SUDDILIVE || SHIVAMOGGA
ಮೆಗ್ಗಾನ್ ಔಷಧ ದಾಸ್ತಾನುಗಳ ಮೇಲೆ ಲೋಕಾಯುಕ್ತ ದಾಳಿ-Lokayukta raids Meggan's drug stockpiles
ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿಯವರ ನೇತೃತ್ವದಲ್ಲಿ ಮೆಗ್ಗಾನ್ ಆಸ್ಪತ್ರೆಯ ಔಷಧ ದಾಸ್ತಾನು ಮೇಲೆ ದಾಳಿ ನಡೆಸಲಾಗಿದೆ. ದಿಡೀರ್ ದಾಳಿಯಲ್ಲಿ 3.5 ಲಕ್ಷ ಔಷಧಿಗಳು ಎಂ ಆರ್ ಪಿ ದರ ಹೊಂದಿರುವುದು ಪತ್ತೆಯಾಗಿದ್ದು, ಇವುಗಳನ್ನ ವಶಕ್ಕೆ ಪಡೆಯಲಾಗಿದೆ.
ಇಂದು ಸಂಜೆ ಮೆಗ್ಗಾನ್ ನ ಔಷಧ ದಾಸ್ತಾನುವಿನ್ನಲ್ಲಿದ್ದ ಫಾರ್ಮಸಿಸ್ಟ್ ಗೋಪಿನಾಥ ಎಂಬುವರನ್ನ ಕೆಲ ಔಷಧಗಳ ಬಗ್ಗೆ ಲೋಕಾಯುಕ್ತ ವಿಚಾರಣೆ ನಡೆಸಿದೆ. ಈ ವೇಳೆ ಸಮಂಜಸ ಉತ್ತರ ನೀಡಿಲ್ಲ. ದಾಸ್ತಾನುವಿನಲ್ಲಿದ್ದ ಔಷಧಗಳ ದಾಖಲಾತಿಗಳಿಲ್ಲದೆ ಇರುವುದು. ಔಷಧ ಮೇಲೆ Not for sale ಎಂದು ಸಹ ನಮೂದಿಸದೆ ಇರುವುದು ಸಹ ಕಂಡು ಬಂದಿದೆ.
ಎಲ್ಲಾ ಔಷಧಗಳ ಬಗ್ಗೆ ಎಂಆರ್ ಪಿ ನಮೂದಿಸಿರುವುದು ಸಹ ಪತ್ತೆಯಾಗಿದೆ. ಇವುಗಳ ಬಗ್ಗೆ ಸಮಂಜಸ ಉತ್ತರ ನೀಡದ ಕಾರಣ ಲೋಕಾಯುಕ್ತ 3.5 ಲಕ್ಷ ರೂ. ಮೌಲ್ಯದ ಔಷಧಗಳನ್ನ ವಶಕ್ಕೆ ಪಡೆದಿದೆ. ತನಿಖೆಯನ್ನ ಮುಂದುವರೆಸಿದೆ.
Lokayukta raids Meggan