ಶಿವಮೊಗ್ಗದಲ್ಲಿ ಇನ್ನುಮುಂದೆ ನಿಯಂತ್ರಣ ಗೊಳ್ಳುತ್ತಾ ಕೋಮು ಗಲಭೆಗಳು?Are communal riots coming under control?

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಇನ್ನುಮುಂದೆ ನಿಯಂತ್ರಣ ಗೊಳ್ಳುತ್ತಾ ಕೋಮು ಗಲಭೆಗಳು?Are communal riots coming under control?

Communal, roits


ಸರ್ಕಾರ ಕೋಮು ನಿಗ್ರಹ ದಳ ಸ್ಥಾಪನೆಯ ಘೋಷಣೆಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ನಿಧಾನವಾಗಿ ಘಟಕ ಕಾರ್ಯ ನಿರ್ವಹಣೆ ಆರಂಭಿಸಿದೆ ಅಧಿಕೃತವಾಗಿ ಇನ್ನು ಕಚೇರಿಯನ್ನು ತಿಳಿಸದಿದ್ದರೂ ಮಾಹಿತಿಯ ಪ್ರಕಾರ ಶಿವಮೊಗ್ಗದ ಹಳೆ ಜೈಲಿನಲ್ಲಿ ತನ್ನ ಕಾರ್ಯ ಆರಂಭ ಆರಂಭಿಸಿದೆ.

ಮೂರು ಜಿಲ್ಲೆಯಿಂದ 248 ಜನ ಸಿಬ್ಬಂದಿಯನ್ನ ಒಳಗೊಂಡ ದಳದಲ್ಲಿ ಶಿವಮೊಗ್ಗದ ಘಟಕದಲ್ಲಿ 80 ಜನರನ್ನ ಒಳಗೊಂಡಿದೆ. ಪ್ರತಿ ತಾಲೂಕುಗಳಿಗೂ ಸಿಬ್ಬಂದಿ ನಿಯೋಜಿಸುವ ಸಾಧ್ಯತೆಯಿದೆ. ನಿಗ್ರಹ ದಳದಿಂದ ಶಿವಮೊಗ್ಗದಲ್ಲಿ ಶಾಂತಿ ನೆಲೆಸುವ ಸಾಧ್ಯತೆಯಿದೆ. 

ಇದರ ಕಾರ್ಯವೈಖರಿಯ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲದಿದ್ದರೂ, ಶಿವಮೊಗ್ಗದಲ್ಲಿ ಎಸ್ಪಿ ಅವರ ನೆತೃತ್ವದ ಸೂಪರ್ ವಿಜನ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಸಧ್ಯಕ್ಕೆ ಮಂಗಳೂರು ಆಯುಕ್ತರ ಅಡಿಯಲ್ಲಿ ಸಧ್ಯಕ್ಕೆ ಕಾರ್ಯ ನಿರ್ವಹಿಸುವ ನಿಗ್ರಹದಳ ಪಶ್ಚಿಮ ಪೊಲೀಸ್ ವಿಭಾಗದ ಐಜಿಗೆ ಮಾಹಿತಿ ನೀಡಬೇಕಿದೆ. ಒಂದು ಒಳ್ಳೆಯ ಕಾನ್ಸೆಪ್ಟ್ ಅಡಿ ಈ ದಳ‌ ಶಿವಮೊಗ್ಗಕ್ಕೆ ಲಗ್ಗೆಯಿಟ್ಟಿದೆ. 

ಆದರೂ ಹಿಂದೂ ಕಾರ್ಯಕರ್ತರಲ್ಲಿ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ನಡುಕ ಹುಟ್ಟಿಸುವಂತೆ ಕಾರ್ಯಮಾಡದೆ ಸಮಗ್ರ ಕೋಮು ಸೌಹಾರ್ಧತೆ ಕಾಪಾಡಿದ್ದಲ್ಲಿ ಶಿವಮೊಗ್ಗದಲ್ಲಿ ಶಾಂತಿ ಕಾಪಾಡುವುದು ಪಕ್ಕ! ಮಾಹಿತಿಯ ಪ್ರಕಾರ ನಕ್ಸಲ್ ನಿಗ್ರಹದಳದಲ್ಲಿದ್ದವರೆ ಈ ಕೋಮು ನಿಗ್ರಹದಳದಲ್ಲಿರುವುದಾಗಿ ತಿಳಿದುಬಂದಿದೆ. 

ಕೋಮು ಸೌಹಾರ್ಧ ನಿಗ್ರಹದಳ ಪ್ರತ್ಯೇಕ ವಿಂಗ್ ಆಗಿರುವುದರಿಂದ ಕೋಮು ಗಲಭೆಯನ್ನ ನಿಯಂತ್ರಿಸಲಿದೆ. ರಾಜಕೀಯ ಹೊರತುಪಡಿಸಿ ಈ ದಳ ಕಾರ್ಯನಿರ್ವಹಿಸಿದರೆ ಉತ್ತಮ ಕಾರ್ಯನಿರ್ವಹಿಸುವಲ್ಲಿ ಸಂಶಯವಿಲ್ಲ.  

communal riots coming under control?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close