Advertisement

ಶಿವಮೊಗ್ಗದಲ್ಲಿ ಹಸು ಕಳ್ಳತನ ಪ್ರಕರಣ ಭೇದಿಸಿದ ಕುಂಸಿ ಪೊಲೀಸರು; ಐವರು ಆರೋಪಿಗಳ ಬಂಧನ-Kumsi police crack cow theft case in Shivamogga; five accused arrested

SUDDILIVE || SHIVAMOGGA

ಶಿವಮೊಗ್ಗದಲ್ಲಿ ಹಸು ಕಳ್ಳತನ ಪ್ರಕರಣ ಭೇದಿಸಿದ ಕುಂಸಿ ಪೊಲೀಸರು; ಐವರು ಆರೋಪಿಗಳ ಬಂಧನ-Kumsi police crack cow theft case in Shivamogga; five accused arrested    

Kumsi, police

ತಮ್ಮಡಿಹಳ್ಳಿಯಲ್ಲಿ 5 ಹಸುಗಳ ಕಳ್ಳತನ; ಚನ್ನಳ್ಳಿಯಲ್ಲಿ ಎತ್ತು ಕದ್ದ ಪ್ರಕರಣವೂ ಬೆಳಕಿಗೆ – ಗೂಡ್ಸ್ ವಾಹನ, ₹56 ಸಾವಿರ ನಗದು ವಶ


ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಸು ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ತಮ್ಮಡಿಹಳ್ಳಿ ಗ್ರಾಮದಲ್ಲಿ ಐದು ಹಸುಗಳನ್ನು ಕಳ್ಳತನ ಮಾಡಿರುವುದರ ಜೊತೆಗೆ, ಏಪ್ರಿಲ್ ತಿಂಗಳಲ್ಲಿ ಚನ್ನಳ್ಳಿ ಗ್ರಾಮದಲ್ಲಿ ಒಂದು ಎತ್ತನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಶೆಡ್‌ನಲ್ಲಿ ಕಟ್ಟಿದ್ದ ಐದು ಹಸುಗಳ ಕಳ್ಳತನ

ಶಿವಮೊಗ್ಗ ತಾಲ್ಲೂಕಿನ ತಮ್ಮಡಿಹಳ್ಳಿ ಗ್ರಾಮದ ಶಂಕರ್ ಎಂಬುವವರಿಗೆ ಸೇರಿದ ಜಮೀನಿನ ಶೆಡ್‌ನಲ್ಲಿ ಕಟ್ಟಿದ್ದ ಐದು ಹಸುಗಳನ್ನು 2026ರ ನವೆಂಬರ್ 14ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್.ಬಿ, ಐಪಿಎಸ್, 1ನೇ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಹಾಗೂ ಶಿವಮೊಗ್ಗ-ಬಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

 ವಿಶೇಷ ತಂಡದಿಂದ ಆರೋಪಿಗಳ ಪತ್ತೆ

ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ್.ಪಿ.ಎಸ್. ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು ತಾಂತ್ರಿಕ ಸಾಕ್ಷ್ಯಗಳು ಹಾಗೂ ಇತರೆ ಮಾಹಿತಿಗಳನ್ನು ಆಧರಿಸಿ ತನಿಖೆ ನಡೆಸಿತು. ತನಿಖೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಐವರು ಆರೋಪಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ವಿಚಾರಣೆ ವೇಳೆ ಆರೋಪಿಗಳು ತಮ್ಮಡಿಹಳ್ಳಿ ಗ್ರಾಮದಲ್ಲಿ ಐದು ಹಸುಗಳನ್ನು ಕಳ್ಳತನ ಮಾಡಿರುವುದಾಗಿ ಹಾಗೂ ಏಪ್ರಿಲ್ ತಿಂಗಳಲ್ಲಿ ಚನ್ನಳ್ಳಿ ಗ್ರಾಮದಲ್ಲಿ ಒಂದು ಎತ್ತನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಚನ್ನಳ್ಳಿ ಗ್ರಾಮದ ಎತ್ತು ಕಳ್ಳತನ ಪ್ರಕರಣವೂ ಈ ಹಿಂದೆ ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗೂಡ್ಸ್ ವಾಹನ, ₹56 ಸಾವಿರ ನಗದು ವಶ

ಕಳ್ಳತನಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳವು ಮಾಡಿದ್ದ ಹಸುಗಳನ್ನು ಮಾರಾಟ ಮಾಡಿದ್ದರಿಂದ ದೊರೆತ ₹56,000 ನಗದು ಹಣವನ್ನೂ ವಶಪಡಿಸಿಕೊಂಡು ತನಿಖೆಗೆ ಅಳವಡಿಸಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಹಾಗೂ ಕಳುವಾದ ಮಾಲು ವಶಪಡಿಸಿಕೊಳ್ಳುವ ಕಾರ್ಯದಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.


ಆರೋಪಿಗಳ ವಿವರ

  • ಅಬ್ದುಲ್ ಸಾಧಿಕ್, 25 ವರ್ಷ, ತಂದೆ ಅಬ್ದುಲ್ ಕರೀಂ, ಆಯನೂರು ಗ್ರಾಮ.
  • ಶಫೀವುಲ್ಲಾ, 49 ವರ್ಷ, ತಂದೆ ಅಬ್ದುಲ್ ಜಲೀಲ್ ಸಾಬ್, 3ನೇ ಕ್ರಾಸ್, ರಾಗಿಗುಡ್ಡ ಬಲಭಾಗ, ಶಿವಮೊಗ್ಗ.
  • ಸಯ್ಯದ್ ನವೀದ್, 30 ವರ್ಷ, ತಂದೆ ಸಯ್ಯದ್ ಮುಸ್ತಾಫ್, 2ನೇ ಕ್ರಾಸ್, ವಾದಿಹುದಾ, ಊರುಗಡೂರು ಅಂಚೆ, ಶಿವಮೊಗ್ಗ.
  • ಸೈಯದ್ ಯಾಸೀನ್, 29 ವರ್ಷ, ತಂದೆ ಸೈಯದ್ ಗೌಸ್, ದುರ್ಗಮ್ಮ ದೇವಸ್ಥಾನದ ಹತ್ತಿರ, ಆಯನೂರು ಕೋಹಳ್ಳಿ ಗ್ರಾಮ.
  • ನಯಾಜುಲ್ಲ, 30 ವರ್ಷ, ತಂದೆ ಸೈಯದ್ ಶಬ್ಬಿರ್, ಶಾಮಿಲ್ ರಸ್ತೆ, ಆಯನೂರು ಗ್ರಾಮ, ಶಿವಮೊಗ್ಗ ತಾಲ್ಲೂಕು.

 ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ತಂಡ

ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ್.ಪಿ.ಎಸ್. ಅವರ ನೇತೃತ್ವದಲ್ಲಿ ಕುಂಸಿ ಠಾಣೆಯ ಪಿಎಸ್‌ಐ ಪಾರ್ವತಿಬಾಯಿ, ಹೆಡ್ ಕಾನ್‌ಸ್ಟೇಬಲ್ ಪ್ರಕಾಶ್ (ಸಿಹೆಚ್‌ಸಿ 400), ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶಶಿಧರ (ಸಿಪಿಸಿ 1503), ಮಂಜುನಾಥ (ಸಿಪಿಸಿ 1430), ಬುರಾನ್ ದೀನ್ ಗಡೇಕಾರ್ (ಸಿಪಿಸಿ 1875), ಜೀಪ್ ಚಾಲಕ ಶಿವಪ್ಪ (ಎ.ಹೆಚ್.ಸಿ 20) ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ್ ಮತ್ತು ಇಂದ್ರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.

Kumsi police crack cow theft case in Shivamogga; five accused arrested    

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು