ಉಪನೋಂದಣಿ ಕಚೇರಿಯು ಇನ್ನು ಮುಂದೆ ರಜಾ ದಿನಗಳಲ್ಲೂ ಕಾರ್ಯನಿರ್ವಹಣೆ-Sub-Registration Office will now function even on holidays

SUDDILIVE || SHIVAMOGGA

ಉಪನೋಂದಣಿ ಕಚೇರಿಯು ರಜಾ ದಿನಗಳಲ್ಲಿಯೂ  ಕಾರ್ಯನಿರ್ವಹಣೆ-The Sub-Registration Office will now function even on holidays.

Sub-registration, office


ಜಿಲ್ಲೆಯ ಎಲ್ಲಾ ಉಪನೋಂದಣಿ ಕಚೇರಿ (Sub-registar office)ಯು ಇನ್ನು ಮುಂದೆ ಭಾನುವಾರ, ಎರಡನೆ ಶನಿವಾರ ಮತ್ತು ನಾಲ್ಕನೇ ಶನಿವಾರವೂ ಕೆಲಸ ನಿರ್ವಹಿಸಲಿದೆ. 

ಗ್ರಾಮಾಂತರ ಭಾಗದ ಉಪನೋಂದಣಿ ಕಚೇರಿಗಳು ಹೇಗೆ ಕೆಲಸ ಮಾಡ್ತಾವೆ ಎಂಬುದು ಮಾಹಿತಿ ಅಸ್ಪಷ್ಟವಿದೆ. ಆದರೆ ವರ್ಕಿಂಗ್ ಡೇಸ್ ಗಳಲ್ಲೇ ಇನ್ನೂ ನೆಟ್ಟಗೆ ಕೆಲಸ ಮಾಡದ ಕಚೇರಿಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಇನ್ನೂ ರಜಾ ದಿನಗಳಲ್ಲೂ ಕೆಲಸ ಮಾಡುವುದಾಗಿ ಹೇಳಿಕೆ ನೀಡಿರುವುದು ಅಚ್ಚರಿ‌ಮೂಡಿಸಿದೆ. 

ಎನಿವೇ! ಪ್ರಕಟಣೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಅನಿವಾರ್ಯವಾಗಿ ಪ್ರಕಟಿಸಲಾಗುತ್ತಿದೆ.  ಜೂನ್ ಮಾಹೆಯಲ್ಲಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಶಿವಮೊಗ್ಗ ಉಪನೋಂದಣಿ ಕಚೇರಿ ಜೂ. 01, ತೀರ್ಥಹಳ್ಳಿ ಉಪನೋಂದಣಿ ಕಚೇರಿ ಜೂ.08, ಶಿಕಾರಿಪುರ ಉಪನೋಂದಣಿ ಕಚೇರಿ ಜೂ.14, ಸೊರಬ ಉಪನೋಂದಣಿ ಕಚೇರಿ ಜೂ.15, ಸಾಗರ ಉಪನೋಂದಣಿ ಕಚೇರಿ ಜೂ.22, ಭದ್ರಾವತಿ ಉಪನೋಂದಣಿ ಕಚೇರಿ ಜೂ.28 ಹಾಗೂ ಹೊಸನಗರ ಉಪನೋಂದಣಿ ಕಚೇರಿ ಜೂ.29 ರಂದು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Sub-Registration Office will now function even on holidays.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close