಕ ಪ್ರಸಾದ್: ಡಿಸ್ಕಸ್ ಥ್ರೋ, ಬ್ಯಾಡ್ಮಿಂಟನ್ ಹಾಗೂ 5.56 ರೈಫಲ್ ವಿಭಾಗಗಳಲ್ಲಿ ಪ್ರಥಮ ಸ್ಥಾನ. 100 ಮೀಟರ್ ಓಟ, ಶಾಟ್‌ಪುಟ್ ಮತ್ತು ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ರನ್ನರ್ ಅಪ್.

ದಿಲೀಪ್ (ಡಿವೈಎಸ್ಪಿ, ಡಿಎಆರ್ ಶಿವಮೊಗ್ಗ): 100 ಮೀಟರ್ ಓಟ, ಶಾಟ್‌ಪುಟ್, ಜಾವೆಲಿನ್, 9 ಎಂಎಂ ಪಿಸ್ತೂಲ್ ಮತ್ತು ಬ್ಯಾಡ್ಮಿಂಟನ್ ಸಿಂಗಲ್ಸ್ ಸೇರಿದಂತೆ ಐದು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ.

ಡಿಪಿಒ ಕಚೇರಿ ಸಿಬ್ಬಂದಿಯ ಸಾಧನೆ

ಡಿಪಿಒ ಕಚೇರಿಯ ಎಸ್‌ಡಿಎ ಮೋಹನ್ ಮತ್ತು ಎಫ್‌ಡಿಎ ಶಾಶ್ವತ್ ಅವರು ಬ್ಯಾಡ್ಮಿಂಟನ್ ಡಬಲ್ಸ್‌ನಲ್ಲಿ ವಿಜೇತರಾದರು. ಡಿಪಿಒ ಕಚೇರಿಯ ಅನಿತಾ ಅವರು ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ಇತರೆ ಸ್ಪರ್ಧೆಗಳು: ಬಾಬ್ ಇನ್ ದಿ ಸಿಟಿ

ಗೆಸ್ಟ್ ವೆಂಕಟೇಶ್ ಬಾಂಬ್ ಇನ್ ದಿ ಸಿಟಿ ಸ್ಪರ್ಧೆಯಲ್ಲಿ ಸುಮಾ (ಪ್ರಸನ್ನ ಕುಮಾರ್ ಅವರ ಪತ್ನಿ) ಪ್ರಥಮ, ಸವಿತಾ (ಚಂದನ್ ನಾಯಕ್ ಅವರ ಪತ್ನಿ) ದ್ವಿತೀಯ ಹಾಗೂ ಶಶಿಕಲಾ (ಪ್ರಕಾಶ್ ನಾಯಕ್ ಅವರ ಪತ್ನಿ) ತೃತೀಯ ಸ್ಥಾನ ಪಡೆದರು.

ವಾಲಿಬಾಲ್ ಮತ್ತು ಕಬಡ್ಡಿಯಲ್ಲಿ ತಂಡಗಳ ಸಾಧನೆ

ವಾಲಿಬಾಲ್ ಪಂದ್ಯಾವಳಿಯಲ್ಲಿ ಭದ್ರಾವತಿ ತಂಡ ಪ್ರಥಮ ಸ್ಥಾನ ಗಳಿಸಿದರೆ, ತೀರ್ಥಹಳ್ಳಿ ಉಪವಿಭಾಗ ರನ್ನರ್ ಅಪ್ ಆಯಿತು.

ಕಬಡ್ಡಿ ಪಂದ್ಯಾವಳಿಯಲ್ಲಿ ಶಿವಮೊಗ್ಗ ಡಿಎಆರ್ ಘಟಕ ಪ್ರಥಮ ಸ್ಥಾನ ಗಳಿಸಿತು. ಸಾಗರ ತಂಡ ದ್ವಿತೀಯ ಸ್ಥಾನ ಪಡೆಯಿತು. ಸಾಗರ ಮತ್ತು ಡಿಎಆರ್ ತಂಡಗಳ ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು.

14 ದೈಹಿಕ ಶಿಕ್ಷಕರಿಗೆ ಗೌರವ

ಮೂರು ದಿನಗಳ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ 14 ದೈಹಿಕ ಶಿಕ್ಷಕರಿಗೆ ಪೊಲೀಸ್ ಇಲಾಖೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕರಾದ ಗುರುಮೂರ್ತಿ ಗೌಡ, ದೇಸಾಯಿ ಸೇರಿದಂತೆ ನಾಗರಾಜ್, ಜಯಂತ್, ಯೋಗೇಶ್ ನಾಯಕ್, ಪರಮೇಶ್ವರಪ್ಪ, ಷಣ್ಮುಖಪ್ಪ, ಅಜಯ್, ರವಿ, ಉಮೇಶ್ವರಪ್ಪ, ರವಿ ಎಚ್., ಮನೋಹರ್ ಪಿ.ಆರ್., ಹರ್ಷ ಹಾಗೂ ಲೋಕೇಶ್ ಮತ್ತಿತರರು ತೀರ್ಪುಗಾರರಾಗಿ ಸಹಕರಿಸಿದ್ದರು.

ಪೊಲೀಸ್ ಸಿಬ್ಬಂದಿಗೆ ಐಜಿಪಿ ಅಭಿನಂದನೆ

Police, sports

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪೊಲೀಸ್ ಪೂರ್ವ ವಲಯದ ಐಜಿಪಿ ಸತೀಶ್ ಕುಮಾರ್ ಅವರು, ಮೂರು ದಿನಗಳ ಕಾಲ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟವನ್ನು ಉತ್ತಮ ಶಿಸ್ತು, ಶ್ರದ್ಧೆ ಹಾಗೂ ಉತ್ಸಾಹದಿಂದ ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯ ಕಾರ್ಯವೈಖರಿ ಉತ್ತಮವಾಗಿದ್ದು, ದೊಡ್ಡ ಮಟ್ಟದ ಗಲಭೆಗಳು ಹಾಗೂ ಕೋಮುಸಂಬಂಧಿತ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸ್ತುತ ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೆಚ್ಚಾಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಪೋಸ್ಟ್‌ಗಳು ಹಾಗೂ ನಕಾರಾತ್ಮಕ ಘಟನೆಗಳ ಕುರಿತು ಪೊಲೀಸರು ನಿರಂತರ ನಿಗಾ ವಹಿಸಬೇಕು. ಸಾರ್ವಜನಿಕವಾಗಿ ಸೂಕ್ತ ಮತ್ತು ಜವಾಬ್ದಾರಿಯುತ ಪ್ರತಿಕ್ರಿಯೆ ನೀಡುವ ಮೂಲಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸೂಚಿಸಿದರು.

ಪೊಲೀಸ್ ಇಲಾಖೆಯಲ್ಲಿ ಗಣಕೀಕರಣ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ಪ್ರತಿ ಪೊಲೀಸ್ ಠಾಣೆಯಲ್ಲಿಯೂ ಆ್ಯಪ್‌ಗಳ ಅಪ್‌ಡೇಟ್ ಹಾಗೂ ದತ್ತಾಂಶ ನಮೂದು ಕಾರ್ಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಈ ಮಾಹಿತಿಗಳು ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರ ಮಟ್ಟದಲ್ಲಿಯೂ ಪರಿಶೀಲನೆಗೆ ಒಳಪಡುತ್ತವೆ. ಆದ್ದರಿಂದ ತಾಂತ್ರಿಕ ವ್ಯವಸ್ಥೆಗಳ ಬಳಕೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು ಎಂದು ಸಲಹೆ ನೀಡಿದರು.

ಕ್ರೀಡಾಕೂಟದಲ್ಲಿ ವಿಜೇತರಾದ ಎಲ್ಲ ಕ್ರೀಡಾಪಟುಗಳು ಹಾಗೂ ಆಯೋಜನೆಗೆ ಶ್ರಮಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ತೀರ್ಪುಗಾರರನ್ನು ಅಭಿನಂದಿಸಿದರು.

Shivamogga DAR unit crowned overall champion of District Police Sports Meet   

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು