Advertisement

ಶಿವಮೊಗ್ಗದಲ್ಲಿ ನಾಳೆ ಮಾಂಸ ಮಾರಾಟ ನಿಷೇಧ; ಅಂಗಡಿಗಳನ್ನು ಬಂದ್ ಮಾಡಲು ಪಾಲಿಕೆ ಸೂಚನೆ- Meat sale banned in Shivamogga tomorrow; Municipal Corporation orders shops to close

SUDDILIVE || SHIVAMOGGA

ಶಿವಮೊಗ್ಗದಲ್ಲಿ ನಾಳೆ ಮಾಂಸ ಮಾರಾಟ ನಿಷೇಧ; ಅಂಗಡಿಗಳನ್ನು ಬಂದ್ ಮಾಡಲು ಪಾಲಿಕೆ ಸೂಚನೆ- Meat sale banned in Shivamogga tomorrow; Municipal Corporation orders shops to close   

Meat, ban


ಶಿವಮೊಗ್ಗ: ಸೇಂಟ್ ಟಿ.ಎಲ್. ವಾಸ್ ವಾನಿ ಅವರ ಜನ್ಮದಿನದ ಅಂಗವಾಗಿ ನವೆಂಬರ್ 25ರ ಬುಧವಾರ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯು 2026ನೇ ಸಾಲಿನ ಮಾಂಸರಹಿತ ದಿನಗಳ ಪಟ್ಟಿಯನ್ನು ಜನವರಿ 29ರಂದು ಪ್ರಕಟಿಸಿದ್ದು, ಅದರಂತೆ ನವೆಂಬರ್ 25ರಂದು ಮಾಂಸ ಮಾರಾಟ ನಿಷೇಧಿತ ದಿನವೆಂದು ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮಾರಾಟದ ಅಂಗಡಿಗಳ ಮಾಲೀಕರು ನಾಳೆ ತಮ್ಮ ಅಂಗಡಿಗಳನ್ನು ಕಡ್ಡಾಯವಾಗಿ ಬಂದ್ ಮಾಡಿ ಆದೇಶ ಪಾಲಿಸುವಂತೆ ಪಾಲಿಕೆ ಸೂಚಿಸಿದೆ.

ನಿಷೇಧದ ಆದೇಶವನ್ನು ಉಲ್ಲಂಘಿಸಿ ಪ್ರಾಣಿವಧೆ ಅಥವಾ ಮಾಂಸ ಮಾರಾಟ ನಡೆಸುವ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Meat sale banned in Shivamogga tomorrow; Municipal Corporation orders shops to close

ಸುದ್ದಿಲೈವ್ ಜಾಹೀರಾತು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು