ನಿದ್ದೆ ಕೆಡೆಸುತ್ತಾ ರಾತ್ರಿಯ ಮಳೆ?




ಸುದ್ದಿಲೈವ್/ಶಿವಮೊಗ್ಗ

ಮತ್ತೆ ಮಳೆ ಅಬ್ಬರಿಸಿದೆ. ಅ.20 ರಂದು ಬೆಳಿಗ್ಗಿನ ಜಾವ ಅಬ್ಬರಿಸಿದ ಮಳೆ ಎರಡು ತಾಸಿನಲ್ಲಿ ನಗರವನ್ನೇ ಆಪೋಶನ ತೆಗೆದುಕೊಳ್ಳುವಂತೆ ಆರ್ಭಟಿಸಿತ್ತು.‌ ಆದರೆ ಈಗ ಮತ್ತೆ ಮಳೆ ಆರ್ಭಟಿಸುತ್ತಿದೆ. 

ರಾತ್ರಿ ಸುಮಾರು 11 ಗಂಟೆಯ ನಂತರದ ಮಳೆ ನಿರಂತರವಾಗಿ ಸುರಿಯಲಾರಂಭಿಸಿದೆ. ಬೆಳಿಗ್ಗೆ, ಮಧ್ಯಹ್ನ ಹಾಗೂ ಸಂಜೆಯೂ ಮೌನವಾಗಿದ್ದ ಮಳೆ ರಾತ್ರಿಯ ವೇಳೆಗೆ  ಮತ್ತೊಮ್ಮೆ ಆರ್ಭಟಿಸುತ್ತಿದೆ. ಇದರಿಂದ ಮತ್ತೆ ಆತಂಕವನ್ನು ಸೃಷ್ಠಿಸುವ ಸಾಧ್ಯತೆ ಇದೆ. 

ರಾಜಾಕಾಲುವೆಗಳು, ಚರಂಡಿಗಳು ಮತ್ತೆ ಬ್ಲಾಕ್ ಆಗಿ ಮನೆಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಗುಡುಗು ಮತ್ತು ಮಿಂಚಿನೊಂದಿಗೆ ಸುರಿಯುತ್ತಿರುವ ಮಳೆ ನಿರಂತರವಾದರೆ ಜನರ ನಿದ್ದೆ ಕಡೆಸುವ ಎಲ್ಲಾ ಲಕ್ಷಣವನ್ನೂ ತೋರುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close